Anil Ambani: ಸದ್ದಿಲ್ಲದೆ ಅನಿಲ್ ಅಂಬಾನಿ ಕಂಬ್ಯಾಕ್; ಪವರ್, ಇನ್ಫ್ರಾ, ಡಿಫೆನ್ಸ್, ಫೈನಾನ್ಸ್ ಭರ್ಜರಿ ಬ್ಯುಸಿನೆಸ್
Anil Ambani making biggest comeback in the history: ದಿವಾಳಿ ಎದ್ದುಹೋಗಿದ್ದ ಅನಿಲ್ ಅಂಬಾನಿ ಈಗ ತಮ್ಮ ಹಳೆಯ ಖದರ್ಗೆ ಮರಳುತ್ತಿದ್ದಾರೆ. ಭಾರೀ ಬ್ಯುಸಿನೆಸ್ ನಡೆಯುವ ಕ್ಷೇತ್ರಗಳಲ್ಲಿ ಅವರ ಕಂಪನಿಗಳು ಹರಡಿವೆ. ಅವರ ರಿಲಾಯನ್ಸ್ ಗ್ರೂಪ್ ಅಡಿಯಲ್ಲಿ ರಿಲಾಯನ್ಸ್ ಪವರ್, ರಿಲಾಯನ್ಸ್ ಇನ್ಫ್ರಾ, ರಿಲಾಯನ್ಸ್ ಡಿಫೆನ್ಸ್, ರಿಲಾಯನ್ಸ್ ಹೋಮ್ ಫೈನಾನ್ಸ್ ಬ್ಯುಸಿನೆಸ್ಗಳು ಸಖತ್ ಆಗಿ ಬೆಳವಣಿಗೆ ಹೊಂದುತ್ತಿವೆ.

ನವದೆಹಲಿ, ಮೇ 26: ಮುಕೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ (Anil Ambani) ಒಂದು ಕಾಲದಲ್ಲಿ ಪೂರ್ಣ ಪಾಪರ್ ಆದಂಥವರು. ದೊಡ್ಡ ದೊಡ್ಡ ಬ್ಯುಸಿನೆಸ್ ಕೈಲಿದ್ದರೂ ದಿವಾಳಿ ಎದ್ದಿದ್ದರು. ಅವರ ಕಥೆ ಮುಗಿದೇ ಹೋಯಿತು ಎಂದುಕೊಂಡು ಕೆಲ ವರ್ಷಗಳೇ ಗತಿಸಿವೆ. ಈಗ ನೋಡನೋಡುತ್ತಿದ್ದಂತೆಯೇ ಅನಿಲ್ ಅಂಬಾನಿ ಬ್ಯುಸಿನೆಸ್ ಸಾಮ್ರಾಜ್ಯ ಬೆಳೆಯತೊಡಗಿದೆ. ಎಲ್ಲವೂ ಕೂಡ ಭಾರೀ ಬ್ಯುಸಿನೆಸ್ ನಡೆಯುವ ಕ್ಷೇತ್ರಗಳೇ. ಒಂದೊಂದೇ ದೃಢ ಹೆಜ್ಜೆ ಇಡುತ್ತಿರುವ ಅನಿಲ್ ಅಂಬಾನಿ ಮತ್ತೆ ವಿಶ್ವದ ಅಗ್ರಮಾನ್ಯ ಶ್ರೀಮಂತರ ಸಾಲಿಗೆ ಸೇರ್ಪಡೆಯಾದರೆ ಅಚ್ಚರಿ ಇಲ್ಲ.
ರಿಲಾಯನ್ಸ್ ಗ್ರೂಪ್ನಲ್ಲಿನ ಅವರ ಮೂರು ಕಂಪನಿಗಳ ಷೇರುಗಳು ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಬೇಡಿಕೆ ಪಡೆದಿವೆ. ರಿಲಾಯನ್ಸ್ ಪವರ್, ರಿಲಾಯನ್ಸ್ ಹೋಂ ಫೈನಾನ್ಸ್ ಮತ್ತು ರಿಲಾಯನ್ಸ್ ಇನ್ಫ್ರಾ ಷೇರುಬೆಲೆ ಹೆಚ್ಚಿದೆ.
ಇದನ್ನೂ ಓದಿ: ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ: ಚೀನಾದ ಶಿಯೋಮಿಯನ್ನು ಹಿಂದಿಕ್ಕಿದ ಐಫೋನ್
ಜರ್ಮನಿಗೆ ಮದ್ದುಗುಂಡು ಸರಬರಾಜು ಮಾಡಲಿರುವ ರಿಲಾಯನ್ಸ್ ಡಿಫೆನ್ಸ್
ರಿಲಾಯನ್ಸ್ ಡಿಫೆನ್ಸ್ ಸಂಸ್ಥೆ ಜರ್ಮನಿಯ ಕಂಪನಿಯೊಂದಕ್ಕೆ ಮದ್ದು ಗುಂಡುಗಳನ್ನು ಸರಬರಾಜು ಮಾಡುವ ಗುತ್ತಿಗೆ ಪಡೆದುಕೊಂಡಿದೆ. ಜರ್ಮನಿಯ ಶಸ್ತ್ರಾಸ್ತ್ರ ತಯಾರಕ ಸಂಸ್ಥೆಯಾದ ರೇನ್ಮೆಟಾಲ್ ಎಜಿಯೊಂದಿಗೆ ರಿಲಾಯನ್ಸ್ ಡಿಫೆನ್ಸ್ ಈ ಒಪ್ಪಂದ ಮಾಡಿಕೊಂಡಿರುವುದು ಮಹತ್ವದ ಸಂಗತಿ. ಮದ್ದುಗುಂಡುಗಳ ತಯಾರಿಕೆಗೆಂದು ಮಹಾರಾಷ್ಟ್ರದಲ್ಲಿ ಗ್ರೀನ್ಫೀಲ್ಡ್ ಘಟಕವನ್ನು ಅನಿಲ್ ಅಂಬಾನಿಯವರು ಸ್ಥಾಪಿಸಲಿದ್ದಾರೆ. ಜರ್ಮನ್ ಕಂಪನಿಯಿಂದ ಬಹಳ ಅಮೂಲ್ಯವಾದ ಕಚ್ಛಾವಸ್ತುಗಳು ಸಿಗಬಹುದು. ಇದು ರಿಲಾಯನ್ಸ್ ಡಿಫೆನ್ಸ್ಗೆ ಮತ್ತಷ್ಟು ಯೋಜನೆಗಳನ್ನು ಸೆಳೆಯಲು ಅನುಕೂಲವಾಗಬಹುದು.
ಸೌರಶಕ್ತಿ ನಿಗಮದೊಂದಿಗೆ 25 ವರ್ಷ ಒಪ್ಪಂದ ಮಾಡಿಕೊಂಡ ರಿಲಾಯನ್ಸ್ ಪವರ್
ರಿಲಾಯನ್ಸ್ ಪವರ್ನ ಅಂಗಸಂಸ್ಥೆಯಾದ ರಿಲಾಯನ್ಸ್ ಎನ್ಯು ಸನ್ಟೆಕ್ ಇತ್ತೀಚೆಗೆ ಒಂದು ದೊಡ್ಡ ಒಪ್ಪಂದಕ್ಕೆ ಸಹಿಹಾಕಿತ್ತು. ಭಾರತೀಯ ಸೌರಶಕ್ತಿ ನಿಗಮವಾದ ಎಸ್ಇಸಿಐ ಜೊತೆ 25 ವರ್ಷ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಂಡಿದೆ. ಸೌರವಿದ್ಯುತ್ ಅನ್ನು ಸರಬರಾಜು ಮಾಡುವ ಗುತ್ತಿಗೆ ಇದು.
ಇದನ್ನೂ ಓದಿ: ಜಪಾನ್ ಹಿಂದಿಕ್ಕಿದ್ದೇವೆಂದು ತೃಪ್ತರಾಗದಿರಿ… ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ
ಸೋಲಾರ್ ಮತ್ತು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಯೋಜನೆ ಇದಾಗಿದ್ದು, ಇಡೀ ಏಷ್ಯಾದಲ್ಲಿ ಒಂದೇ ಸ್ಥಳದಲ್ಲಿ ಇಂಥ ಅತಿದೊಡ್ಡ ಯೋಜನೆ ಇದಾಗಿದೆ. ಮುಂದಿನ ಎರಡು ವರ್ಷದಲ್ಲಿ 10,000 ಕೋಟಿ ರೂ ಹೂಡಿಕೆಯಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ. ಅದಾದ ಬಳಿಕ ಒಂದು ಕೆಡಬ್ಲ್ಯುಎಚ್ಗೆ 3.53 ರೂನಂತೆ ಸೌರ ವಿದ್ಯುತ್ ಅನ್ನು ರಿಲಾಯನ್ಸ್ ಸಂಸ್ಥೆ ಮಾರಲಿದೆ.
ಇದರ ಜೊತೆಗೆ ರಿಲಾಯನ್ಸ್ ಇನ್ಫ್ರಾ, ರಿಲಾಯನ್ಸ್ ಹೋಮ್ ಫೈನಾನ್ಸ್ ಕಂಪನಿಗಳೂ ಕೂಡ ಮಹತ್ವದ ಪ್ರಾಜೆಕ್ಟ್ಗಳನ್ನು ಪಡೆದಿವೆ. ಈ ನಾಲ್ಕು ಕಂಪನಿಗಳು ಅನಿಲ್ ಅಂಬಾನಿ ಅವರನ್ನು ಫೀನಿಕ್ಸ್ನಂತೆ ಮೇಲೇರಲು ರೆಕ್ಕೆಗಳನ್ನು ಒದಗಿಸಿವೆ. ಮುಂದಿನ ದಿನಗಳಲ್ಲಿ ಅಣ್ಣ ಮುಕೇಶ್ರಂತೆ ಅನಿಲ್ ಅಂಬಾನಿಯ ಖದರ್ ಕೂಡ ಹೆಚ್ಚಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




