
ನವದೆಹಲಿ, ಜೂನ್ 3: ಭಾರತವು ವಿಶ್ವದ ಪ್ರವಾಸೋದ್ಯಮ ಕೇಂದ್ರವಾಗಿ ತಿರುಗುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ವಿದೇಶೀ ಪ್ರವಾಸಿಗರು ಭಾರತದತ್ತ ಆಕರ್ಷಿತರಾಗುತ್ತಿದ್ದಾರೆ. ಇಲ್ಲಿಯ ಸಾಂಸ್ಕೃತಿಕ ಮತ್ತು ಆದ್ಯಾತ್ಮಿಕ ಪರಂಪರೆ ಉಳಿಸಲು ಸರ್ಕಾರ ಪ್ರಯತ್ನ ಪಡುತ್ತಿರುವ ಫಲವಾಗಿ ಪ್ರವಾಸೋದ್ಯಮ ಗಟ್ಟಿಗೊಳ್ಳುತ್ತಿದೆ. 2024ರಲ್ಲಿ ಭಾರತಕ್ಕೆ 96.6 ಲಕ್ಷ ವಿದೇಶೀ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ 2024-25ರ ವಾರ್ಷಿಕ ವರದಿಯಲ್ಲಿ ಈ ಅಂಶವನ್ನು ಎತ್ತಿ ತೋರಿಸಲಾಗಿದೆ. ಹೆಚ್ಚೂಕಡಿಮೆ ಒಂದು ಕೋಟಿ ವಿದೇಶಿಗರ ಆಗಮನದಿಂದ ಭಾರತಕ್ಕೆ ವಿದೇಶೀ ವಿನಿಮಯದಲ್ಲಿ 2.7 ಲಕ್ಷ ಕೋಟಿ ರೂನಷ್ಟು ಆದಾಯ ಬಂದಿದೆ.
ಈ ವರದಿ ಪ್ರಕಾರ, 2023ರಲ್ಲಿ ಭಾರತಕ್ಕೆ ಬಂದ ವಿದೇಶೀ ಪ್ರವಾಸಿಗರ ಸಂಖ್ಯೆ 95.2 ಲಕ್ಷ. ಆ ವರ್ಷ ಸೃಷ್ಟಿಯಾದ ಫಾರೀನ್ ಎಕ್ಸ್ಚೇಂಜ್ ಗಳಿಕೆ 2.32 ಲಕ್ಷ ಕೋಟಿ ರೂನಷ್ಟು. 2024ರಲ್ಲಿ ಪ್ರವಾಸಿಗರ ಸಂಖ್ಯೆ ಮತ್ತು ಅವರಿಂದ ಬಂದ ಆದಾಯ ಮತ್ತಷ್ಟು ಹೆಚ್ಚಳವಾಗಿದೆ.
The Government has undertaken several initiatives to preserve India’s spiritual & cultural heritage while driving a surge in tourism across the country, the economic impact of which is tangible.
In 2024, India recorded 9.66 million foreign tourist arrivals, generating more than… pic.twitter.com/rzRqfJKkDD
— Ministry of Information and Broadcasting (@MIB_India) June 3, 2025
ವಿದೇಶಗಳಲ್ಲಿ ನೆಲಸಿರುವ ಭಾರತೀಯ ಸಮುದಾಯದವರನ್ನು ಒಳಗೊಂಡ ‘ಚಲೋ ಇಂಡಿಯಾ’ ಅಭಿಯಾನವನ್ನು ಆರಂಭಿಸಲಾಯಿತು. ತಾವು ನೆಲಸಿರುವ ದೇಶಗಳಲ್ಲಿರುವ ಸ್ಥಳೀಯ ಸ್ನೇಹಿತರಿಗೆ ಭಾರತದ ಬಗ್ಗೆ, ಅಲ್ಲಿನ ಸ್ಥಳಗಳ ಬಗ್ಗೆ ಸಕಾರಾತ್ಮಕವಾಗಿ ಬಿಂಬಿಸುವುದು ಈ ಅಭಿಯಾನದ ಮುಖ್ಯಾಂಶ. ಚಲೋ ಇಂಡಿಯಾ ಕೆಂಪೇನ್ ಪರಿಣಾಮವಾಗಿ, ಭಾರತಕ್ಕೆ ಬರುವ ವಿದೇಶೀ ಪ್ರವಾಸಿಗರಿಗೆ 1 ಲಕ್ಷದಷ್ಟು ಉಚಿತ ವೀಸಾವನ್ನೂ ನೀಡಲಾಗುತ್ತದೆ.
ಇದನ್ನೂ ಓದಿ: ಎಂಆರ್ಎಫ್ ಭಾರತದ ಅತಿದುಬಾರಿ ಷೇರು; ಮೊದಲ ಸ್ಥಾನ ಬಿಟ್ಟ ಎಲ್ಸಿಡ್ ಇನ್ವೆಸ್ಟ್ಮೆಂಟ್ಸ್
ಪ್ರವಾಸದ ಅನುಭವವನ್ನು ಉತ್ಕೃಷ್ಟಗೊಳಿಸಲು ನೆರವಾಗುವ ದೃಷ್ಟಿಯಿಂದ ಸರ್ಕಾರವು ಪರ್ಯಟನ್ ಮಿತ್ರ ಮತ್ತು ಪರ್ಯಟನ್ ದೀದಿ ಉಪಕ್ರಮಗಳನ್ನು ಕಳೆದ ವರ್ಷ ಆರಂಭಿಸಿತು. ಪ್ರಮುಖ ಪ್ರವಾಸೀ ಸ್ಥಳಗಳಲ್ಲಿ ಸ್ಥಳೀಯರು ಟೂರ್ ಗೈಡ್ಗಳಾಗಿ ಪ್ರವಾಸಿಗರಿಗೆ ಅರಿವು ಮೂಡಿಸುವಂತಾಗುವುದು ಇದರ ಉದ್ದೇಶ. ಇದರಿಂದ ಉದ್ಯೋಗಸೃಷ್ಟಿಯೂ ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Tue, 3 June 25