ಆರ್‌ಬಿಐ (Reserve Bank of India) ಇಂದು ಮಹತ್ವದ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಕ್ರೆಡಿಟ್ ಕಾರ್ಡ್ ವಿತರಕರು ಇತರ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳಬಾರದು ಎಂದು ಹೇಳಿದೆ. ಹಾಗೂ ಇತರ ಕ್ರೆಡಿಟ್ ಕಾರ್ಡ್ ನೆಟ್‌ವರ್ಕ್ ಸೇವೆಗಳನ್ನು ಪಡೆಯುವುದನ್ನು ತಡೆಯಬಹುದು ಎಂದು ಹೇಳಿದೆ. ಕಾರ್ಡ್ ವಿತರಕರು ತಮ್ಮ ಅರ್ಹ ಗ್ರಾಹಕರಿಗೆ ಕಾರ್ಡ್ ವಿತರಿಸುವಾಗ ಅವರಿಗೆ ಬಹು ಆಯ್ಕೆಯ ವ್ಯವಸ್ಥೆಯನ್ನು ನೀಡಬೇಕು ಎಂದು ಹೇಳಿದೆ.
ಕ್ರೆಡಿಟ್ ಕಾರ್ಡ್ ನೀಡುವಾಗ ಗ್ರಾಹಕರಿಗೆ ಬಹು ಆಯ್ಕೆಯನ್ನು ಕ್ರೆಡಿಟ್ ಕಾರ್ಡ್ ವಿತರಕರು ಅಗತ್ಯವಾಗಿ ನೀಡಬೇಕು ಹಾಗೂ ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮುಂದಿನ ನವೀಕರಣದ ಅಥವಾ ಅಪ್ಡೇಟ್ ಸಮಯದಲ್ಲಿ ಈ ಬಹು ಆಯ್ಕೆಗಳನ್ನು ನೀಡಬಹುದು ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಕ್ರೆಡಿಟ್ ಕಾರ್ಡ್ ವಿತರಕರು ತಮ್ಮ ಗ್ರಾಹಕರಿಗೆ ಕೆಲವೊಂದು ಇಂತಹ ವ್ಯವಸ್ಥೆಗಳನ್ನು ನೀಡಿಲ್ಲ ಎಂದು ಗಮನಿಸಿದ ಕಾರಣ ಈ ಕ್ರಮವನ್ನು ತಂದಿದೆ.
ಈ ಮಾರ್ಗಸೂಚಿಯ ಪ್ರಮುಖ ಉದ್ದೇಶ, ಕ್ರೆಡಿಟ್ ಕಾರ್ಡ್‌ಗಳ ವಿತರಣೆ ಮತ್ತು ಬಳಕೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಮತ್ತು ನಮ್ಯತೆಯನ್ನು ಒದಗಿಸುವುದು ಆರ್‌ಬಿಐ ಉದ್ದೇಶವಾಗಿದೆ. ಕಾರ್ಡ್ ನೆಟ್‌ವರ್ಕ್‌ಗಳು ಮತ್ತು ವಿತರಕರ ನಡುವಿನ ಕೆಲವು ವ್ಯವಸ್ಥೆಗಳು ಗ್ರಾಹಕರ ಆಯ್ಕೆಗಳನ್ನು ಸೀಮಿತಗೊಳಿಸುತ್ತಿವೆ ಎಂದು ಆರ್‌ಬಿಐ ಹೇಳಿದೆ. ಅದಕ್ಕಾಗಿ ಕೇಂದ್ರ ಬ್ಯಾಂಕ್ ಈ ನಿರ್ದೇಶನವನ್ನು ನೀಡಿದೆ:
1.ಕ್ರೆಡಿಟ್ ಕಾರ್ಡ್ ವಿತರಕರು ಇತರ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳಬಾರದು.
2. ಕಾರ್ಡ್ ವಿತರಕರು ಅರ್ಹ ಗ್ರಾಹಕರಿಗೆ ಕಾರ್ಡ್ ನೀಡುವಾಗ ಬಹು ಕಾರ್ಡ್ ನೆಟ್‌ವರ್ಕ್‌ಗಳಿಂದ ಆಯ್ಕೆ ಮಾಡುವ ಆಯ್ಕೆಯನ್ನು ನೀಡಬೇಕು.
3. ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮುಂದಿನ ನವೀಕರಣದ ಅಥವಾ ಅಪ್ಡೇಟ್ ಸಮಯದಲ್ಲಿ ಈ ಬಹು ಆಯ್ಕೆಗಳನ್ನು ನೀಡಬಹುದು.
ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಬ್ಯಾಂಕಿಂಗ್ ಲೈಸೆನ್ಸ್ ರದ್ದಾಗುವ ಸಾಧ್ಯತೆ; ಆಡಳಿತಗಾರರ ನೇಮಕಕ್ಕೆ ಆರ್‌ಬಿಐ ಯೋಜನೆ
ಆರ್‌ಬಿಐ ತನ್ನ ನಿರ್ದೇಶನದಲ್ಲಿ ಅಧಿಕೃತ ಕಾರ್ಡ್ ನೆಟ್‌ವರ್ಕ್‌ಗಳನ್ನು ಹೀಗೆ ವ್ಯಾಖ್ಯಾನಿಸಿದೆ. ಅಮೇರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್, ಡೈನರ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಲಿಮಿಟೆಡ್., ಮಾಸ್ಟರ್‌ಕಾರ್ಡ್ ಏಷ್ಯಾ/ಪೆಸಿಫಿಕ್ ಪ್ರೈ. Ltd., ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ-ರುಪೇ ಮತ್ತು ವೀಸಾ ವರ್ಲ್ಡ್‌ವೈಡ್ Pteಗೆ ಸೀಮಿತಗೊಳಿಸಲಾಗಿದೆ.
₹ 10 ಲಕ್ಷಕ್ಕಿಂತ ಕಡಿಮೆ ವ್ಯವಹಾರ ನಡೆಸುವ ಕಾರ್ಡ್‌ದಾರರಿಗೆ ಕ್ರೆಡಿಟ್ ಕಾರ್ಡ್ ವಿತರಕರ ಈ ನಿರ್ದೇಶನಗಳು ಅನ್ವಯಿಸುವುದಿಲ್ಲ.
ಕ್ರೆಡಿಟ್ ಕಾರ್ಡ್ ವಿತರಿಸುವ ಸಮಯದಲ್ಲಿ ಗ್ರಾಹಕರ ಆಯ್ಕೆಗೆ ಸಂಬಂಧಿಸಿದ ನಿರ್ದೇಶನವು ಈ ಸುತ್ತೋಲೆಯ ದಿನಾಂಕದಿಂದ ಆರು ತಿಂಗಳವರೆಗೆ ಜಾರಿಗೆ ಬರಲಿದೆ ಎಂದು ಆರ್‌ಬಿಐ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ