AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಷೂರೆನ್ಸ್ ಪಡೆಯುವಾಗ ನಿಮ್ಮ ಧೂಮಪಾನ ಚಟ ಮುಚ್ಚಿಟ್ಟರೆ ಏನಾಗುತ್ತೆ? ವಿಮಾ ಸಂಸ್ಥೆಗೆ ಗೊತ್ತಾಗೋದು ಹೇಗೆ? ಇಲ್ಲಿದೆ ಡೀಟೇಲ್ಸ್

Insurance policy and tobacco usage: ಇನ್ಷೂರೆನ್ಸ್ ಪಾಲಿಸಿ ಪಡೆಯುವಾಗ ಆರೋಗ್ಯ ತೊಂದರೆ ಸೇರಿದಂತೆ ಯಾವುದೇ ಮಾಹಿತಿಯನ್ನು ಮುಚ್ಚಿಟ್ಟರೆ ಮುಂದೆ ಕಷ್ಟವಾಗುತ್ತದೆ. ನೀವು ಸ್ಮೋಕ್ ಮಾಡುವ ಚಟ ಹೊಂದಿದ್ದರೆ ಪಾಲಿಸಿ ವೇಳೆ ಅದನ್ನು ತಪ್ಪದೇ ನಮೂದಿಸಬೇಕು. ಪ್ರೀಮಿಯಮ್ ಹೆಚ್ಚಾಗಬಹುದು, ಆದರೆ, ಪಾಲಿಸಿ ಸುಭದ್ರವಾಗಿರುತ್ತದೆ. ನೀವು ಮಾಹಿತಿ ಮುಚ್ಚಿಟ್ಟರೆ ಪಾಲಿಸಿ ಹಣ ಕ್ಲೇಮ್ ಮಾಡಲು ಕಷ್ಟವಾಗಬಹುದು.

ಇನ್ಷೂರೆನ್ಸ್ ಪಡೆಯುವಾಗ ನಿಮ್ಮ ಧೂಮಪಾನ ಚಟ ಮುಚ್ಚಿಟ್ಟರೆ ಏನಾಗುತ್ತೆ? ವಿಮಾ ಸಂಸ್ಥೆಗೆ ಗೊತ್ತಾಗೋದು ಹೇಗೆ? ಇಲ್ಲಿದೆ ಡೀಟೇಲ್ಸ್
ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 03, 2025 | 12:40 PM

ನವದೆಹಲಿ, ಜೂನ್ 3: ತಂಬಾಕು ಸೇವನೆ, ಅದರಲ್ಲೂ ಧೂಮಪಾನ ಭಾರತದಲ್ಲಿ ಅತಿಹೆಚ್ಚು ಆರೋಗ್ಯಹಾನಿ ಮಾಡುವ ಚಟಗಳಲ್ಲಿ ಒಂದು. ಭಾರತದಲ್ಲಿ 15 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಶೇ. 28ಕ್ಕೂ ಹೆಚ್ಚು ಮಂದಿ ತಂಬಾಬು ಸೇವನೆ ಮಾಡುತ್ತಾರಂತೆ. ಕ್ಯಾನ್ಸರ್, ಉಸಿರಾಟ ತೊಂದರೆ, ಶ್ವಾಸಕೋಶ ಕಾಯಿಲೆ, ಹೃದಯ ಕಾಯಿಲೆಗಳಿಗೆ ಹೆಚ್ಚಾಗಿ ಈ ಸಿಗರೇಟ್ ಚಟ ಕಾರಣ. ಹೀಗಾಗಿ, ಇನ್ಷೂರೆನ್ಸ್ ಕಂಪನಿಗಳು ಪಾಲಿಸಿ ನೀಡುವಾಗ ಬಹಳ ಎಚ್ಚರ ವಹಿಸುತ್ತವೆ.

ಧೂಮಪಾನಿಗಳಿಗೆ ಹೆಚ್ಚಿನ ಇನ್ಷೂರೆನ್ಸ್ ಪ್ರೀಮಿಯಂ

ನೀವು ಧೂಮಪಾನಿಗಳಾಗಿದ್ದರೆ ಟರ್ಮ್ ಲೈಫ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳನ್ನು ಪಡೆಯಲು ಹೆಚ್ಚಿನ ಪ್ರೀಮಿಯಮ್ ನೀಡಬೇಕಾಗುತ್ತದೆ. ಕೆಲವೊಮ್ಮೆ ಎರಡು ಪಟ್ಟು ಹೆಚ್ಚು ಪ್ರೀಮಿಯಮ್ ಪಾವತಿಸುವಂತೆ ವಿಮಾ ಸಂಸ್ಥೆಗಳು ತಿಳಿಸಬಹುದು.

ಇದನ್ನೂ ಓದಿ: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್

ಪಾಲಿಸಿ ಪಡೆದ ಬಳಿಕ ಧೂಮಪಾನ ಬಿಟ್ಟರೆ?

ನೀವು ಟರ್ಮ್ ಲೈಫ್ ಇನ್ಷೂರೆನ್ಸ್ ಪಡೆದ ಬಳಿಕ ಧೂಮಪಾನ ಚಟ ಬಿಟ್ಟುಬಿಟ್ಟರೆ ಪ್ರೀಮಿಯಮ್​​ನಲ್ಲಿ ಇಳಿಕೆಯಾಗುವ ಸಾಧ್ಯತೆ ಕಡಿಮೆ. ಟರ್ಮ್ ಲೈಫ್ ಇನ್ಷೂರೆನ್ಸ್​​ನ ಪ್ರೀಮಿಯಮ್ ಒಮ್ಮೆ ನಿಗದಿಯಾದರೆ ಕೊನೆಯವರೆಗೂ ಅದು ಬದಲಾಗುವುದಿಲ್ಲ.

ಆದರೆ, ಹೆಲ್ತ್ ಇನ್ಷೂರೆನ್ಸ್ ವಿಚಾರದಲ್ಲಿ ಸ್ವಲ್ಪ ಸಡಿಲಿಕೆ ಇದೆ. ನೀವು 12ರಿಂದ 24 ತಿಂಗಳ ಕಾಲ ತಂಬಾಕು ಮುಕ್ತರಾಗಿದ್ದರು, ಅದಕ್ಕೆ ಬೇಕಾದ ವೈದ್ಯಕೀಯ ಪುರಾವೆ ಒದಗಿಸಬೇಕು. ಮುಂಬರುವ ಪಾಲಿಸಿ ರಿನಿವಲ್ ಸಮಯದಲ್ಲಿ ಈ ದಾಖಲೆ ಸಲ್ಲಿಸಿದರೆ ನಿಮ್ಮನ್ನು ನಾನ್-ಸ್ಮೋಕರ್ ಎಂದು ಮರುವರ್ಗೀಕರಿಸಿ, ಪ್ರೀಮಿಯಮ್ ಅನ್ನು ಕಡಿಮೆ ಮಾಡಲಾಗುತ್ತದೆ.

ಇದನ್ನೂ ಓದಿ: ಪಿಎಂಜೆಎವೈ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್​​ನಲ್ಲಿ ಒಳಗೊಳ್ಳದ ಚಿಕಿತ್ಸೆಗಳ್ಯಾವುವು? ಇಲ್ಲಿದೆ ಕೆಲ ಮಾಹಿತಿ

ಸ್ಮೋಕಿಂಗ್ ಅಭ್ಯಾಸ ಮುಚ್ಚಿಟ್ಟು ಇನ್ನೂರೆನ್ಸ್ ಪಡೆದರೆ?

ಹಲವು ವಿಮಾ ಸಂಸ್ಥೆಗಳು ಪಾಲಿಸಿ ನೀಡುವ ಮುನ್ನ ವೈದ್ಯಕೀಯ ತಪಾಸಣೆ ನಡೆಸುತ್ತವೆ. ಈ ವೇಳೆ, ವ್ಯಕ್ತಿಯ ರಕ್ತ, ಮೂತ್ರ, ಎಂಜಲು ಅಥವಾ ಕೂದಲನ್ನು ಪರೀಕ್ಷಿಸಿ, ನಿಕೋಟಿನ್ ಇದೆಯಾ ಎಂದು ಕಂಡುಹಿಡಿಯಲಾಗುತ್ತದೆ. ಅಥವಾ, ಶ್ವಾಸಕೋಶ, ಹೃದಯ ಇತ್ಯಾದಿ ತೊಂದರೆಯಿಂದ ವ್ಯಕ್ತಿ ಸಾವನಪ್ಪಿದಾಗ ಅಥವಾ ಆಸ್ಪತ್ರೆಗೆ ದಾಖಲಾದಾಗ, ಅದಕ್ಕೆ ತಂಬಾಕು ಕಾರಣವಾ ಎಂದು ವಿಮಾ ಸಂಸ್ಥೆ ವಿಚಾರಿಸುತ್ತದೆ. ಆಗ ಆ ವ್ಯಕ್ತಿಗೆ ಇನ್ಷೂರೆನ್ಸ್ ಹಣ ಕ್ಲೇಮ್ ಆಗದೇ ಹೋಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ