Byju’s: ಉದ್ಯೋಗಿಗಳಿಗೆ ಸಂಬಳ ಕೊಡಲು ಹಣ ಇಲ್ಲ; ಫಂಡಿಂಗ್ ಪಡೆಯಲೂ ಬಿಡುತ್ತಿಲ್ಲ: ಹೂಡಿಕೆದಾರರ ಮೇಲೆ ಬೈಜುಸ್ ಮಾಲೀಕರ ಅಸಮಾಧಾನ

ಎಜುಕೇಶನ್ ಟೆಕ್ನಾಲಜಿ ಕಂಪನಿಯಾದ ಬೈಜುಸ್ ತನ್ನ ಬಳಿ ಹಣ ಇದ್ದರೂ ಬಳಲಾಗುತ್ತಿಲ್ಲ. ಉದ್ಯೋಗಿಗಳಿಗೆ ಸಂಬಳ ಕೊಡಲೂ ಆಗುತ್ತಿಲ್ಲ ಎಂದು ಹತಾಶೆ ತೋರ್ಪಡಿಸಿದೆ. ಇತ್ತೀಚೆಗೆ ಹೊಸ ಷೇರುಗಳ ವಿತರಣೆ ಮೂಲಕ 200 ಮಿಲಿಯನ್ ಡಾಲರ್ ಹಣದ ಫಂಡಿಂಗ್ ಪಡೆದಿತ್ತು. ಅದನ್ನು ಪ್ರತ್ಯೇಕ ಖಾತೆಯಲ್ಲಿ ಲಾಕ್ ಮಾಡಲಾಗಿದೆ. ಬೈಜೂಸ್ ಸಂಸ್ಥೆ ಹೆಡ್ಜ್ ಫಂಡ್​ನಲ್ಲಿ ಹಾಕಿದ 533 ಮಿಲಿಯನ್ ಡಾಲರ್ ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆ ಅಮೆರಿಕದ ಕೋರ್ಟ್ ಕಟಕಟೆಯಲ್ಲಿದೆ.

Byju's: ಉದ್ಯೋಗಿಗಳಿಗೆ ಸಂಬಳ ಕೊಡಲು ಹಣ ಇಲ್ಲ; ಫಂಡಿಂಗ್ ಪಡೆಯಲೂ ಬಿಡುತ್ತಿಲ್ಲ: ಹೂಡಿಕೆದಾರರ ಮೇಲೆ ಬೈಜುಸ್ ಮಾಲೀಕರ ಅಸಮಾಧಾನ
ಬೈಜೂಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2024 | 10:56 AM

ನವದೆಹಲಿ, ಮಾರ್ಚ್ 4: ವಿವಾದಗಳ ಸರಮಾಲೆಯಲ್ಲಿ ಸಿಲುಕಿಕೊಂಡಿರುವ ಬೈಜೂಸ್​ಗೆ (Byju’s) ಒಂದರ ಮೇಲೊಂದು ಸಂಕಷ್ಟಗಳು ನಿರಂತರವಾಗಿ ಬರುತ್ತಿವೆ. ಈಗ ಅದರ ಉದ್ಯೋಗಿಗಳಿಗೆ ಸಂಬಳ ಕೊಡಲೂ ಆಗದ ಕೈಕಟ್ಟಿದಂತಹ ಪರಿಸ್ಥಿತಿಯಲ್ಲಿ ಬೈಜೂಸ್ ಇದೆ. ಸಂಬಳ ಕೊಡಲು ಹಣ ಇದ್ದರೂ ಅದನ್ನು ಬಳಸಲಾಗುತ್ತಿಲ್ಲ ಎಂದು ಬೈಜೂಸ್ ಮಾಲೀಕ ಬೈಜು ರವೀಂದ್ರನ್ (Byju Raveendran) ಪರಿತಪಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಹೂಡಿಕೆದಾರರ ವರ್ತನೆ ಬಗ್ಗೆ ಅಸಮಾಧಾನ ತೋರ್ಪಡಿಸಿದ್ದಾರೆ. ಇತ್ತೀಚೆಗೆ ಬೈಜೂಸ್ ಒಂದಷ್ಟು ಷೇರು ವಿತರಿಸಿ ಫಂಡಿಂಗ್ ಪಡೆದಿತ್ತು. ಆದರೆ, ಹೂಡಿಕೆದಾರರು ಆಕ್ಷೇಪ ತೆಗೆದು, ಪ್ರತ್ಯೇಕ ಖಾತೆಯಲ್ಲಿರುವ ಈ ಹಣವನ್ನು ತೆಗೆಯದಂತೆ ಬಂದ್ ಮಾಡಿಸಿದ್ದಾರೆ. ಹೀಗಾಗಿ, ಬೈಜುಸ್​ಗೆ ಹಣ ಇದ್ದರೂ ಅದನ್ನು ಬಳಸಲು ಆಗದಂತಹ ಸ್ಥಿತಿ ಬಂದಿದೆ ಎಂದು ಹೇಳಲಾಗುತ್ತಿದೆ.

533 ಮಿಲಿಯನ್ ಡಾಲರ್ ಹಣ ಎಲ್ಲಿ ಹೋಯ್ತು?

ರೈಟ್ಸ್ ಇಷ್ಟೂ ಅಥವಾ ಹೊಸ ಷೇರುಗಳ ವಿತರಣೆ ಮೂಲಕ ಬೈಜುಸ್ 200 ಮಿಲಿಯನ್ ಡಾಲರ್ ಫಂಡಿಂಗ್ ಪಡೆದಿರುವುದು ಒಂದೆಡೆಯಾದರೆ, 533 ಮಿಲಿಯನ್ ಡಾಲರ್ ಮೊತ್ತದ ಅದರ ಇನ್ನೊಂದು ಫಂಡಿಂಗ್ ಹಣ ಸಂಗತಿ ಕೂಡ ಕೋರ್ಟ್ ಕಟೆಕಟೆಗೆ ಹೋಗಿದೆ. ಈ ಹಣ ಎಲ್ಲಿ ಹೋಗಿದೆ ಎಂದು ತನಿಖೆ ಆಗುತ್ತಿದ್ದು, ಅಮೆರಿಕದ ಡೆಲವೇರ್ ಕೋರ್ಟ್​ನಲ್ಲಿ ವಿಚಾರಣೆ ಇದೆ.

ಇದನ್ನೂ ಓದಿ: ಅಮೆರಿಕ, ಯೂರೋಪ್​ನಲ್ಲಿ ಕೃಷಿಗೆ ಸಬ್ಸಿಡಿ ನೀಡಬಹುದು, ಭಾರತದಲ್ಲಿ ನೀಡಬಾರದು ಎಂದರೆ ಹೇಗೆ?; ಡಬ್ಲ್ಯುಟಿಒ ಸಭೆಯಲ್ಲಿ ಪಟ್ಟುಬಿಡದ ಭಾರತ

2021ರಲ್ಲಿ ಬೈಜೂಸ್ ಆಲ್ಫಾ ಸಂಸ್ಥೆ ಅಂತರರಾಷ್ಟ್ರೀಯ ಕಾರ್ಯಾಚರಣೆಗೆ ಹಣಕಾಸು ಹೊಂದಿಸಲು 1.2 ಬಿಲಿಯನ್ ಡಾಲರ್ ಹಣ ಮೊತ್ತದ ಫಂಡಿಂಗ್ ವ್ಯವಸ್ಥೆ ಮಾಡಿತ್ತು. ಇದರಲ್ಲಿ 533 ಮಿಲಿಯನ್ ಡಾಲರ್ ಹಣವನ್ನು ಲಪಟಾಯಿಸಲಾಗಿದೆ ಎಂಬುದು ಹೂಡಿಕೆದಾರರ ದೂರು.

ಬೈಜೂಸ್ ವತಿಯಿಂದ ನೀಡಲಾಗಿರುವ ಮಾಹಿತಿ ಪ್ರಕಾರ, 533 ಮಿಲಿಯನ್ ಡಾಲರ್ ಹಣವನ್ನು ಕ್ಯಾಮ್​ಶ್ಯಾಫ್ಟ್​ನ ಹೆಡ್ಜ್ ಫಂಡ್​ನಲ್ಲಿ ಹೂಡಿಕೆ ಮಾಡಲಾಗಿತ್ತು. ಈ ಹಣವನ್ನು ಬೈಜೂಸ್ ಆಲ್ಫಾ ತನ್ನ ಸೋದರ ಸಂಸ್ಥೆಯಾದ ಇನ್​ಸ್ಪಿಲರ್ನ್ ಎಲ್​ಎಲ್​ಸಿಗೆ ರವಾನಿಸಿದೆ. ಅ ಹಣ ಇನ್ಸ್ಪಿಲರ್ನ್ ಬಳಿಯೇ ಇದೆ.

ಆದರೆ, ಹೂಡಿಕೆದಾರರು ಬೇರೆಯೇ ಹೇಳುತ್ತಿದ್ದಾರೆ. ಇದು ಡೆಲಾವೇರ್ ಕೋರ್ಟ್​ನಲ್ಲಿ ವಿಚಾರಣೆಯಲ್ಲಿದೆ. ನ್ಯಾಯಾಲಯವೇ ಇದರ ತೀರ್ಮಾನ ಮಾಡಬಹುದು. ಮತ್ತೊಂದು ಮಾಹಿತಿ ಪ್ರಕಾರ ಇನ್ಸ್ಪಿಲರ್ನ್​ನ ಖಾತೆಯಲ್ಲಿದ್ದ 533 ಮಿಲಿಯನ್ ಡಾಲರ್ ಹಣವನ್ನು ಬೈಜು ಸಹೋದರ ರಿಜು ರವೀಂದ್ರನ್ ಅವರಿಗೆ ಸೇರಿದ ಟ್ರಸ್ಟ್​ವೊಂದಕ್ಕೆ ವರ್ಗಾವಣೆ ಆಗಿದೆ ಎನ್ನಲಾಗುತ್ತಿದೆ. ಹೆಡ್ಜ್ ಫಂಡ್ ಈಗ ಈ ಹಣ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು ಎಂಬ ಮಾಹಿತಿಯನ್ನು ಕೋರ್ಟ್​ಗೆ ಕೊಡಬೇಕು. ಇವತ್ತು ಅದರ ವಿಚಾರಣೆ ಇದೆ.

ಇದನ್ನೂ ಓದಿ: ಗೂಗಲ್ ಅನ್ನು ಬ್ರಿಟಿಷರ ಕುಖ್ಯಾತ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿ, ಛೇಡಿಸಿದ ಭಾರತೀಯ ಉದ್ಯಮಿ ಅನುಪಮ್ ಮಿತ್ತಲ್

ಇದೇ ವೇಳೆ, ತನ್ನ ಗ್ರೂಪ್ ಕಂಪನಿಗಳಲ್ಲೇ 533 ಮಿಲಿಯನ್ ಡಾಲರ್ ಹಣ ಇರುವಾಗ ಬೈಜೂಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಸಂಬಳ ಕೊಡಲು ಯಾಕೆ ಅದನ್ನು ಬಳಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ