AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಫೋಸಿಸ್ ಮೂರ್ತಿಯವರ 18 ತಿಂಗಳ ಮೊಮ್ಮಗುವಿಗೆ 6.5 ಕೋಟಿ ರೂ ಡಿವಿಡೆಂಡ್; ಏಕಾಗ್ರನ ಒಟ್ಟು ಷೇರುಗಳ ಮೌಲ್ಯ ಎಷ್ಟು ಗೊತ್ತಾ?

Ekagrah Rohan Murthy gets Rs 6.5 crore in share dividends: ವಿಶ್ವದ ಅತಿ ಕಿರಿಯ ವಯಸ್ಸಿನ ಮಿಲಿಯನೇರ್ ಎಂದು ಹೆಸರು ಮಾಡಿದ್ದ ಏಕಾಗ್ರ ರೋಹನ್ ಮೂರ್ತಿಗೆ 6.5 ಕೋಟಿ ರೂ ಡಿವಿಡೆಂಡ್ ಸಿಕ್ಕಿದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮಗನ ಮಗುವಾದ ಏಕಾಗ್ರನ ಬಳಿ 15 ಲಕ್ಷ ಷೇರುಗಳಿವೆ. ಇನ್ಫೋಸಿಸ್ ಸಂಸ್ಥೆ ಈ ಬಾರಿ ಪ್ರತೀ ಷೇರಿಗೆ 43 ರೂ ಡಿವಿಡೆಂಡ್ ಘೋಷಿಸಿದೆ.

ಇನ್ಫೋಸಿಸ್ ಮೂರ್ತಿಯವರ 18 ತಿಂಗಳ ಮೊಮ್ಮಗುವಿಗೆ 6.5 ಕೋಟಿ ರೂ ಡಿವಿಡೆಂಡ್; ಏಕಾಗ್ರನ ಒಟ್ಟು ಷೇರುಗಳ ಮೌಲ್ಯ ಎಷ್ಟು ಗೊತ್ತಾ?
ಏಕಾಗ್ರ ರೋಹನ್ ಮೂರ್ತಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 03, 2025 | 3:05 PM

Share

ಬೆಂಗಳೂರು, ಜೂನ್ 3: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮೊಮ್ಮಗು ಏಕಾಗ್ರನಿಗೆ (Ekagrah Rohan Murthy) 6.5 ಕೋಟಿ ರೂ ಆದಾಯ ಪ್ರಾಪ್ತವಾಗಿದೆ. ಈ ಹುಡುಗನ ವಯಸ್ಸು ಇನ್ನೂ 2 ವರ್ಷವೂ ದಾಟಿಲ್ಲ. 18 ತಿಂಗಳು ಅಥವಾ ಒಂದೂವರೆ ವರ್ಷದ ಈ ಕೂಸಿಗೆ ಡಿವಿಡೆಂಡ್​​ಗಳಿಂದ (share dividend) ಈ ಹಣ ಸಿಕ್ಕಿದೆ. ನಾರಾಯಣಮೂರ್ತಿಯವರ ಮಗ ರೋಹನ್ ಮೂರ್ತಿಯ ಮಗ ಈ ಏಕಾಗ್ರ.

ನಾರಾಯಣಮೂರ್ತಿ ಅವರು ಇನ್ಫೋಸಿಸ್​​ನಲ್ಲಿರುವ ತಮ್ಮ ಪಾಲಿನ ಷೇರುಗಳಲ್ಲಿ 15 ಲಕ್ಷ ಷೇರುಗಳನ್ನು ಏಕಾಗ್ರನಿಗೆ ಉಡುಗೊರೆಯಾಗಿ ವರ್ಗಾವಣೆ ಮಾಡಿದ್ದರು. ಆಗ ಆ ಶಿಶುವಿನ ವಯಸ್ಸು ಇನ್ನೂ 4 ತಿಂಗಳು. ಇನ್ಫೋಸಿಸ್​ನ ಶೇ. 0.04ರಷ್ಟು ಷೇರುಪಾಲು ಇದಾಗಿದ್ದು, ಆಗ ಇದರ ಒಟ್ಟು ಷೇರುಮೌಲ್ಯ 240 ಕೋಟಿ ರೂ ದಾಟಿತ್ತು.

ಈಗ ಇನ್ಫೋಸಿಸ್ ಷೇರುಬೆಲೆ ಕಳೆದ ಒಂದು ವರ್ಷದಲ್ಲಿ ಸ್ವಲ್ಪ ಕುಸಿದಿದೆ. ಪ್ರತೀ ಷೇರಿನ ಬೆಲೆ ಈಗ 1,543 ರೂ ಇದೆ. ಏಕಾಗ್ರ ರೋಹನ್ ಮೂರ್ತಿ ಹೆಸರಿಗೆ ಇರುವ ಷೇರುಸಂಪತ್ತಿನ ಮೌಲ್ಯ 231 ಕೋಟಿ ರೂ ಆಗುತ್ತದೆ.

ಪ್ರತೀ ಷೇರಿಗೆ 43 ರೂ ಡಿವಿಡೆಂಡ್

ಇನ್ಫೋಸಿಸ್ ಸಂಸ್ಥೆ ಪ್ರತೀ ವರ್ಷ ಸಾಕಷ್ಟು ಡಿವಿಡೆಂಡ್​​ಗಳನ್ನು ನೀಡುತ್ತದೆ. ಈ ಬಾರಿ ಪ್ರತೀ ಷೇರಿಗೆ 43 ರೂ ಡಿವಿಡೆಂಡ್ ಘೋಷಿಸಿದೆ. ಒಟ್ಟು 54.2 ಕೋಟಿ ಷೇರುಗಳಿದ್ದು, ಷೇರುದಾರರಿಗೆ ಒಟ್ಟು 2,330 ಕೋಟಿ ರೂ ಅನ್ನು ಲಾಭಾಂಶವಾಗಿ ನೀಡಿದೆ. ಇದರಲ್ಲಿ ಏಕಾಗ್ರನಿಗೆ 6.5 ಕೋಟಿ ರೂ ಸಿಕ್ಕಿದೆ. ಇನ್ಫೋಸಿಸ್​​ನ ಪ್ರೊಮೋಟರ್​​​ಗಳ ಸಾಲಿನಲ್ಲಿ ಅತಿ ಕಡಿಮೆ ಷೇರುಗಳಿರುವುದು ಏಕಾಗ್ರನಿಗೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಡೆಯುವಾಗ ನಿಮ್ಮ ಧೂಮಪಾನ ಚಟ ಮುಚ್ಚಿಟ್ಟರೆ ಏನಾಗುತ್ತೆ? ವಿಮಾ ಸಂಸ್ಥೆಗೆ ಗೊತ್ತಾಗೋದು ಹೇಗೆ? ಇಲ್ಲಿದೆ ಡೀಟೇಲ್ಸ್

ಇನ್ಫೋಸಿಸ್ ಡಿವಿಡೆಂಡ್​​ನಲ್ಲಿ ಹೆಚ್ಚು ಲಾಭ ಮಾಡಿದವರಿವರು…

  • ಸುಧಾ ಗೋಪಾಲಕೃಷ್ಣನ್: 9.5 ಕೋಟಿ ಷೇರುಗಳಿಂದ 410 ಕೋಟಿ ರೂ ಡಿವಿಡೆಂಡ್
  • ರೋಹನ್ ಮೂರ್ತಿ: 6 ಕೋಟಿ ಷೇರುಗಳಿಂದ 261.5 ಕೋಟಿ ರೂ ಡಿವಿಡೆಂಡ್
  • ನಂದನ್ ನಿಲೇಕಣಿ: 4 ಕೋಟಿ ಷೇರುಗಳಿಂದ 175 ಕೋಟಿ ರೂ ಡಿವಿಡೆಂಡ್
  • ಅಕ್ಷತಾ ಮೂರ್ತಿ: 3.8 ಕೋಟಿ ಷೇರುಗಳಿಂದ 167 ಕೋಟಿ ರೂ
  • ಕ್ರಿಸ್ ಗೋಪಾಲಕೃಷ್ಣನ್: 3.2 ಕೋಟಿ ಷೇರುಗಳಿಂದ 137 ಕೋಟಿ ರೂ ಡಿವಿಡೆಂಡ್
  • ನಾರಾಯಣಮೂರ್ತಿ: 1.5 ಕೋಟಿ ಷೇರುಗಳಿಂದ 65 ಕೋಟಿ ರೂ ಡಿವಿಡೆಂಡ್
  • ಇನ್ಫೋಸಿಸ್ ಸಹ-ಸಂಸ್ಥಾಪಕರು ಮತ್ತು ಕುಟುಂಬದವರು ಹೊಂದಿರುವ ಷೇರುಪಾಲು
  • ಪ್ರೊಮೋಟರ್​​ಗಳ ಒಟ್ಟಾರೆ ಷೇರುಪಾಲು ಶೇ. 14.60 ಮಾತ್ರವೇ ಇರುವುದು
  • ಸುಧಾ ಗೋಪಾಲಕೃಷ್ಣನ್: ಶೇ. 2.57
  • ರೋಹನ್ ಮೂರ್ತಿ: ಶೇ. 1.64
  • ನಂದನ್ ನಿಲೇಕಣಿ: ಶೇ. 1.10
  • ಅಕ್ಷತಾ ಮೂರ್ತಿ: ಶೇ. 1.05
  • ಆಶಾ ದಿನೇಶ್: ಶೇ. 1.04
  • ಎಸ್ ಗೋಪಾಲಕೃಷ್ಣನ್: ಶೇ. 0.86
  • ಸುಧಾ ಮೂರ್ತಿ: ಶೇ. 0.93
  • ರೋಹಿಣಿ ನಿಲೇಕಣಿ: ಶೇ. 0.92
  • ದಿನೇಶ್ ಕೃಷ್ಣಸ್ವಾಮಿ: ಶೇ. 0.87
  • ಶ್ರೇಯಸ್ ಶಿಬುಲಾಲ್: ಶೇ. 0.54
  • ನಾರಾಯಣಮೂರ್ತಿ: ಶೇ. 0.41
  • ನಿಹಾರ್ ನಿಲೇಕಣಿ: ಶೇ. 0.34
  • ಗೌರವ್ ಮಾನಚಂದ: ಶೇ. 0.16
  • ಮೇಘನಾ ಗೋಪಾಲಕೃಷ್ಣನ್: ಶೇ. 0.40
  • ಜಾಹ್ನವಿ ನಿಲೇಕಣಿ: ಶೇ. 0.23
  • ದೀಕ್ಷಾ ದಿನೇಶ್: ಶೇ. 0.21
  • ದಿವ್ಯಾ ದಿನೇಶ್: ಶೇ. 0.21
  • ಮಿಲನ್ ಶಿಬುಲಾಲ್ ಮಾನಚಂದ: ಶೇ. 0.16
  • ನಿಕಿತಾ ಶಿಬುಲಾಲ್ ಮಾನಚಂದ: ಶೇ. 0.16
  • ಭೈರವಿ ಮಧುಸೂದನ್ ಶಿಬುಲಾಲ್: ಶೇ. 0.15
  • ಎಸ್.ಡಿ. ಶಿಬುಲಾಲ್: ಶೇ. 0.14
  • ಕುಮಾರಿ ಶಿಬುಲಾಲ್: ಶೇ. 0.13
  • ತನುಷ್ ನಿಲೇಕಣಿ: ಶೇ. 0.09
  • ಶ್ರುತಿ ಶಿಬುಲಾಲ್: ಶೇ. 0.23
  • ಏಕಾಗ್ರ ರೋಹನ್ ಮೂರ್ತಿ: ಶೇ. 0.04
  • ಶ್ರಾಯ್ ಚಂದ್ರ: ಶೇ. 0.02

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ