AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಟ್ರಂಪ್ ಬೆದರಿಕೆ; ಫಾರ್ಮಾ ಉತ್ಪನ್ನಗಳ ಮೇಲೆ ಟ್ಯಾರಿಫ್: ಅಮೆರಿಕ ಅಧ್ಯಕ್ಷರ ಹೇಳಿಕೆ ಬೆನ್ನಲ್ಲೇ ಕುಸಿದ ಷೇರುಗಳು

Donald Trump threatens tariffs on Pharma Sector: ಫಾರ್ಮಾ ಸೆಕ್ಟರ್ ಮೇಲೆ ಸದ್ಯದಲ್ಲೇ ಟ್ಯಾರಿಫ್ ಹಾಕುವುದಾಗಿ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಅವರ ಹೇಳಿಕೆ ಬೆನ್ನಲ್ಲೇ ಭಾರತದ ಫಾರ್ಮಾ ಸೆಕ್ಟರ್​​ನ ಬಹುತೇಕ ಎಲ್ಲಾ ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಏಪ್ರಿಲ್ ತಿಂಗಳಲ್ಲೇ ಟ್ರಂಪ್ ಅವರು ಫಾರ್ಮಾ ಉತ್ಪನ್ನಗಳ ಮೇಲೆ ತೆರಿಗೆ ಹಾಕಲು ಯೋಜಿಸಿರುವುದಾಗಿ ಹೇಳಿದ್ದರು.

ಹೊಸ ಟ್ರಂಪ್ ಬೆದರಿಕೆ; ಫಾರ್ಮಾ ಉತ್ಪನ್ನಗಳ ಮೇಲೆ ಟ್ಯಾರಿಫ್: ಅಮೆರಿಕ ಅಧ್ಯಕ್ಷರ ಹೇಳಿಕೆ ಬೆನ್ನಲ್ಲೇ ಕುಸಿದ ಷೇರುಗಳು
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2025 | 7:24 PM

Share

ವಾಷಿಂಗ್ಟನ್, ಜೂನ್ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಟ್ಯಾರಿಫ್ ಬೆದರಿಕೆಯ ಪ್ರಲಾಪ ಮುಂದುವರಿದಿದೆ. ಫಾರ್ಮಾ ವಲಯಕ್ಕೂ ಟ್ಯಾರಿಫ್ ಬರೆ ಹಾಕುತ್ತೇನೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಧ್ಯಕ್ಷರಿಗೆಂದು ಸಿದ್ಧಪಡಿಸಲಾದ ಏರ್ ಫೋರ್ಸ್ ಒನ್ ವಿಶೇಷ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಡೊನಾಲ್​ಡ್ ಟ್ರಂಪ್, ಶೀಘ್ರದಲ್ಲೇ ಫಾರ್ಮಾ ಉತ್ಪನ್ನಗಳ ಆಮದು ಸುಂಕ ಹಾಕಲಾಗುವುದು ಎಂದಿದ್ದಾರೆ. ಇದರ ಬೆನ್ನಲ್ಲೇ ಭಾರತದಲ್ಲಿರುವ ವಿವಿಧ ಫಾರ್ಮಾ ಸೆಕ್ಟರ್ ಕಂಪನಿಗಳ ಷೇರುಗಳು ಇವತ್ತು ಹಿನ್ನಡೆ ಕಂಡಿವೆ.

ಭಾರತದ ಸರಕು ರಫ್ತಿನಲ್ಲಿ ಔಷಧೋದ್ಯಮದ ಪಾಲು ದೊಡ್ಡದಿದೆ. ಅಮೆರಿಕಕ್ಕೂ ಸಾಕಷ್ಟು ಔಷಧ ರಫ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಫಾರ್ಮಾ ಷೇರುಗಳು ಇವತ್ತು ಕುಸಿತ ಕಂಡಿವೆ. ಟ್ರಂಪ್ ಹೇಳಿಕೆ ಬಳಿಕ ನಿಫ್ಟಿ ಫಾರ್ಮಾ ಸೂಚ್ಯಂಕ ಶೇ. 2.5ರಷ್ಟು ಕುಸಿದಿದೆ. ಇವತ್ತು ಮಂಗಳವಾರ ಈ ಇಂಡೆಕ್ಸ್ ಒಟ್ಟಾರೆ ಶೇ. 1.89ರಷ್ಟು ಕುಸಿದಿದೆ.

ಭಾರತದ ಷೇರು ಮಾರುಕಟ್ಟೆ ಒಟ್ಟಾರೆ ಇವತ್ತು ಇಳಿಮುಖವಾದರೂ ಫಾರ್ಮಾ ಮತ್ತು ಲೋಹ ಹೊರತುಪಡಿಸಿ ಉಳಿದ ಹೆಚ್ಚಿನ ಸೆಕ್ಟರ್​​ಗಳು ಕುಸಿದಿರುವುದು ಶೇ. 1ಕ್ಕಿಂತಲೂ ಕಡಿಮೆ. ಫಾರ್ಮಾ ಸೆಕ್ಟರ್​​ನಲ್ಲಿ ಗ್ರಾನ್ಯೂಲ್ಸ್ ಇಂಡಿಯಾ ಷೇರುಮೌಲ್ಯ ಶೇ. 4ರಷ್ಟು ಕುಸಿತ ಕಂಡಿದೆ. ಅಬ್ಬಾಟ್ ಇಂಡಿಯಾ ಹೊರತುಪಡಿಸಿ ನಿಫ್ಟಿ ಫಾರ್ಮಾದಲ್ಲಿರುವ ಎಲ್ಲಾ ಷೇರುಗಳು ಹಿನ್ನಡೆ ಕಂಡಿವೆ.

ಇದನ್ನೂ ಓದಿ: ಈ ಕಂಪನಿ ಮೇಲೆ ಮಾಡಿದ 500 ಕೋಟಿ ರೂ ಹೂಡಿಕೆಯಿಂದ ಅಂಬಾನಿಗೆ ಸಿಕ್ಕ ಲಾಭ 9,000 ಕೋಟಿ ರೂ

ಅತಿಹೆಚ್ಚು ಹಿನ್ನಡೆ ಕಂಡ ಸ್ಟಾಕ್​​ಗಳಲ್ಲಿ ಗ್ರಾನ್ಯೂಲ್ಸ್ ಇಂಡಿಯಾ, ಡಿವಿಸ್ ಲ್ಯಾಬ್ಸ್, ಅರಬಿಂದೋ ಫಾರ್ಮ, ಲೌರುಸ್ ಲ್ಯಾಬ್, ಲುಪಿನ್ ಲ್ಯಾಬ್, ನ್ಯಾಟ್ಕೋ ಫಾರ್ಮ, ಸನ್ ಫಾರ್ಮ, ಝೈಡಸ್ ಲೈಫ್ ಮೊದಲಾದವು ಸೇರಿವೆ.

ಫಾರ್ಮಾ ಸೆಕ್ಟರ್​​ಗೆ ಟ್ಯಾರಿಫ್ ಹಾಕುವುದು ಟ್ರಂಪ್ ಅವರ ಹೊಸ ವರಸೆಯಾ?

ತಿಂಗಳುಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಬಹುತೇಕ ಎಲ್ಲಾ ದೇಶಗಳ ಮೇಲೆ ಆಮದು ಸುಂಕ ಹೇರಿಕೆ ಘೋಷಿಸಿದ್ದರು. ಫಾರ್ಮಾ, ಎಲೆಕ್ಟ್ರಾನಿಕ್ಸ್ ಇತ್ಯಾದಿ ಕೆಲ ಸೆಕ್ಟರ್​​​ಗಳನ್ನು ಮಾತ್ರ ಹೊರತುಪಡಿಸಲಾಗಿತ್ತು. ಆದರೆ, ಫಾರ್ಮಾ ಸೆಕ್ಟರ್ ಮೇಲೆ ಹಿಂದೆಂದೂ ಕಾಣದ ಮಟ್ಟದಲ್ಲಿ ತೆರಿಗೆ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆಯನ್ನಂತೂ ನೀಡಿದ್ದರು.

ಇದನ್ನೂ ಓದಿ: ಟಿಸಿಎಸ್ ಉದ್ಯೋಗಿಗಳಿಗೆ 35ಕ್ಕೂ ಹೆಚ್ಚು ದಿನ ಬೆಂಚ್ ಟೈಮ್ ಇಲ್ಲ; ಇದರಿಂದ ಅನುಕೂಲವೇನು?

ಈಗ ಆ ಸಮಯ ಸಮೀಪಿಸಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದ ಫಾರ್ಮಾ ಕಂಪನಿಗಳ ಹೆಚ್ಚಿನ ಬ್ಯುಸಿನೆಸ್ ಆಫ್ರಿಕಾ, ಯೂರೋಪ್ ದೇಶಗಳಲ್ಲಿ ಇದೆ. ಅಮೆರಿಕಕ್ಕೂ ಜೆನೆರಿಕ್ ಔಷಧಗಳು ಸರಬರಾಜಾಗುತ್ತವೆಯಾದರೂ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಅಮೆರಿಕದ ಟ್ಯಾರಿಫ್ ಕ್ರಮದಿಂದ ಭಾರತದ ಫಾರ್ಮಾ ಉದ್ಯಮಕ್ಕೆ ತೀರಾ ದೊಡ್ಡ ಆಘಾತವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ