AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Airbus: ವಿಶ್ವದ ಅತಿದೊಡ್ಡ ಏರ್​​ಕ್ರಾಫ್ಟ್ ಕಂಪನಿ ಏರ್​​ಬಸ್​ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕಕ್ಕೆ

Tata Advanced Systems and Airbus jointly manufacture H-125 helicopter in Karnataka: ಟಾಟಾ ಅಡ್ವಾನ್ಸ್ಡ್ ಸಿಸ್ಟಂ ಮತ್ತು ಏರ್​​ಬಸ್ ಸಂಸ್ಥೆಗಳು ಕೋಲಾರದಲ್ಲಿ ಎಚ್-125 ಹೆಲಿಕಾಪ್ಟರ್​​ನ ಅಂತಿಮ ಅಸೆಂಬ್ಲಿ ಘಟಕ ಸ್ಥಾಪಿಸಲಿವೆ. ಫ್ರಾನ್ಸ್, ಅಮೆರಿಕ ಮತ್ತು ಬ್ರೆಜಿಲ್ ಬಳಿಕ ಭಾರತದಲ್ಲಿ ಮಾತ್ರವೇ ಎಚ್-125 ಹೆಲಿಕಾಪ್ಟರ್ ತಯಾರಿಕಾ ಘಟಕ ಸ್ಥಾಪನೆಯಾಗುತ್ತಿರುವುದು. ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ 7,40,000 ಚದರಡಿ ಜಾಗವನ್ನು ಸರ್ಕಾರ ನೀಡಿದೆ.

Airbus: ವಿಶ್ವದ ಅತಿದೊಡ್ಡ ಏರ್​​ಕ್ರಾಫ್ಟ್ ಕಂಪನಿ ಏರ್​​ಬಸ್​ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕಕ್ಕೆ
ಎಚ್125 ಹೆಲಿಕಾಪ್ಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 27, 2025 | 2:51 PM

Share

ಕೋಲಾರ, ಮೇ 27: ವಿಶ್ವದ ಅತಿದೊಡ್ಡ ಏರ್​​ಕ್ರಾಫ್ಟ್ ತಯಾರಿಕಾ ಕಂಪನಿ ಎನಿಸಿರುವ ಏರ್​ಬಸ್ ಸಂಸ್ಥೆ (Airbus) ಭಾರತದಲ್ಲಿ ವಿಮಾನ, ಹೆಲಿಕಾಪ್ಟರ್ ಇತ್ಯಾದಿಗಳನ್ನು ತಯಾರಿಸುತ್ತಿದೆ. ಅದರ ಜನಪ್ರಿಯ ಉತ್ಪನ್ನಗಳಲ್ಲಿ ಒಂದೆನಿಸಿದ ಎಚ್125 ಹೆಲಿಕಾಪ್ಟರ್​​ನ (H-125 civil helicopter) ಫೈನಲ್ ಅಸೆಂಬ್ಲಿ ಲೈನ್ ಘಟಕವನ್ನು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಸ್ಥಾಪಿಸಲು ಹೊರಟಿದೆ. ಆಂಧ್ರದ ಅನಂತಪುರ್ ಜಿಲ್ಲೆಯಲ್ಲೂ ಹೆಲಿಕಾಪ್ಟರ್ ಘಟಕ ಸ್ಥಾಪನೆಗೆ ಸ್ಥಳ ನೋಡಲಾಗುತ್ತಿತ್ತು. ಅಂತಿಮವಾಗಿ ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶವನ್ನು ಆಯ್ಕೆ ಮಾಡಿಲಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (ಟಿಎಎಸ್​​ಎಲ್) ಮತ್ತು ಏರ್​​ಬಸ್ ಸಂಸ್ಥೆಗಳು ಜಂಟಿಯಾಗಿ ಎಚ್125 ಹೆಲಿಕಾಪ್ಟರ್ ಅನ್ನು ನಿರ್ಮಿಸಲಿವೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆ ಇದೇ ವೇಮಗಲ್ ಪ್ರದೇಶದಲ್ಲಿ ಸೆಟಿಲೈಟ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿದೆ. ಈ ಕಾರಣಕ್ಕೆ ಎಚ್125 ಹೆಲಿಕಾಪ್ಟರ್ ಅಸೆಂಬ್ಲಿ ಲೈನ್ ಘಟಕವನ್ನು ಸ್ಥಾಪಿಸಲು ಇದೇ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು.

ಎಚ್-125 ಕ್ಲಾಸ್​​ನ ಹೆಲಿಕಾಪ್ಟರ್​​ಗಳು ಬಹಳ ಬೇಡಿಕೆಯಲ್ಲಿವೆ. ಮುಂದಿನ ಎರಡು ದಶಕಗಳಲ್ಲಿ ಈ ಪ್ರದೇಶದಲ್ಲಿ ವರ್ಷಕ್ಕೆ 500 ಹೆಲಿಕಾಪ್ಟರ್​​ಗಳ ಅವಶ್ಯಕತೆ ಬರಬಹುದೆನ್ನುವ ಅಂದಾಜಿದೆ. ಕೋಲಾರದಲ್ಲಿ ಸ್ಥಾಪನೆಯಾಗಲಿರುವ ಘಟಕದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್​​ಗಳ ತಯಾರಿಕೆಯ ಗುರಿ ಇದೆ. ಮುಂದಿನ ವರ್ಷಗಳಲ್ಲಿ ತಯಾರಿಕೆಯ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ
Image
ವಿಶ್ವದ ಬಲಿಷ್ಠ ಫೈಟರ್ ಜೆಟ್ ನಿರ್ಮಾಣಕ್ಕೆ ಭಾರತ ಹೆಜ್ಜೆ
Image
ಭಾರತದ ಬಿಎಫ್​​​ಎಸ್: ವಿಶ್ವದ ನಿಖರ ವೆದರ್ ಫೋರ್​​ಕ್ಯಾಸ್ಟಿಂಗ್ ಮಾಡಲ್
Image
ಫೀನಿಕ್ಸ್​​ನಂತೆ ಮರಳಿಬರುತ್ತಿರುವ ಅನಿಲ್ ಅಂಬಾನಿ
Image
ರಿನಿವಬಲ್ ಎನರ್ಜಿ ಸಾಮರ್ಥ್ಯ, 3ನೇ ಸ್ಥಾನದಲ್ಲಿ ಭಾರತ

ಇದನ್ನೂ ಓದಿ: ಐದನೇ ತಲೆಮಾರಿನ ಫೈಟರ್ ಜೆಟ್ ನಿರ್ಮಿಸಲು ಎಎಂಸಿಎ ಯೋಜನೆಗೆ ಸರ್ಕಾರ ಚಾಲನೆ

ಏರ್​​​ಬಸ್, ವಿಶ್ವದ ಅತಿದೊಡ್ಡ ಏರ್​​ಕ್ರಾಫ್ಟ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ

ಯೂರೋಪ್ ಮೂಲದ ಏರ್​​ಬಸ್ ಸಂಸ್ಥೆ ವಿಶ್ವದಲ್ಲಿ ಅತಿಹೆಚ್ಚು ಏರ್​​ಕ್ರಾಫ್ಟ್ ತಯಾರಿಸಿ ಮಾರುವ ಕಂಪನಿ. ಅಮೆರಿಕದ ಬೋಯಿಂಗ್​​ಗಿಂತಲೂ ಇದು ದೊಡ್ಡದು. ಎಚ್125 ಸಿವಿಲ್ ಹೆಲಿಕಾಪ್ಟರ್ ತಯಾರಿಸುವ ಘಟಕ ಭಾರತದಲ್ಲಿ ಇದೇ ಮೊದಲು ಶುರುವಾಗುತ್ತಿದೆ. ಫ್ರಾನ್ಸ್, ಬ್ರೆಜಿಲ್ ಮತ್ತು ಅಮೆರಿಕ ಬಳಿಕ ಬೇರೆ ದೇಶದಲ್ಲಿ ಸ್ಥಾಪನೆಯಾಗಲಿರುವ ಮೊದಲ ಘಟಕವೂ ಇದು. ಹೀಗಾಗಿ, ಕರ್ನಾಟಕ ಕೋಲಾರ ಜಿಲ್ಲೆಯು ವಿಶ್ವದ ಏರೋಸ್ಪೇಸ್ ಉದ್ಯಮದ ನಕ್ಷೆಯಲ್ಲಿ ಗುರುತಾಗಬಹುದು.

ಏರ್​ಬಸ್​​ನ ಈ ಹೆಲಿಕಾಪ್ಟರ್ ಘಟಕ ಪಡೆಯಲು ಆಂಧ್ರಪ್ರದೇಶ ಪೈಪೋಟಿ ನಡೆಸಿತ್ತು. ಆದರೆ, ಏರೋಸ್ಪೇಸ್ ಉದ್ಯಮದ ಇಕೋಸಿಸ್ಟಂ ಕರ್ನಾಟಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವುದು ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಂನ ವಿವಿಧ ಯೋಜನೆಗಳು ಇಲ್ಲಿಯೇ ಇರುವುದು ಕರ್ನಾಟಕಕ್ಕೆ ಎಚ್125 ಯುನಿಟ್ ಸಿಗಲು ಸಹಕಾರಿಯಾಗಿದೆ.

ಇದನ್ನೂ ಓದಿ: ಭಾರತದಿಂದ ಬಿಎಫ್​​ಎಸ್; ಇದು ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ವ್ಯವಸ್ಥೆ

ಕರ್ನಾಟಕ ಸರ್ಕಾರವು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ 7,40,000 ಚದರ ಅಡಿ ಜಾಗವನ್ನು ಟಿಎಎಸ್​​ಎಲ್​​ಗೆ ನೀಡಿದೆ. ಇಲ್ಲಿ ಏರ್​​ಕ್ರಾಫ್ಟ್ ಮ್ಯಾನುಫ್ಯಾಕ್ಚರಿಮಗ್, ಎಂಆರ್​​ಒ ಮತ್ತು ಫೈನಲ್ ಅಸೆಂಬ್ಲಿ ಲೈನ್ ಅನ್ನು ಸ್ಥಾಪಿಸಲಾಗುತ್ತದೆ.

ಏರ್​​ಬಸ್ ಸಂಸ್ಥೆಯ ಸಿ295 ಏರ್​​ಕ್ರಾಫ್ಟ್ ಅಸೆಂಬ್ಲಿ ಲೈನ್ ಗುಜರಾತ್​​ನ ವಡೋದರಾದಲ್ಲಿ ಸ್ಥಾಪನೆಯಾಗುತ್ತಿದೆ. ಈ ಯೋಜನೆಯಲ್ಲೂ ಏರ್​​ಬಸ್ ಜೊತೆ ಟಾಟಾ ಸಂಸ್ಥೆ ಕೈಜೋಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್