AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್ ಅನ್ನು ಬ್ರಿಟಿಷರ ಕುಖ್ಯಾತ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿ, ಛೇಡಿಸಿದ ಭಾರತೀಯ ಉದ್ಯಮಿ ಅನುಪಮ್ ಮಿತ್ತಲ್

ವಿವಾದಕ್ಕೆ ಸಿಲುಕಿರುವ ಗೂಗಲ್ ಸಂಸ್ಥೆಯನ್ನು ಭಾರತೀಯ ಉದ್ಯಮಿ ಅನುಪಮ್ ಮಿಟ್ಟಲ್ ಅವರು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿಕೆ ಮಾಡಿದ್ದಾರೆ. ಈಸ್ಟ್ ಇಂಡಿಯಾ ಕಂಪನಿ ಭಾರತೀಯರಿಂದ ಲಗಾನ್ (ತೆರಿಗೆ) ವಸೂಲಿ ಮಾಡುತ್ತಿತ್ತು. ಈಗ ಗೂಗಲ್ ಸಂಸ್ಥೆ ಸರ್ವಿಸ್ ಹೆಸರಲ್ಲಿ ಲಗಾನ್ ಹೇರುತ್ತಿದೆ ಎಂದು ಶಾದಿ ಡಾಟ್ ಕಾಮ್​ನ ಸ್ಥಾಪಕ ಅನುಪಮ್ ಮಿಟ್ಟಲ್ ಕುಟುಕಿದ್ದಾರೆ.

ಗೂಗಲ್ ಅನ್ನು ಬ್ರಿಟಿಷರ ಕುಖ್ಯಾತ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿ, ಛೇಡಿಸಿದ ಭಾರತೀಯ ಉದ್ಯಮಿ ಅನುಪಮ್ ಮಿತ್ತಲ್
ಅನುಪಮ್ ಮಿತ್ತಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 03, 2024 | 7:08 PM

Share

ನವದೆಹಲಿ, ಮಾರ್ಚ್ 3: ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ಗೂಗಲ್ (Google) ಇತ್ತೀಚೆಗೆ ವಿವಾದಗಳನ್ನೂ ಮೈಮೇಲೆ ಎಳೆದುಕೊಳ್ಳುತ್ತಿದೆ. ಅದರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜನರೇಟಿವ್ ಅಪ್ಲಿಕೇಶನ್ ಆದ ಜೆಮಿನಿಯಲ್ಲಿ ಪಕ್ಷಪಾತಿತನ ನಡೆಯುತ್ತಿರುವ ವಿವಾದ ಒಂದೆಡೆಯಾದರೆ, ಭಾರತದಲ್ಲಿ ಕೆಲ ಪ್ರಮುಖ ಆ್ಯಪ್​ಗಳನ್ನು ಗೂಗಲ್​ನ ಪ್ಲೇ ಸ್ಟೋರ್​ನಿಂದ ಅನಾಮತ್ತಾಗಿ ತೆಗೆದುಹಾಕಿದ ಘಟನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಶಾದಿ ಡಾಟ್ ಕಾಮ್, ಮ್ಯಾಟ್ರಿಮೋನಿ ಡಾಟ್ ಕಾಮ್, ನೌಕ್ರಿ ಡಾಟ್ ಕಾಮ್, 99ಎಕರೆಸ್, ಇತ್ಯಾದಿ 10ಕ್ಕೂ ಹೆಚ್ಚು ಭಾರತೀಯ ಆ್ಯಪ್​ಗಳನ್ನು ಗೂಗಲ್ ತನ್ನದೇ ಕಾರಣವೊಡ್ಡಿ ಪ್ಲೇಸ್ಟೋರ್​ನಿಂದ ತೆಗೆದುಹಾಕಿತ್ತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಧ್ಯಪ್ರವೇಶಿಸಿದ ಬಳಿಕ ಈ ಆ್ಯಪ್​ಗಳನ್ನು ರೀಸ್ಟೋರ್ ಮಾಡಲಾಗಿದೆ. ಇದೇ ವೇಳೆ, ಶಾದಿ ಡಾಟ್ ಕಾಮ್​ನ ಸಂಸ್ಥಾಪಕ ಅನುಪಮ್ ಮಿಟ್ಟಲ್ (Anupam Mittal) ಅವರು, ಗೂಗಲ್​ನ ವರ್ತನೆಯನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿದ್ದಾರೆ.

ಭಾರತೀಯ ಆ್ಯಪ್​ಗಳನ್ನು ಡೀಲಿಸ್ಟ್ ಮಾಡಿದ ಗೂಗಲ್​ನ ಕ್ರಮವನ್ನು ಅವರು ಭಾರತದ ಇಂಟರ್ನೆಟ್​ನ ಕರಾಳ ದಿನ ಎಂದು ಬಣ್ಣಿಸಿದ್ದಾರೆ. ಗೂಗಲ್ ಅನ್ನು ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ ಅವರು, ಸರ್ವಿಸ್ ಫೀ ಹೆಸರಲ್ಲಿ ಗೂಗಲ್ ತೆರಿಗೆ ಹೇರುತ್ತಿದೆ. ಇದನ್ನು ಕೂಡಲೇ ತಡೆಯಬೇಕು ಎಂದು ಶಾದಿ ಡಾಟ್ ಕಾಮ್ ಮುಖ್ಯಸ್ಥರು ಸರ್ಕಾರಕ್ಕೆ ಕರೆ ನೀಡಿದ್ದಾರೆ. ಹಲವು ಭಾರತೀಯ ಸ್ಟಾರ್ಟಪ್ ಆ್ಯಪ್​ಗಳ ಉದ್ಯಮಿಗಳೂ ಕೂಡ ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅಮೆರಿಕ, ಯೂರೋಪ್​ನಲ್ಲಿ ಕೃಷಿಗೆ ಸಬ್ಸಿಡಿ ನೀಡಬಹುದು, ಭಾರತದಲ್ಲಿ ನೀಡಬಾರದು ಎಂದರೆ ಹೇಗೆ?; ಡಬ್ಲ್ಯುಟಿಒ ಸಭೆಯಲ್ಲಿ ಪಟ್ಟುಬಿಡದ ಭಾರತ

ಇನ್ಫೋ ಎಡ್ಜ್​ನ ಸಹ-ಸಂಸ್ಥಾಪಕ ಸಂಜೀವ್ ಬಿಕಚಂದಾನಿ ಅವರು ಗೂಗಲ್​ನ ಸ್ಪರ್ಧಾವಿರೋಧಿ ವರ್ತನೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಭಾರತೀಯ ಸ್ಪರ್ಧಾ ಪ್ರಾಧಿಕಾರವಾದ ಸಿಸಿಐಗೆ ಕರೆ ನೀಡಿದ್ದಾರೆ.

16ರಿಂದ 19ನೇ ಶತಮಾನದಲ್ಲಿ ಇದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 18 ಮತ್ತು 19ನೇ ಶತಮಾನದಲ್ಲಿ ವಿಶ್ವದ ಅತಿದೊಡ್ಡ ಸಂಸ್ಥೆಯಾಗಿತ್ತು. ಬ್ರಿಟಿಷ್ ಅರಸರ ಅನುಮತಿ ಪಡೆದು ದೇಶ ದೇಶಗಳಿಗೆ ಹೋಗಿ ಉದ್ಯಮ ವಿಸ್ತರಿಸುವುದರ ಜೊತೆ ದೇಶ ದೇಶಗಳನ್ನೇ ಆಕ್ರಮಿಸುತ್ತಿತ್ತು. ವಿಶ್ವದ ಅರ್ಧದಷ್ಟು ವ್ಯಾಪಾರದಲ್ಲಿ ಈಸ್ಟ್ ಇಂಡಿಯಾ ಕಂಪನಿ ಕೈ ಇರುತ್ತಿತ್ತು. ಭಾರತೀಯರ ಮೇಲೆ ಮನಬಂದಂತೆ ತೆರಿಗೆ ವಿಧಿಸಿ ಆ ಹಣವನ್ನು ಬ್ರಿಟಿಷ್ ಸಂಸ್ಥಾನಕ್ಕೆ ಕಪ್ಪವಾಗಿ ನೀಡುತ್ತಿತ್ತು.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಈಗ ಮತ್ತೆ 619 ಟ್ರಿಲಿಯನ್ ಡಾಲರ್ ಗಡಿಗೆ; ವಾರದಲ್ಲಿ 3 ಟ್ರಿಲಿಯನ್ ಡಾಲರ್​ನಷ್ಟು ಹೆಚ್ಚಳ

ಈಗ ಗೂಗಲ್ ಕೂಡ ತನ್ನ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಿಲ್ಲದ ಕಾರಣ ಅದು ಮಾಡಿದ್ದೇ ನಿಯಮ ಎನ್ನುವಂತಾಗಿದೆ. ಆಂಡ್ರಾಯ್ಡ್ ಆ್ಯಪ್​ಗಳ ಪ್ಲೇಸ್ಟೋರ್ ಗೂಗಲ್​ನದ್ದೇ ಆದ್ದರಿಂದ ಅದು ಹೇಳಿದಂತೆ ಆ್ಯಪ್​ಗಳು ಕೇಳಬೇಕಾದ ಸ್ಥಿತಿ ಇದೆ. ಇದು ಸ್ಪರ್ಧಾ ವಿರೋಧಿ ಧೋರಣೆ ಎಂದು ಭಾರತದ ಸಿಸಿಐ ಈ ಹಿಂದೆ ಗೂಗಲ್​ಗೆ ತಿಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್