AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MRF shares: ಎಂಆರ್​​ಎಫ್ ಭಾರತದ ಅತಿದುಬಾರಿ ಷೇರು; ಮೊದಲ ಸ್ಥಾನ ಬಿಟ್ಟ ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್

MRF overtakes Elcid Investments as India's most priced stock: ಹಲವು ವರ್ಷಗಳಿಂದ ಭಾರತದ ಅತಿ ಹೆಚ್ಚು ಬೆಲೆಯ ಷೇರೆನಿಸಿದ್ದ ಎಂಆರ್​​ಎಫ್ ಈಗ ಮತ್ತೆ ಅಗ್ರಸ್ಥಾನಕ್ಕೇರಿದೆ. ಕಳೆದ ವರ್ಷದ ಅಕ್ಟೋಬರ್​​​ನಲ್ಲಿ ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್ ಷೇರುಬೆಲೆ ದಿಢೀರ್ ಹೆಚ್ಚಳವಾಗಿ ಎಂಆರ್​​ಎಫ್ ಅನ್ನು ಬೆಲೆಯಲ್ಲಿ ಹಿಂದಿಕ್ಕಿತು. ಆದರೆ, ಈ ಒಂದು ವರ್ಷದಲ್ಲಿ ಎಲ್ಸಿಡ್ ಷೇರುಬೆಲೆ ಕಡಿಮೆ ಆಗಿದೆ. ಎಂಆರ್​​ಎಫ್ ಷೇರುಬೆಲೆ ಹೆಚ್ಚಳವಾಗಿದೆ.

MRF shares: ಎಂಆರ್​​ಎಫ್ ಭಾರತದ ಅತಿದುಬಾರಿ ಷೇರು; ಮೊದಲ ಸ್ಥಾನ ಬಿಟ್ಟ ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್
ಎಂಆರ್​ಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 03, 2025 | 4:00 PM

Share

ನವದೆಹಲಿ, ಜೂನ್ 3: ಭಾರತದ ಪ್ರಖ್ಯಾತ ಟಯರ್ ತಯಾರಕ ಕಂಪನಿಯಾದ ಎಂಆರ್​​ಎಫ್ ಈಗ ಭಾರತದ ಅತಿಹೆಚ್ಚು ಬೆಲೆಯ ಷೇರುಗಳ ಪಟ್ಟಿಯಲ್ಲಿ (most expensive stocks) ಮತ್ತೆ ಅಗ್ರಸ್ಥಾನಕ್ಕೇರಿದೆ. ಕಳೆದ ವರ್ಷ ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್ ಎನ್ನುವ ಸಂಸ್ಥೆಯ ಷೇರುಬೆಲೆ ದಿಢೀರ್ ಹೆಚ್ಚಳವಾಗಿ, ನಂಬರ್ ಒನ್ ಸ್ಥಾನಕ್ಕೇರಿತ್ತು. ಹಲವು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಎಂಆರ್​​ಎಫ್ ಎರಡನೇ ಸ್ಥಾನಕ್ಕಿಳಿಯಬೇಕಾಯಿತು. ಎಲ್ಸಿಡ್ ಇನ್ವೆಸ್ಟ್​ಮೆಂಟ್ಸ್ ಷೇರು ಬೆಲೆ ದಾಖಲೆಯ 3.32 ಲಕ್ಷ ರೂಗೆ ಏರಿತ್ತು. ಈಗ ಅದು ಶೇ. 60ರಷ್ಟು ಮೌಲ್ಯ ಕಳೆದುಕೊಂಡು 1,29,899 ರೂಗೆ ಇಳಿದಿದೆ.

ಇದೇ ವೇಳೆ, ಎಂಆರ್​​ಎಫ್ ಷೇರು ಬೆಲೆ ಒಂದು ಹಂತದಲ್ಲಿ 1,02,124 ರೂಗೆ ಕುಸಿದಿತ್ತು. ಈಗ ಷೇರುಬೆಲೆ ಗಣನೀಯವಾಗಿ ಏರಿಕೆ ಆಗಿದ್ದು 1,38,539 ರೂ ಆಗಿದೆ. ಇದರೊಂದಿಗೆ ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್ ಷೇರಿಗಿಂತ ಎಂಆರ್​​ಎಫ್ ಷೇರಿನ ಬೆಲೆ ಹೆಚ್ಚಾಗಿದೆ.

ಇದನ್ನೂ ಓದಿ: ಇನ್ಫೋಸಿಸ್ ಮೂರ್ತಿಯವರ 18 ತಿಂಗಳ ಮೊಮ್ಮಗುವಿಗೆ 6.5 ಕೋಟಿ ರೂ ಡಿವಿಡೆಂಡ್; ಏಕಾಗ್ರನ ಒಟ್ಟು ಷೇರುಗಳ ಮೌಲ್ಯ ಎಷ್ಟು ಗೊತ್ತಾ?

ಮೂರೂವರೆ ರೂನಿಂದ ಎರಡೂವರೆ ಲಕ್ಷ ರೂಗೆ ಏರಿದ್ದ ಎಲ್ಸಿಡ್ ಷೇರುಬೆಲೆ

ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್ ಸಂಸ್ಥೆಯ ಷೇರು ಬೆಲೆ ವರ್ಷದ ಹಿಂದೆ 3 ರೂ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿತ್ತು. ಒಂದು ಷೇರಿನ ನಿಜವಾದ ಮೌರುಕಟ್ಟೆ ಮೌಲ್ಯ ತಪ್ಪಾಗಿದೆ ಎಂದಾಗ ನಿಜ ಮೌಲ್ಯ ಗುರುತಿಸಲು ಷೇರು ವಿನಿಮಯ ಕೇಂದ್ರದಲ್ಲಿ ವಿಶೇಷ ಕಾಲ್ ಆಕ್ಷನ್ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್ಸಿಡ್ ಷೇರುಬೆಲೆ 3.53 ರೂನಿಂದ 2,36,250 ರೂಗೆ ಜಂಪ್ ಆಗಿತ್ತು. ಅದು 2024ರ ಅಕ್ಟೋಬರ್​ನಲ್ಲಿ ಆಗಿದ್ದು. ಆಗ ಅದು ಭಾರತದ ಅತಿಹೆಚ್ಚು ಬೆಲೆಯ ಷೇರು ಎನ್ನುವ ದಾಖಲೆಯನ್ನು ಸ್ಥಾಪಿಸಿತು.

ಈಗಲೂ ಆ ದಾಖಲೆ ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್ ಹೆಸರಿನಲ್ಲಿ ಇದೆಯಾದರೂ, ಸದ್ಯಕ್ಕೆ ಅತಿ ಹೆಚ್ಚು ಬೆಲೆಯ ಷೇರು ಎಂಆರ್​​ಎಫ್​ನದ್ದಾಗಿದೆ.

ಪ್ರಾಪರ್ಟಿ ಷೇರ್ ಇನ್ವೆಸ್ಟ್​​ಮೆಂಟ್ ಟ್ರಸ್ಟ್

ಇಲ್ಲಿ ಪ್ರಾಪರ್ಟಿ ಷೇರ್ ಇನ್ವೆಸ್ಟ್​​ಮೆಂಟ್ ಟ್ರಸ್ಟ್ ಆರ್​​ಇಐಟಿ ಪ್ಲಾಟ್​​ಫಾರ್ಮ್ ಕೂಡ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ. ಇದರ ಒಂದು ಯುನಿಟ್ ಬೆಲೆ 10 ಲಕ್ಷ ರೂ ಇದೆ. ಇದನ್ನು ಪರಿಗಣಿಸಿದರೆ ಇದು ಅತಿದುಬಾರಿ ಷೇರು ಎನಿಸುತ್ತದೆ. ಆದರೆ, ಇದು ರಿಯಲ್ ಎಸ್ಟೇಟ್ ಇನ್ವೆಸ್ಟ್​​ಮೆಂಟ್ ಟ್ರಸ್ಟ್ ಆದ್ದರಿಂದ ಈಕ್ವಿಟಿ ಷೇರೆಂದು ಪರಿಗಣಿತವಾಗುವುದಿಲ್ಲ.

ಇದನ್ನೂ ಓದಿ: ಅಮೆರಿಕದ ಈಗಿನ ಆರ್ಥಿಕ ಮಟ್ಟ ತಲುಪಲು ಭಾರತಕ್ಕೆ ಇನ್ನೆಷ್ಟು ವರ್ಷ ಬೇಕು?: ಅಮಿತಾಭ್ ಕಾಂತ್ ಉತ್ತರ ಇದು

ಭಾರತದ ಅತಿದುಬಾರಿ 5 ಷೇರುಗಳು

  1. ಎಂಆರ್​ಎಫ್: 1,38,539 ರೂ
  2. ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್: 1,29,899 ರೂ
  3. ಪೇಜ್ ಇಂಡಸ್​ಟ್ರೀಸ್: 47,745 ರೂ
  4. ಹನಿವೆಲ್ ಆಟೊಮೇಶನ್: 41,340 ರೂ
  5. ಬಾಷ್ ಲಿ: 31,730 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್