IINA Awards 2025: ಮೈ ಹೋಂಗೆ ಅತ್ಯುತ್ತಮ HSE, ESG ಪ್ರಶಸ್ತಿಗಳು

My Home Group gets prestigious 2025 IINA awards: ಇನ್​​ಫ್ರಾಸ್ಟ್ರಕ್ಚರ್ ಸ್ಕಿಲ್ ಡೆವಲಪ್ಮೆಂಟ್ ಅಕಾಡೆಮಿ ಇತ್ತೀಚೆಗೆ ಘೋಷಿಸಿದ IINA (ISDA ಇನ್ಫ್ರಾಕಾಮ್ ನ್ಯಾಷನಲ್ ಅವಾರ್ಡ್) 2025 ಪ್ರಶಸ್ತಿಗಳಲ್ಲಿ ಮೈ ಹೋಮ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಮೂರು ಪ್ರಶಸ್ತಿಗಳನ್ನು ಗೆದ್ದಿದೆ. ಅತ್ಯುತ್ತಮ HSE (ಆರೋಗ್ಯ, ಭದ್ರತೆ ಮತ್ತು ಪರಿಸರ) ಮತ್ತು ಅತ್ಯುತ್ತಮ ESG (ಪರಿಸರ, ಸಾಮಾಜಿಕ ಮತ್ತು ಆಡಳಿತ) ವಿಭಾಗಗಳಲ್ಲಿ ಚಿನ್ನ ಮತ್ತು ಪ್ಲಾಟಿನಂ ಪ್ರಶಸ್ತಿಗಳನ್ನು ಗೆದ್ದಿದೆ.

IINA Awards 2025: ಮೈ ಹೋಂಗೆ ಅತ್ಯುತ್ತಮ HSE, ESG ಪ್ರಶಸ್ತಿಗಳು
IINA Awards

Updated on: Jun 18, 2025 | 12:19 PM

ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಇನ್​ಫ್ರಾಸ್ಟ್ರಕ್ಚರ್ ನಿರ್ಮಾಣ ಕಂಪನಿಯಾದ ಹೈ ಹೋಮ್ ಗ್ರೂಪ್ (MyHome) ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದೆ. ಹೈದರಾಬಾದ್ ಮಹಾನಗರದಲ್ಲಿ ದೊಡ್ಡ ಪ್ರಮಾಣದ ಯೋಜನೆಗಳು, ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ಮತ್ತು ಗೇಟೆಡ್ ಸಮುದಾಯಗಳನ್ನು ನಿರ್ಮಿಸಿ, ಮನೆ ಖರೀದಿದಾರರ ಅಗತ್ಯಗಳನ್ನು ಪೂರೈಸುವ ಮೂಲಕ ವಿಶೇಷ ಖ್ಯಾತಿಯನ್ನು ಗಳಿಸಿದೆ. ಇನ್​​ಫ್ರಾಸ್ಟ್ರಕ್ಚರ್ ಸ್ಕಿಲ್ ಡೆವಲಪ್ಮೆಂಟ್ ಅಕಾಡೆಮಿ ಇತ್ತೀಚೆಗೆ ಘೋಷಿಸಿದ IINA (ISDA ಇನ್ಫ್ರಾಕಾಮ್ ನ್ಯಾಷನಲ್ ಅವಾರ್ಡ್) 2025 ಪ್ರಶಸ್ತಿಗಳಲ್ಲಿ ಮೈ ಹೋಮ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಮೂರು ಪ್ರಶಸ್ತಿಗಳನ್ನು ಗೆದ್ದಿದೆ.

ಅತ್ಯುತ್ತಮ HSE (ಆರೋಗ್ಯ, ಭದ್ರತೆ ಮತ್ತು ಪರಿಸರ) ಮತ್ತು ಅತ್ಯುತ್ತಮ ESG (ಪರಿಸರ, ಸಾಮಾಜಿಕ ಮತ್ತು ಆಡಳಿತ) ವಿಭಾಗಗಳಲ್ಲಿ ಚಿನ್ನ ಮತ್ತು ಪ್ಲಾಟಿನಂ ಪ್ರಶಸ್ತಿಗಳನ್ನು ಗೆದ್ದಿದೆ. ಮೈ ಹೋಮ್ HSE ಮುಖ್ಯಸ್ಥ ಡಿಬಿವಿಎಸ್ಎನ್ ರಾಜು ಅವರು ನಿರ್ಮಾಣ ಸುರಕ್ಷತಾ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಗ್ರಾವಾ ಬಿಸಿನೆಸ್ ಪಾರ್ಕ್ (ಕೊಕಪೇಟ) ಅತ್ಯುತ್ತಮ HSE ಯೋಜನೆಗಾಗಿ ಪ್ಲಾಟಿನಂ ಪ್ರಶಸ್ತಿಯನ್ನು ಗೆದ್ದಿದೆ.

ಇದೇ ಯೋಜನೆಯು ಗ್ರೀನ್ ಬ್ಯುಲ್ಡಿಂಗ್ ಮತ್ತು ಸಸ್ಟೈನಬಿಲಿಟಿ ವಿಭಾಗದಲ್ಲೂ ಚಿನ್ನದ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಸಂದರ್ಭದಲ್ಲಿ, ಎಸ್. ವೇಣುಗೋಪಾಲ್ ರಾವ್ (ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್, ಪ್ರಾಜೆಕ್ಟ್, ಸಸ್ಟೈನಬಿಲಿಟಿ) ಅವರು ಮೈ ಹೋಮ್ ಗ್ರೀನ್ ಬಿಲ್ಡಿಂಗ್ ಮತ್ತು ಸಸ್ಟೈನಬಲ್ ಡೆವಲಪ್ಮೆಂಟ್ ಕುರಿತು ಪ್ರೆಸೆಂಟೇಶನ್ ನೀಡಿದರು. ಸಸ್ಟೈನಬಿಲಿಟಿ ರೋಡ್​​ಮ್ಯಾಪ್, ಗ್ರೀನ್ ವಿಶನ್, ಹಂತವಾರು ಡೆವಲಪ್ಮೆಂಟ್ ಪ್ಲಾನ್, ವರ್ಷವಾಗು ಗೋಲ್ ಪ್ಲಾನ್ ಇತ್ಯಾದಿಯನ್ನು ತಮ್ಮ ಪ್ರೆಸೆಂಟೇಶನ್​​ನಲ್ಲಿ ಅವರು ವಿವರಿಸಿದರು.

IINA ಪ್ರಶಸ್ತಿ

ಈ ಪ್ರಶಸ್ತಿಗಳು ಮೈ ಹೋಮ್ ಸಂಸ್ಥೆಯ ಪ್ರಯತ್ನಗಳ ಫಲವಾಗಿದೆ. ಪರಿಸರ ಮತ್ತು ಸಸ್ಟೈನಬಲ್ ಡೆವಲಪ್ಮೆಂಟ್ ಕಡೆಗೆ ಮೈ ಹೋಮ್‌ನ ಪ್ರಯತ್ನಗಳಿಗೆ ಈ ಪ್ರಶಸ್ತಿಗಳು ಮತ್ತಷ್ಟು ಪುಷ್ಟಿ ನೀಡುತ್ತದೆ. ತಮ್ಮ ಹುಮ್ಮಸ್ಸನ್ನು ಹೆಚ್ಚಿಸಿದೆ ಎಂದು ಸಂಸ್ಥೆ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ