
ನವದೆಹಲಿ, ಜೂನ್ 10: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಮಾರುಕಟ್ಟೆ ಮೌಲ್ಯದ ಸಂಸ್ಥೆ. ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸಿರುವ ಕಂಪನಿ. ಇದೀಗ ಗ್ಲೋಬಲ್ ಟಾಪ್-30 ಟೆಕ್ ಪಟ್ಟಿಯೊಂದರಲ್ಲಿ ರಿಲಾಯನ್ಸ್ ಸ್ಥಾನ ಪಡೆದಿದೆ. 340 ಪುಟಗಳ ‘ಟ್ರೆಂಡ್ಸ್ – ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (Trends – Artificial Intelligence) ವರದಿಯಲ್ಲಿ ಈ ಟಾಪ್-30 ಪಟ್ಟಿ ಇದ್ದು ಇದರಲ್ಲಿ ಮುಕೇಶ್ ಅಂಬಾನಿಯವರ ಈ ಕಂಪನಿ 23ನೇ ಸ್ಥಾನ ಪಡೆದಿದೆ. ಕಳೆದ ಹಲವು ವರ್ಷಗಳಿಂದ ಈ ಪಟ್ಟಿ ಪ್ರಕಟವಾಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತೀಯ ಕಂಪನಿಯೊಂದು ಇದರಲ್ಲಿ ಸ್ಥಾನ ಪಡೆದಿದೆ.
ಈ ಪಟ್ಟಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಟೆಕ್ನಾಲಜಿ ಕಂಪನಿಗಳನ್ನು ಪರಿಗಣಿಸಲಾಗಿದೆ. ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಇರುವ ಈ ಪಟ್ಟಿಯಲ್ಲಿವೆ. ರಿಲಾಯನ್ಸ್ ಇಂಡಸ್ಟ್ರೀಸ್ 216 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪ್ನೊಂದಿಗೆ 23ನೇ ಸ್ಥಾನದಲ್ಲಿದೆ. ಮೈಕ್ರೋಸಾಫ್ಟ್ ಸಂಸ್ಥೆ 3.36 ಟ್ರಿಲಿಯನ್ ಡಾಲರ್ನೊಂದಿಗೆ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ: ವಿಜಯ್ ಮಲ್ಯ ಬೇರೆ ಬೇರೆ ದೇಶಗಳಲ್ಲಿ ಹೊಂದಿರುವ ಆಸ್ತಿಗಳೇನು? ಅವುಗಳ ಮೌಲ್ಯವೆಷ್ಟು?
ಕುತೂಹಲ ಎಂದರೆ, ಮೊದಲ ಎಂಟೂ ಕಂಪನಿಗಳು ಅಮೆರಿಕದ್ದಾಗಿವೆ. ಟಾಪ್-30ಯಲ್ಲಿ ಚೀನಾದ 3, ಜರ್ಮನಿಯ 2, ನೆದರ್ಲ್ಯಾಂಡ್ಸ್, ಕೊರಿಯಾ, ಭಾರತ ಮತ್ತು ತೈವಾನ್ನ ತಲಾ ಒಂದೊಂದು ಕಂಪನಿಗಳು ಇವೆ. ಉಳಿದ 21 ಕಂಪನಿಗಳು ಅಮೆರಿಕದ್ದೇ ಆಗಿರುವುದು ವಿಶೇಷ.
ಇದನ್ನೂ ಓದಿ: ಗಾಂಡೀವ ಅಸ್ತ್ರ ಎಂಕೆ-3, ಮಹಾನ್ ವೇಗದಲ್ಲಿ ಟಾರ್ಗೆಟ್ ನಾಶ ಮಾಡಬಲ್ಲುದು ಭಾರತದ ಈ ಹೊಸ ಕ್ಷಿಪಣಿ
30 ವರ್ಷಗಳ ಹಿಂದೆ ಟಾಪ್-30ಯಲ್ಲಿ ಇದ್ದ ಕಂಪನಿಗಳ ಪೈಕಿ ಐದು ಮಾತ್ರವೇ ಈಗ ಈ ಪಟ್ಟಿಯಲ್ಲಿ ಇವೆ. ಮೈಕ್ರೋಸಾಫ್ಟ್, ಒರೇಕಲ್, ಸಿಸ್ಕೋ, ಐಬಿಎಂ ಮತ್ತು ಎಟಿ ಅಂಡ್ ಟಿ ಕಳೆದ 30 ವರ್ಷಗಳಿಂದಲೂ ಅಗ್ರಸಾಲಿನಲ್ಲಿ ಮುಂದುವರಿದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ