Weather Model: ಭಾರತದಿಂದ ಬಿಎಫ್ಎಸ್; ಇದು ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ವ್ಯವಸ್ಥೆ
World's most precise weather model BFS developed by India: ಭಾರತದ ವಿಜ್ಞಾನಿಗಳು ಮತ್ತು ಸಂಶೋಧಕರು ಭಾರತ್ ಫೋರ್ಕ್ಯಾಸ್ಟಿಂಗ್ ಸಿಸ್ಟಂ ಎನ್ನುವ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ಇದು ವಿಶ್ವದಲ್ಲೇ ಅತ್ಯಂತ ನಿಖರವಾಗಿ ಹವಾಮಾನ ಮುನ್ಸೂಚನೆ ನೀಡುವ ಮಾದರಿ ಎನಿಸಿದೆ. ಆರ್ಕಾ ಎನ್ನುವ ಹೊಸ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ನಲ್ಲಿ ಈ ಸಿಸ್ಟಂ ಆಪರೇಟ್ ಆಗುತ್ತಿದ್ದು, 6 ಕಿಮೀ ಗ್ರಿಡ್ನ ಮಟ್ಟದಲ್ಲೂ ಇದು ಮುನ್ಸೂಚನೆ ನೀಡಬಲ್ಲುದು.

ನವದೆಹಲಿ, ಮೇ 27: ಸಾಕಷ್ಟು ಹವಾಮಾನ ವೈಪರೀತ್ಯಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತ ಇದೀಗ ಸಮರ್ಪಕ ರೀತಿಯಲ್ಲಿ ಹವಾಮಾನ ಮುನ್ಸೂಚನೆ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದೆ. ಪಾರ್ಥಸಾರಥಿ ಮುಖೋಪಾಧ್ಯಾಯ ಸೇರಿದಂತೆ ಸಂಶೋಧಕರ ತಂಡವೊಂದು ಭಾರತ್ ಫೋರ್ಕ್ಯಾಸ್ಟಿಂಗ್ ಸಿಸ್ಟಂ (ಬಿಎಫ್ಎಸ್) ಅನ್ನು ನಿರ್ಮಿಸಿವೆ. ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ಮಾದರಿ (precise weather forecasting model) ಎಂದು ಕರೆಯಬಹುದಾದ ಈ ಬಿಎಫ್ಎಸ್ ಮಾಡಲ್ ಅನ್ನು ಸರ್ಕಾರ ಅನಾವರಣಗೊಳಿಸಿದೆ.
ಭಾರತ್ ಫೋರ್ಕ್ಯಾಸ್ಟಿಂಗ್ ಸಿಸ್ಟಂ ನೀಡುವ ಹವಾಮಾನ ಮುನ್ಸೂಚನೆ ಬಹಳ ಕರಾರುವಾಕ್ ಆಗಿರಲಿದೆ. ಆರ್ಕಾ ಎನ್ನುವ ಹೊಸ ಸೂಪರ್ಕಂಪ್ಯೂಟರ್ನ ಶಕ್ತಿಯು ಬಿಎಫ್ಎಸ್ಗೆ ಇದೆ. ಈ ಹಿಂದೆ ಇದ್ದ ಪ್ರತ್ಯುಶ್ ಎನ್ನುವ ಸೂಪರ್ ಕಂಪ್ಯೂಟರ್ನಲ್ಲಿ ಮುನ್ಸೂಚನೆ ಮಾದರಿಯನ್ನು ಚಲಾಯಿಸಲು 10 ಗಂಟೆ ಬೇಕಾಗುತ್ತಿತ್ತು. ಈಗ ಆರ್ಕಾದಲ್ಲಿ ಡಾಟಾ ಅನಾಲಿಸಿಸ್ ಕೇವಲ ನಾಲ್ಕು ಗಂಟೆಯಲ್ಲಿ ಮುಗಿಯುತ್ತದೆ ಎಂದು ಭೂವಿಜ್ಞಾನ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದರೆಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.
ಈ ಹಿಂದಿನ ವೆದರ್ ಸಿಸ್ಟಂ 12 ಕಿಮೀ ಗ್ರಿಡ್ನಲ್ಲಿ ಕಾರ್ಯಾಚರಿಸುತ್ತಿತ್ತು. ಈಗ ಬಿಎಫ್ಎಸ್ ಸಿಸ್ಟಂ 6 ಕಿಮೀ ಗ್ರಿಡ್ನಲ್ಲಿ ಆಪರೇಟ್ ಮಾಡುತ್ತದೆ. ಪಂಚಾಯಿತಿ ಮಟ್ಟದಲ್ಲಿ ಇದು ಹವಾಮಾನ ಮುನ್ಸೂಚನೆಯನ್ನು ನಿಖರವಾಗಿ ನೀಡಬಲ್ಲುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಗ್ರಾಹಕರನ್ನು ವಂಚಿಸುವ ಡಾರ್ಕ್ ಪ್ಯಾಟರ್ನ್ಸ್; ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ಅಂದರೆ, ಪ್ರತೀ ಆರು ಚದರ ಕಿಮೀ ವ್ಯಾಪ್ತಿ ಪ್ರದೇಶಕ್ಕೆ ಸೀಮಿತವಾಗಿ ಹವಾಮಾನ ಮುನ್ಸೂಚನೆಯನ್ನು ಬಿಎಫ್ಎಸ್ ಪ್ರೆಡಿಕ್ಟ್ ಮಾಡಬಲ್ಲುದು. ದೇಶಾದ್ಯಂತ ಇರುವ 40 ಡಾಪ್ಲರ್ ವೆದರ್ ರಾಡಾರ್ಗಳ ನೆಟ್ವರ್ಕ್ ಅನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ನಿಖರ ಹವಾಮಾನ ಮುನ್ಸೂಚನೆ ನೀಡಲಾಗುತ್ತದೆ.
ನಲವತ್ತು ಇರುವ ಈ ಡಾಪ್ಲರ್ ರಾಡಾರ್ಗಳ ಸಂಖ್ಯೆಯನ್ನು ಸದ್ಯದಲ್ಲೇ ನೂರಕ್ಕೆ ಏರಿಸಲಾಗುತ್ತಿದೆ. ಮುಂದಿನ ಎರಡು ಗಂಟೆಯಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಏನು ಹವಾಮಾನ ವೈಪರೀತ್ಯ ಸಂಭವಿಸಬಹುದು ಎಂಬ ಕಿರು ಅವಧಿ ಮುನ್ಸೂಚನೆಯನ್ನೂ ಇದು ನೀಡಬಲ್ಲುದು.
ಬ್ರಿಟನ್, ಅಮೆರಿಕ, ಐರೋಪ್ಯ ದೇಶಗಳಲ್ಲಿ ಇರುವ ಫೋರ್ಕ್ಯಾಸ್ಟ್ ಮಾಡಲ್ಗೊಳಿಗಿಂತ ಬಿಎಫ್ಎಸ್ ಹೆಚ್ಚು ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರಿಂದ ಹವಾಮಾನ ವೈಪರೀತ್ಯ ಘಟನೆಯು ಹೆಚ್ಚು ಸ್ಪಷ್ಟವಾಗಿ ಗೋಚರವಾಗಬಹುದು.
ಇದನ್ನೂ ಓದಿ: ಸದ್ದಿಲ್ಲದೆ ಅನಿಲ್ ಅಂಬಾನಿ ಕಂಬ್ಯಾಕ್; ಪವರ್, ಇನ್ಫ್ರಾ, ಡಿಫೆನ್ಸ್, ಫೈನಾನ್ಸ್ ಭರ್ಜರಿ ಬ್ಯುಸಿನೆಸ್
ಭಾರತಕ್ಕೆ ಬಹಳ ಮುಖ್ಯ ಈ ಬಿಎಫ್ಎಸ್
ಭಾರತವು ಬಹಳಷ್ಟು ವೈಪರೀತ್ಯ ಹವಾಮಾನಗಳಿರುವ ಪ್ರದೇಶಗಳಿಂದ ಕೂಡಿದೆ. ಬರ, ಪ್ರವಾಹ ಪರಿಸ್ಥಿತಿ ಯಾವಾಗ ವಕ್ಕರಿಸುತ್ತದೆ ಎಂದು ಹೇಳುವುದು ಕಷ್ಟ. ರೈತರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬೆಲೆಗಳು ಹಾಳಾಗಿಹೋಗಬಹುದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರತದಲ್ಲಿ ಸಾಕಷ್ಟು ಬೆಳೆಗಳು ಬರ ಮತ್ತು ಪ್ರವಾಹಗಳಿಗೆ ಬಲಿಯಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ