AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಈಗಿನ ಆರ್ಥಿಕ ಮಟ್ಟ ತಲುಪಲು ಭಾರತಕ್ಕೆ ಇನ್ನೆಷ್ಟು ವರ್ಷ ಬೇಕು?: ಅಮಿತಾಭ್ ಕಾಂತ್ ಉತ್ತರ ಇದು

Amitabh Kant says India GDP size could reach 30 trillion USD by 2047: ನಾಲ್ಕು ಟ್ರಿಲಿಯನ್ ಡಾಲರ್ ಜಿಡಿಪಿ ಇರುವ ಭಾರತವು 1947ರೊಳಗೆ 30 ಟ್ರಿಲಿಯನ್ ಡಾಲರ್ ಸಮೀಪದ ಆರ್ಥಿಕತೆಯ ದೇಶವಾಗಬಹುದು ಎಂದು ಆರ್ಥಿಕ ತಜ್ಞ ಅಮಿತಾಭ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಈಗಿನ ಜಿಡಿಪಿ 30 ಟ್ರಿಲಿಯನ್ ಡಾಲರ್ ಇದೆ. ಈ ಮಟ್ಟಕ್ಕೆ ಹೋಗಲು ಭಾರತ ಇನ್ನೂ 22 ವರ್ಷ ಇದೇ ರೀತಿ ಬೆಳವಣಿಗೆ ಹೊಂದಬೇಕಾಗುತ್ತದೆ.

ಅಮೆರಿಕದ ಈಗಿನ ಆರ್ಥಿಕ ಮಟ್ಟ ತಲುಪಲು ಭಾರತಕ್ಕೆ ಇನ್ನೆಷ್ಟು ವರ್ಷ ಬೇಕು?: ಅಮಿತಾಭ್ ಕಾಂತ್ ಉತ್ತರ ಇದು
ಅಮಿತಾಭ್ ಕಾಂತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2025 | 7:27 PM

Share

ನವದೆಹಲಿ, ಜೂನ್ 2: ನಾಲ್ಕು ಟ್ರಿಲಿಯನ್ ಡಾಲರ್ ಇರುವ ಭಾರತದ ಆರ್ಥಿಕತೆ (Indian economy) ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ ಸದ್ಯ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಆರ್ಥಿಕ ತಜ್ಞ ಹಾಗೂ ಜಿ20 ಶೆರ್ಪಾ ಅಮಿತಾಭ್ ಕಾಂತ್ ಪ್ರಕಾರ ಅಮೆರಿಕದ ಈಗಿನ ಜಿಡಿಪಿ ಮಟ್ಟವನ್ನು ಭಾರತ ಇನ್ನೆರಡೂವರೆ ದಶಕದಲ್ಲಿ ಮುಟ್ಟಬಹುದು. 4 ಟ್ರಿಲಿಯನ್ ಡಾಲರ್ ಇರುವ ಭಾರತದ ಆರ್ಥಿಕತೆಯು 2047ರೊಳಗೆ 30 ಟ್ರಿಲಿಯನ್ ಡಾಲರ್ ಸಮೀಪಕ್ಕೆ ಹೋಗಬಹುದು ಎಂದು ಅಮಿತಾಭ್ ಕಾಂತ್ ಹೇಳುತ್ತಾರೆ.

ಅಮೆರಿಕದ ಜಿಡಿಪಿ ಈಗ 30 ಟ್ರಿಲಿಯನ್ ಡಾಲರ್ ಇದೆ. ಚೀನಾದ ಆರ್ಥಿಕತೆ 19 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿದೆ. ಜರ್ಮನಿ, ಜಪಾನ್ ಮತ್ತು ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್​​ಗಿಂತ ಹೆಚ್ಚಿದೆ. ಅತಿದೊಡ್ಡ ಆರ್ಥಿಕತೆಯಲ್ಲಿ ಭಾರತವು ಜರ್ಮನಿಗಿಂತ ಒಂದು ಸ್ಥಾನ ಕೆಳಗಿದೆ.

ಭಾರತದ ಯುವ ಜನಸಂಖ್ಯೆಯ ಬಲ…

ಇಂಟರ್ನ್ಯಾಷನಲ್ ಏರ್ ಟ್ರಾನ್ಸ್​​ಪೋರ್ಟ್ ಅಸೋಷಿಯೇಶನ್​​ನ ಸಭೆಯಲ್ಲಿ ಮಾತನಾಡುತ್ತಿದ್ದ ಅಮಿತಾಭ್ ಕಾಂತ್, ಭಾರತಕ್ಕೆ ಅದರ ಯುವಜನರ ಸಂಖ್ಯಾ ಬಲ ಇರುವುದನ್ನು ಎತ್ತಿತೋರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಬಳಿ ಇದೆ ಭಾರತದ 20 ಲಕ್ಷ ಕೋಟಿ ರೂ ಹಣ; ಸಾಲ ತೀರಿಸದೇ ಇದ್ದರೆ ಏನಾಗುತ್ತೆ?

‘ಭಾರತಕ್ಕೆ ಜನಸಂಖ್ಯಾ ಬಲ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನರಿಗೆ ವಯಸ್ಸಾಗುತ್ತಿದೆ. ಜಪಾನ್​​​ಗೆ ಈಗಾಗಲೇ ವಯಸ್ಸಾಗಿ ಹೋಗಿದೆ. ಚೀನಾ ಕೂಡ ಹೆಚ್ಚು ವಯಸ್ಸಾಗುತ್ತಾ ಬಂದಿದೆ. ಭಾರತೀಯರ ಸರಾಸರಿ ವಯಸ್ಸು ಈಗ 28 ವರ್ಷ ಇದೆ. 1947ರಲ್ಲೂ ಸರಾಸರಿ ವಯಸ್ಸು 35 ವರ್ಷ ಇರಲಿದೆ. ಇದು ಬೇಬಿ ಬೂಮರ್​​ಗಳ ದೇಶ’ ಎಂದು ಅಮಿತಾಭ್ ಕಾಂತ್ ಬಣ್ಣಿಸಿದ್ದಾರೆ.

ಹೊಸ ನಗರಗಳನ್ನು ಕಟ್ಟುವ ಅವಶ್ಯಕತೆ ಭಾರತಕ್ಕಿದೆ…

ಭಾರತದಲ್ಲಿ ನಗರೀಕರಣ ಪ್ರಕ್ರಿಯೆಗೆ ಪೂರಕವಾಗಿ 500 ಹೊಸ ನಗರಗಳ ಸ್ಥಾಪನೆಯ ಅವಶ್ಯಕತೆ ಇದೆ. ಮುಂದಿನ ಐದು ದಶಕದಲ್ಲಿ ನಾವು ಎರಡು ಅಮೆರಿಕವನ್ನು ಸೃಷ್ಟಿಸಬೇಕಿದೆ. ಪ್ರತೀ ಐದು ವರ್ಷಕ್ಕೆ ಒಂದು ಚಿಕಾಗೋ ನಗರ ಸ್ಥಾಪಿಸಬೇಕಿದೆ. ಇದು ಭಾರತಕ್ಕೆ ಇರುವ ಸವಾಲು ಎಂದು ಮಾಜಿ ನೀತಿ ಆಯೋಗ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವ್ಯಾಪಾರ ಕುದುರಿಸಲು ಭಾರತದ ಇಂಡಿಗೋ, ಏರ್ ಇಂಡಿಯಾ ಜೊತೆ ಬ್ರೆಜಿಲ್​ನ ಎಂಬ್ರೇರ್ ಮಾತುಕತೆ

400 ಏರ್​​ಪೋರ್ಟ್​​ಗಳ ಸ್ಥಾಪನೆಯ ಗುರಿ

ಭಾರತದಲ್ಲಿ ಕಾರ್ಯನಿರ್ವಹಣೆ ಆಗುತ್ತಿರುವ 150ಕ್ಕೂ ಹೆಚ್ಚು ಏರ್​​ಪೋರ್ಟ್​​ಗಳಿವೆ. 400 ಏರ್​ಪೋರ್ಟ್​​ಗಳ ನಿರ್ಮಾಣ ಆಗಬೇಕು. ನಿಮಗೆ ಒಳ್ಳೆಯ ವಿಮಾನ ನಿಲ್ದಾಣಗಳು, ಉತ್ತಮ ಏರ್​ಲೈನ್​​ಗಳು ಅವಶ್ಯಕ ಉಂಟು ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ