AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​​ಎಎಲ್ ಮೇಲೆ ಕಣ್ಣಿಟ್ಟಿಲ್ಲ; ಲೇಪಾಕ್ಷಿ-ಮಡಕಸಿರಾವನ್ನು ಏರೋಸ್ಪೇಸ್ ಹಬ್ ಮಾಡುವ ಗುರಿ: ಚಂದ್ರಬಾಬು ನಾಯ್ಡು ಸ್ಪಷ್ಟನೆ

Andhra Pradesh CM N Chandrababu Naidu clarifies on HAL matter: ಕೆಲ ಎಚ್​​ಎಎಲ್ ಪ್ರಾಜೆಕ್ಟ್​​ಗಳನ್ನು ಕರ್ನಾಟಕದಿಂದ ಆಂಧ್ರಕ್ಕೆ ಸೆಳೆಯಲು ಯತ್ನಿಸಲಾಗುತ್ತಿದೆ ಎನ್ನುವ ಆರೋಪವನ್ನು ಚಂದ್ರಬಾಬು ನಾಯ್ಡು ತಳ್ಳಿಹಾಕಿದ್ದಾರೆ. ತಾನಾನ್ಯಾಕೆ ಇನ್ನೊಂದು ರಾಜ್ಯ ಯೋಜನೆಗಳನ್ನು ಕಿತ್ತುಕೊಳ್ಳಲಿ? ಯಾವತ್ತೂ ಕೂಡ ಅಂಥ ಕೆಲಸ ಮಾಡಿಲ್ಲ ಎಂದಿದ್ದಾರೆ. ಅನಂತಪುರಂ ಜಿಲ್ಲೆಯ ಲೇಪಾಕ್ಷಿ ಮಡಕಸಿರ ಪ್ರದೇಶವನ್ನು ಏರೋಸ್ಪೇಸ್ ಮತ್ತು ಡಿಫೆನ್ಸ್ ಹಬ್ ಆಗಿ ಮಾಡುವ ಗುರಿ ಇದೆ ಎಂದಿದ್ದಾರೆ.

ಎಚ್​​ಎಎಲ್ ಮೇಲೆ ಕಣ್ಣಿಟ್ಟಿಲ್ಲ; ಲೇಪಾಕ್ಷಿ-ಮಡಕಸಿರಾವನ್ನು ಏರೋಸ್ಪೇಸ್ ಹಬ್ ಮಾಡುವ ಗುರಿ: ಚಂದ್ರಬಾಬು ನಾಯ್ಡು ಸ್ಪಷ್ಟನೆ
ಎನ್ ಚಂದ್ರಬಾಬು ನಾಯ್ಡು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 30, 2025 | 6:08 PM

Share

ವಿಜಯವಾಡ, ಮೇ 30: ಎಚ್​​ಎಎಲ್​ ನಡೆಸುತ್ತಿರುವ ಕೆಲ ಪ್ರಾಜೆಕ್ಟ್​​ಗಳನ್ನು ಆಂಧ್ರಕ್ಕೆ ವರ್ಗಾಯಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಎತ್ತಿರುವ ತಗಾದೆಯನ್ನು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು (N Chandrababu Naidu) ತಳ್ಳಿಹಾಕಿದ್ದಾರೆ. ಎಚ್​​ಎಎಲ್​ನ ಎಎಂಸಿಎ ಮತ್ತು ಎಲ್​​ಸಿಎ ತಯಾರಿಕಾ ಘಟಕಗಳನ್ನು (HAL AMCA and LCA projects) ಆಂಧ್ರಕ್ಕೆ ವರ್ಗಾಯಿಸುವ ಯಾವ ಪ್ರಸ್ತಾಪವೂ ತನ್ನ ಮುಂದಿಲ್ಲ. ತನಗೆ ಆ ಉದ್ದೇಶವೂ ಇಲ್ಲ. ಕರ್ನಾಟಕದಿಂದಲ್ಲ, ಯಾವ ರಾಜ್ಯಗಳಿಂದಲೂ ಉದ್ಯಮಗಳನ್ನು ಸೆಳೆಯುವ ಆಲೋಚನೆ ಇಲ್ಲ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.

ಆಂಂಧ್ರದ ಕಡಪ ಜಿಲ್ಲೆಯಲ್ಲಿ ನಡೆದ ಮಹಾನಾಡು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ, ಇವತ್ತಿನ ಎನ್​​ಡಿಟಿವಿ ಸಂದರ್ಶನದಲ್ಲೂ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಎಚ್​​ಎಎಲ್ ಯೋಜನೆಗಳನ್ನು ಕಸಿಯಲು ಯತ್ನಿಸುತ್ತಿದ್ದಾರಾ ಚಂದ್ರಬಾಬು ನಾಯ್ಡು?

ಇದನ್ನೂ ಓದಿ
Image
ಹೊಸ ದಾಖಲೆ ಬರೆದ ಭಾರತದ ಡಿಫೆನ್ಸ್ ಉತ್ಪಾದನೆ
Image
ಕರ್ನಾಟಕದ ಹೆಮ್ಮೆಯ ಎಚ್​​ಎಎಲ್ ಅನ್ನು ಕಸಿಯಲು ಹೊರಟಿತಾ ಆಂಧ್ರ?
Image
ಕರ್ನಾಟಕಕ್ಕೆ ದಕ್ಕಿದ ಏರ್​​ಬಸ್​ನ ಎಚ್125 ಹೆಲಿಕಾಪ್ಟರ್ ಘಟಕ
Image
ವಿಶ್ವದ ಬಲಿಷ್ಠ ಫೈಟರ್ ಜೆಟ್ ನಿರ್ಮಾಣಕ್ಕೆ ಭಾರತ ಹೆಜ್ಜೆ

‘ಆಂಧ್ರಪ್ರದೇಶಕ್ಕೆ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಅನ್ನು ತರುವುದು ನನ್ನ ಗುರಿ. ಇದು ಕರ್ನಾಟಕದ ಕೆಲ ನಾಯಕರಿಗೆ ಕಳವಳ ತಂದಿರಬಹುದು. ನನ್ನ ಇಡೀ ರಾಜಕೀಯ ವೃತ್ತಿಜೀವನದಲ್ಲಿ ಯಾವತ್ತೂ ಕೂಡ ಯಾರದ್ದೋ ಯೋಜನೆಯನ್ನು ಕಿತ್ತುಕೊಳ್ಳಲು ಯತ್ನಿಸಿಲ್ಲ. ನಾನು ಅಭಿವೃದ್ಧಿಪರ ಇದ್ದೇನೆ ಎಂದರೆ ಅದರರ್ಥ ಇನ್ನೊಂದು ರಾಜ್ಯಕ್ಕೆ ನಷ್ಟ ತಂದು ಬೆಳೆವಣಿಗೆ ಹೊಂದುವ ಇರಾದೆ ನನಗಿಲ್ಲ,’ ಎಂದು ಕಡಪದಲ್ಲಿ ನಾಯ್ಡು ಹೇಳಿದ್ಧಾರೆ.

ಕರ್ನಾಟಕದ ಗಡಿ ಭಾಗದಲ್ಲಿರುವ ಆಂಧ್ರದ ಅನಂತಪುರ ಜಿಲ್ಲೆಯ ಲೇಪಾಕ್ಷಿ-ಮಡಕಸಿರ ಪ್ರದೇಶದಲ್ಲಿ (Lepakshi Madakasira region) ಚಂದ್ರಬಾಬು ನಾಯ್ಡು ಅವರು ಎಚ್​​ಎಎಲ್ ಪ್ರಾಜೆಕ್ಟ್​​​ಗಳಿಗೆ 10,000 ಎಕರೆ ಜಾಗ ಕೊಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಕರ್ನಾಟಕ ಸರ್ಕಾರದ ಸಚಿವ ಎಂಬಿ ಪಾಟೀಲ್ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಕೇಂದ್ರ ಸರಕಾರದ ಬಳಿ ನಿಯೋಗ ಕಳುಹಿಸಿ ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದ್ದರು.

ಎಚ್​​ಎಎಲ್ ಪ್ರಾಜೆಕ್ಟ್​​ಗಳನ್ನು ಸೆಳೆಯುವ ಉದ್ದೇಶ ಇಲ್ಲ ಎಂದು ಇದೀಗ ಸ್ಪಷ್ಟಪಡಿಸಿರುವ ಆಂಧ್ರ ಮುಖ್ಯಮಂತ್ರಿಗಳು, ಲೇಪಾಕ್ಷಿ-ಮಡಕಸಿರಾ ಪ್ರದೇಶದಲ್ಲಿ ದೊಡ್ಡ ಉದ್ಯಮಗಳನ್ನು ನೆಲೆಗೊಳಿಸುವ ಉದ್ದೇಶ ಇರುವುದನ್ನು ಖಾತ್ರಿಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಏರ್​​ಕ್ರಾಫ್ಟ್ ಕಂಪನಿ ಏರ್​​ಬಸ್​ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕಕ್ಕೆ

ಎನ್​​ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಲೇಪಾಕ್ಷಿ- ಮಡಕಸಿರಾ ಪ್ರದೇಶವನ್ನು ಪ್ರಮುಖ ಏರೋಸ್ಪೇಸ್ ಮತ್ತು ಡಿಫೆನ್ಸ್ ಉದ್ಯಮಗಳ ಕೇಂದ್ರವನ್ನಾಗಿ ಮಾಡುವ ಉದ್ದೇಶ ಇದೆ. ಭಾರತದಲ್ಲಿ ವಿಮಾನ ತಯಾರಿಕೆಗೆ ಬಹಳ ಬೇಡಿಕೆ ಬರುತ್ತಿದೆ. ಡಿಫೆನ್ಸ್ ಉದ್ಯಮವೂ ಸಾಕಷ್ಟು ಬೆಳೆಯುತ್ತದೆ. ಈಗ ಬಹಳಷ್ಟು ಕಂಪನಿಗಳು ರಾಕೆಟ್, ಸೆಟಿಲೈಟ್​​ಗಳನ್ನು ಕಡಿಮೆ ಬೆಲೆ ತಯಾರಿಸಬಲ್ಲುವು. ಆಂಧ್ರದಲ್ಲಿ ಇಂಥ ಉದ್ಯಮಗಳನ್ನು ನೆಲೆಗೊಳಿಸುವ ಗುರಿ ಹೊಂದಿದ್ದೇನೆ’ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ