ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಬ್ಯಾಂಕಿಂಗ್ ಲೈಸೆನ್ಸ್ ರದ್ದಾಗುವ ಸಾಧ್ಯತೆ; ಆಡಳಿತಗಾರರ ನೇಮಕಕ್ಕೆ ಆರ್​ಬಿಐ ಯೋಜನೆ

Paytm Payments Bank updates: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನೀಡಲಾಗಿದ್ದ ಬ್ಯಾಂಕಿಂಗ್ ಲೈಸೆನ್ಸ್ ಅನ್ನು ಆರ್​ಬಿಐ ಹಿಂಪಡೆಯುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಕಳೆದ 20 ವರ್ಷದಲ್ಲಿ ಯಾವ ಬ್ಯಾಂಕಿಗೂ ಲೈಸೆನ್ಸ್ ರದ್ದು ಮಾಡಿದ್ದಿಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ನಿತ್ಯದ ಕಾರ್ಯಾಚರಣೆಯನ್ನು ನೋಡಿಕೊಳ್ಳಲು ಆರ್​ಬಿಐನಿಂದ ಆಡಳಿತಗಾರರೊಬ್ಬರ ನೇಮಕವಾಗಬಹುದು ಎನ್ನಲಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಬ್ಯಾಂಕಿಂಗ್ ಲೈಸೆನ್ಸ್ ರದ್ದಾಗುವ ಸಾಧ್ಯತೆ; ಆಡಳಿತಗಾರರ ನೇಮಕಕ್ಕೆ ಆರ್​ಬಿಐ ಯೋಜನೆ
ಆರ್​ಬಿಐ
Follow us
|

Updated on: Mar 04, 2024 | 4:48 PM

ನವದೆಹಲಿ, ಮಾರ್ಚ್ 4: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನೀಡಿದ್ದ ಬ್ಯಾಂಕಿಂಗ್ ಪರವಾನಿಗೆಯನ್ನು (Banking license) ರದ್ದುಗೊಳಿಸುವ ಸಾಧ್ಯತೆ ಇದೆ. ಹಿಂದೂ ಬಿಸಿನೆಸ್ ಲೈನ್ ಪತ್ರಿಕೆಯಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿದ್ದು ಅದರ ಪ್ರಕಾರ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್ ಕಳೆದುಕೊಳ್ಳಬಹುದು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಚಟುವಟಿಕೆಯನ್ನು ನಿರ್ಬಂಧಿಸಿದ್ದಾಗಲೇ ಬ್ಯಾಂಕಿಂಗ್ ಲೈಸೆನ್ಸ್ ಹಿಂಪಡೆಯಬಹುದು ಎಂದು ಸುದ್ದಿಗಳು ಇದ್ದವು. ಈಗ ಆ ಸುದ್ದಿಯನ್ನು ಇನ್ನಷ್ಟು ಬಲಗೊಳಿಸಿದೆ. ಒಂದು ವೇಳೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್ ಕಳೆದುಕೊಂಡರೆ, ಕಳೆದ 20 ವರ್ಷದಲ್ಲಿ ಇಂಥದ್ದು ಇದೇ ಮೊದಲು ಎಂಬಂತಾಗುತ್ತದೆ. ಲೈಸೆನ್ಸ್ ರದ್ದು ಮಾಡುವುದು ಅಷ್ಟೇ ಅಲ್ಲ, ಪೇಮೆಂಟ್ಸ್ ಬ್ಯಾಂಕ್​ನ ನಿತ್ಯದ ಕಾರ್ಯಗಳ ಮೇಲೆ ನಿಗಾ ಇಡಲು ಆರ್​ಬಿಐ ಒಬ್ಬ ಆಡಳಿತಗಾರರನ್ನು ನೇಮಿಸುವ ಸಾಧ್ಯತೆ ಇದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಆರ್​ಬಿಐ ನಿರ್ಬಂಧಿಸಲು ಕೆಲ ಪ್ರಬಲ ಕಾರಣಗಳಿವೆ. ಆ ಬ್ಯಾಂಕ್ ತನ್ನ ಗ್ರಾಹಕರಿಗೆ ಖಾತೆ ನೀಡುವಾಗ ಸರಿಯಾಗಿ ಕೆವೈಸಿ ಪಡೆದಿಲ್ಲ ಎನ್ನುವುದು ಪ್ರಮುಖ ಆರೋಪ. ಪೇಮೆಂಟ್ಸ್ ಬ್ಯಾಂಕ್ ಮತ್ತು ಒನ್97 ಕಮ್ಯೂನಿಕೇಶನ್ಸ್​ನ ಇತರ ಸಂಸ್ಥೆಗಳ ನಡುವೆ ಒಪ್ಪಂದ ಇದೆ. ಬ್ಯಾಂಕಿಂಗ್ ನಿಯಮದ ಪ್ರಕಾರ ಪೇಮೆಂಟ್ಸ್ ಬ್ಯಾಂಕ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪೇಟಿಎಂ ಮತ್ತು ಪೇಮೆಂಟ್ಸ್ ಬ್ಯಾಂಕ್ ಎರಡಕ್ಕೂ ಒಬ್ಬರೇ ಮುಖ್ಯಸ್ಥರಿದ್ದಾರೆ ಎಂಬುದು ಇನ್ನೊಂದು ಪ್ರಮುಖ ಆರೋಪ. ಈ ಕಾರಣಕ್ಕೆ ಬ್ಯಾಂಕಿಂಗ್ ಲೈಸೆನ್ಸ್ ರದ್ದುಗೊಳಿಸಲು ಆರ್​ಬಿಐ ಮುಂದಾಗಿರಬಹುದು.

ಇದನ್ನೂ ಓದಿ: ಮಹಿಳೆಗೆ ಮಾಸಿಕ 1,000 ರೂ ಧನಸಹಾಯ; ಶಿಕ್ಷಣ ಕ್ಷೇತ್ರಕ್ಕೆ ಶೇ. 21ಕ್ಕಿಂತ ಹೆಚ್ಚು ಹಣ; ದೆಹಲಿ ಸರ್ಕಾರದ ಬಜೆಟ್ ಧಮಾಕ

ಪೇಟಿಎಂನ ಯುಪಿಐ ಮತ್ತಿತರ ಕಡೆ ಪೇಮೆಂಟ್ಸ್ ಬ್ಯಾಂಕ್ ಜೋಡಿತವಾಗಿದೆ. ಅದೆಲ್ಲವನ್ನೂ ಈಗ ಕಡಿದುಕೊಳ್ಳಬೇಕಾಗುತ್ತದೆ. ಪೇಟಿಎಂ ಮತ್ತು ಪೇಮೆಂಟ್ಸ್ ಬ್ಯಾಂಕ್ ನಡುವಿನ ಎಲ್ಲಾ ಒಪ್ಪಂದಗಳನ್ನು ಈಗ ಮುರಿದುಕೊಳ್ಳಲಾಗಿದೆ. ಪೇಮೆಂಟ್ಸ್ ಬ್ಯಾಂಕ್ ಬದಲು ಇತರ ಬ್ಯಾಂಕುಗಳೊಂದಿಗೆ ಪೇಟಿಎಂ ಒಪ್ಪಂದ ಮಾಡಿಕೊಳ್ಳಲು ಯತ್ನಿಸುತ್ತಿದೆ.

ಇದೇ ವೇಳೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಪಡೆದುಕೊಳ್ಳಲು ಕೆಲ ಪ್ರಮುಖ ಬ್ಯಾಂಕುಗಳು ತಯಾರಾಗಿವೆ. ಆದರೆ, ಲಕ್ಷಾಂತರ ಇರುವ ಖಾತೆಗಳಲ್ಲಿ ಹೊಸದಾಗಿ ಕೆವೈಸಿ ಪಡೆಯುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ, ಈ ಪ್ರಯತ್ನ ಇನ್ನೂ ಕೈಗೂಡಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್