ಜಿ20 ದೇಶಗಳ ಪೈಕಿ ಭಾರತವೇ ಅತಿ ಫಾಸ್ಟ್ ಎಂದ ಮೂಡೀಸ್; ಈ ವರ್ಷ ಶೇ. 6.8ರಷ್ಟು ಜಿಡಿಪಿ ಬೆಳೆವಣಿಗೆ ಅಂದಾಜು

Moody's prediction of Indian Economy: 2024ರ ಕ್ಯಾಲಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.1ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಹೇಳಿದ್ದ ಮೂಡೀಸ್ ಈಗ ಲೆಕ್ಕಾಚಾರ ಬದಲಿಸಿ, ಶೇ. 6.8ರಷ್ಟು ಬೆಳೆಯಬಹುದು ಎಂದು ಹೇಳಿದೆ. ಭಾರತದ ಜಿಡಿಪಿ ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಶೇ. 8.4ರಷ್ಟು ಬೆಳವಣಿಗೆ ದಾಖಲಿಸಿತ್ತು. ಇದು 2024ರ ಮೊದಲ ಕ್ವಾರ್ಟರ್​ನಲ್ಲೂ ಮುಂದುವರಿಯಬಹುದು ಎಂದು ಮೂಡೀಸ್ ಹೇಳಿದೆ.

ಜಿ20 ದೇಶಗಳ ಪೈಕಿ ಭಾರತವೇ ಅತಿ ಫಾಸ್ಟ್ ಎಂದ ಮೂಡೀಸ್; ಈ ವರ್ಷ ಶೇ. 6.8ರಷ್ಟು ಜಿಡಿಪಿ ಬೆಳೆವಣಿಗೆ ಅಂದಾಜು
ಭಾರತದ ಜಿಡಿಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2024 | 12:30 PM

ನವದೆಹಲಿ, ಮಾರ್ಚ್ 4: ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ (India GDP) ಅದ್ವಿತೀಯ ಬೆಳವಣಿಗೆ ಕಂಡಿದ್ದು ಭಾರತದ ಮುಂದಿನ ಓಟದ ಬಗ್ಗೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ಜಾಗತಿಕ ರೇಟಿಂಗ್ ಏಜೆನ್ಸಿ ಮೂಡೀಸ್ (Moody’s) ಭಾರತದ ಆರ್ಥಿಕತೆಯ ಬಗ್ಗೆ ತನ್ನ ನಿರೀಕ್ಷೆ ಹೆಚ್ಚಿಸಿದೆ. 2024ರ ಕ್ಯಾಲಂಡರ್ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.1ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಅಂದಾಜು ಮಾಡಿದ್ದ ಮೂಡೀಸ್ ಈಗ ತನ್ನ ಅಭಿಪ್ರಾಯ ಬದಲಿಸಿದೆ. 2024ರಲ್ಲಿ ಭಾರತದ ಜಿಡಿಪಿ ಶೇ. 6.8ರಷ್ಟು ಹೆಚ್ಚಾಗಬಹುದು ಎಂದು ಹೇಳಿದೆ. ಜಿ20 ಗುಂಪಿನ ದೇಶಗಳ ಪೈಕಿ ಆರ್ಥಿಕ ಬೆಳವಣಿಗೆಯ ವೇಗದಲ್ಲಿ ಭಾರತವೇ ಮುಂದಿರುವ ಸಾಧ್ಯತೆ ಇದೆ ಎಂದಿರುವ ಮೂಡೀಸ್, 2025ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೇ. 6.4ಕ್ಕೆ ನಿಗದಿ ಮಾಡಿದೆ.

ಇಲ್ಲಿ ಹಣಕಾಸು ವರ್ಷ ಮತ್ತು ಕ್ಯಾಲಂಡರ್ ವರ್ಷದ ವ್ಯತ್ಯಾಸ ತಿಳಿದಿರಲಿ. ಹಣಕಾಸ ವರ್ಷ ಒಂದು ವರ್ಷದ ಏಪ್ರಿಲ್ 1ರಂದು ಆರಂಭವಾಗಿ ಮುಂದಿನ ವರ್ಷದ ಮಾರ್ಚ್ 31ರವರೆಗೂ ಇರುತ್ತದೆ. 2024ರ ಹಣಕಾಸು ವರ್ಷ ಎಂದರೆ 2023ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗಿನ ಅವಧಿಯಾಗಿರುತ್ತದೆ. ಇನ್ನು, ಕ್ಯಾಲಂಡರ್ ವರ್ಷ ಎಂದರೆ ಜನವರಿ 1ರಿಂದ ಆರಂಭವಾಗಿ ಡಿಸೆಂಬರ್ 31ರವರೆಗಿನ ಅವಧಿಯಾಗಿರುತ್ತದೆ.

ಇದನ್ನೂ ಓದಿ: ಉದ್ಯೋಗಿಗಳಿಗೆ ಸಂಬಳ ಕೊಡಲು ಹಣ ಇಲ್ಲ; ಫಂಡಿಂಗ್ ಪಡೆಯಲೂ ಬಿಡುತ್ತಿಲ್ಲ: ಹೂಡಿಕೆದಾರರ ಮೇಲೆ ಬೈಜುಸ್ ಮಾಲೀಕರ ಅಸಮಾಧಾನ

2023ರಲ್ಲಿ ಭಾರತ ಒಳ್ಳೆಯ ಜಿಡಿಪಿ ಬೆಳವಣಿಗೆ ಕಂಡಿದೆ. ಮೂಡೀಸ್ ಪ್ರಕಾರ ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಾಗಿರುವುದು ಒಂದು ಕಾರಣವಾದರೆ, ತಯಾರಿಕಾ ಕ್ಷೇತ್ರದ ಚಟುವಟಿಕೆ ಗರಿಗೆದರಿರುವುದು ಇನ್ನೊಂದು ಕಾರಣವಾಗಿದೆ. ಡಿಸೆಂಬರ್ ಕ್ವಾರ್ಟರ್​ನಲ್ಲಿ ಕಂಡ ಅದ್ವಿತೀಯ ಆರ್ಥಿಕ ಬೆಳವಣಿಗೆ ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲೂ ಮುಂದುವರಿಯಬಹುದು ಎಂಬುದ ಮೂಡೀಸ್​ನ ಅನಿಸಿಕೆ.

ಭರ್ಜರಿ ಜಿಎಸ್​ಟಿ ಸಂಗ್ರಹ, ವಾಹನಗಳ ಮಾರಾಟ ಹೆಚ್ಚಳ, ಸಾಲ ನೀಡುವಿಕೆಯಲ್ಲಿ ಹೆಚ್ಚಳ, ನಗರಗಳಲ್ಲಿ ಬಳಕೆ ಹೆಚ್ಚಳ, ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸಸ್ ಸೆಕ್ಟರ್​ನ ಪಿಎಂಐ ಹೆಚ್ಚಳ ಇವೆಲ್ಲಾ ಅಂಶಗಳು ಭಾರತದ ಜಿಡಿಪಿವೃದ್ಧಿಗೆ ಪುಷ್ಟಿ ಕೊಡಬಹದು ಎಂದು ಮೂಡೀಸ್ ಹೇಳಿದೆ. ಹಾಗೆಯೇ, ಲೋಕಸಭಾ ಚುನಾವಣೆ ಬಳಿಕ ಈಗಿರುವ ಆರ್ಥಿಕ ನೀತಿಗಳೇ ಮುಂದುವರಿಯುವ ಸಾಧ್ಯತೆಯನ್ನು ಅದು ಗ್ರಹಿಸಿದೆ.

ಇದನ್ನೂ ಓದಿ: ಗೂಗಲ್ ಅನ್ನು ಬ್ರಿಟಿಷರ ಕುಖ್ಯಾತ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿ, ಛೇಡಿಸಿದ ಭಾರತೀಯ ಉದ್ಯಮಿ ಅನುಪಮ್ ಮಿತ್ತಲ್

ಭಾರತದ ಜಿಡಿಪಿ 2023ರ ಕ್ಯಾಲಂಡರ್ ವರ್ಷದಲ್ಲಿನ ನಾಲ್ಕು ತ್ರೈಮಾಸಿಕ ಅವಧಿಯಲ್ಲಿ ಕ್ರಮವಾಗಿ ಶೇ. 6.1, ಶೇ. 7.8, ಶೇ. 7.6 ಮತ್ತು ಶೇ. 8.4 ಬೆಳವಣಿಗೆ ದಾಖಲಾಗಿದೆ. ಆ ಕ್ಯಾಲಂಡರ್ ವರ್ಷದಲ್ಲಿ ಶೇ. 7.5ರಷ್ಟು ಜಿಡಿಪಿ ವೃದ್ಧಿಯಾದಂತಾಗಿದೆ. ಇದು ನಿಜಕ್ಕೂ ಅದ್ವಿತೀಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್