Forex: ಭಾರತದ ಫಾರೆಕ್ಸ್ ರಿಸರ್ವ್ಸ್ ಈಗ ಮತ್ತೆ 619 ಟ್ರಿಲಿಯನ್ ಡಾಲರ್ ಗಡಿಗೆ; ವಾರದಲ್ಲಿ 3 ಟ್ರಿಲಿಯನ್ ಡಾಲರ್​ನಷ್ಟು ಹೆಚ್ಚಳ

RBI Released Data on March 1: ಫೆಬ್ರುವರಿ 23ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶೀ ವಿನಿಮಯ ಮೀಸಲು ಸಂಪತ್ತು 619.072 ಬಿಲಿಯನ್ ಡಾಲರ್​ಗೆ ಏರಿದೆ. ಫೆಬ್ರುವರಿ 16ರಂದು ಅಂತ್ಯಗೊಂಡ ವಾರದಲ್ಲಿ 1.132 ಬಿಲಿಯನ್ ಡಾಲರ್​ನಷ್ಟು ಇಳಿಕೆ ಕಂಡಿತ್ತು. ಈ ವಾರ 84ರ ಸಮೀಪ ಹೋಗಿದ್ದ ರೂಪಾಯಿ ಮೌಲ್ಯ ಸದ್ಯ 83ಕ್ಕಿಂತ ಕಡಿಮೆಗೆ ಬಂದಿದೆ. ಫಾರೆಕ್ಸ್ ರಿಸರ್ವ್ಸ್ 2021ರ ಅಕ್ಟೋಬರ್​ನಲ್ಲಿ 645 ಬಿಲಿಯನ್ ಡಾಲರ್​ನ ದಾಖಲೆಯ ಮಟ್ಟಕ್ಕೆ ಹೋಗಿತ್ತು.

Forex: ಭಾರತದ ಫಾರೆಕ್ಸ್ ರಿಸರ್ವ್ಸ್ ಈಗ ಮತ್ತೆ 619 ಟ್ರಿಲಿಯನ್ ಡಾಲರ್ ಗಡಿಗೆ; ವಾರದಲ್ಲಿ 3 ಟ್ರಿಲಿಯನ್ ಡಾಲರ್​ನಷ್ಟು ಹೆಚ್ಚಳ
ಫಾರೆಕ್ಸ್ ರಿಸರ್ವ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 03, 2024 | 10:25 AM

ನವದೆಹಲಿ, ಮಾರ್ಚ್ 3: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ (Forex reserves) ಮತ್ತೆ ಹೆಚ್ಚಾಗಿದೆ. ಆರ್​ಬಿಐ ಮೊನ್ನೆ (ಮಾ. 1) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫೆಬ್ರುವರಿ 23ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 2.975 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಇದರೊಂದಿಗೆ ಭಾರತದ ವಿದೇಶೀ ವಿನಿಮಯ ಮೀಸಲು ಸಂಪತ್ತು 619.072 ಬಿಲಿಯನ್ ಡಾಲರ್ ಮಟ್ಟಕ್ಕೆ ಹೋಗಿದೆ. ಹಿಂದಿನ ಐದಾರು ವಾರಗಳಿಂದ ಫಾರೆಕ್ಸ್ ಸಂಪತ್ತು ಏರಿಳಿತ ಕಾಣುತ್ತಲೇ ಇದೆ. ಫೆಬ್ರುವರಿ 16ರಂದು ಅಂತ್ಯಗೊಂಡ ವಾರದಲ್ಲಿ 1.132 ಬಿಲಿಯನ್ ಡಾಲರ್​ನಷ್ಟು ಇಳಿಕೆ ಕಂಡಿತ್ತು.

ಫೆಬ್ರುವರಿ 23ರ ವಾರದಲ್ಲಿ ಏರಿಕೆಯಾದ 2.975 ಬಿಲಿಯನ್ ಡಾಲರ್ ಫಾರೆಕ್ಸ್ ಸಂಪತ್ತಿನಲ್ಲಿ ಫಾರೀನ್ ಕರೆನ್ಸಿ ಸಂಪತ್ತಿನಲ್ಲೇ 2.405 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿದೆ. ಚಿನ್ನದ ಮೀಸಲು ಸಂಪತ್ತಿನಲ್ಲಿ ಅಲ್ಪ ಏರಿಕೆ ಆಗಿದೆ. 472 ಬಿಲಿಯನ್ ಡಾಲರ್​ನಷ್ಟು ಮಾತ್ರ ಹೆಚ್ಚಳವಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್​ಡಿಆರ್ ಪ್ರಮಾಣ 89 ಮಿಲಿಯನ್ ಡಾಲರ್ ಏರಿಕೆ ಆಗಿದೆ. ಐಎಂಎಫ್ ಜೊತೆಗಿನ ಮೀಸಲು ಪ್ರಮಾಣ 9 ಮಿಲಿಯನ್ ಡಾಲರ್ ಹೆಚ್ಚಾಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಮನಿ ಲಾಂಡರಿಂಗ್‌: Paytm ಪೇಮೆಂಟ್ಸ್ ಬ್ಯಾಂಕ್​​ಗೆ ₹ 5.49 ಕೋಟಿ ದಂಡ

ಫೆ. 23ರಂದು ಇದ್ದ ಫಾರೆಕ್ಸ್ ಮೀಸಲು ನಿಧಿ

ಒಟ್ಟು ಫಾರೆಕ್ಸ್ ರಿಸರ್ವ್ಸ್: 619.072 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್: 548.188 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 47.848 ಬಿಲಿಯನ್ ಡಾಲರ್
  • ಎಸ್​ಡಿಆರ್: 18.197 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿನ ಮೀಸಲು: 4.839 ಬಿಲಿಯನ್ ಡಾಲರ್.

ಭಾರತದ ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್ 2021ರ ಅಕ್ಟೋಬರ್ ತಿಂಗಳಲ್ಲಿ 645 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿತ್ತು. ಅದಾದ ಬಳಿಕ ರುಪಾಯಿ ಮೌಲ್ಯ ಕುಸಿತ ತಡೆಯಲು ಆರ್​ಬಿಐ ಕೈಗೊಂಡ ಕೆಲ ಕ್ರಮಗಳಿಂದಾಗಿ ಸಂಪತ್ತು ಇಳಿಕೆಯಾಗಿದೆ. ಆದಾಗ್ಯೂ ಉಚ್ಛ್ರಾಯ ಮಟ್ಟಕ್ಕಿಂತ ಫಾರೆಕ್ಸ್ ಸಂಗ್ರಹ ಈಗ ತೀರಾ ಹಿಂದುಳಿದಿಲ್ಲ ಎಂಬುದು ಸಮಾಧಾನಕರ ಸಂಗತಿ.

ಇದನ್ನೂ ಓದಿ: ಕಡು ಬಡತನ ತೊಡೆದು ಹಾಕಿದ ಭಾರತ: ಅಧಿಕೃತ ಅಂಕಿಅಂಶಗಳು ಹೇಳೋದೇನು ನೋಡಿ

ರುಪಾಯಿ ಮೌಲ್ಯದಲ್ಲಿ ತುಸು ಹೆಚ್ಚಳ

ಈ ವಾರ ರುಪಾಯಿ ಮೌಲ್ಯ ಡಾಲರ್ ಎದುರು ದಾಖಲೆಯ 84 ರೂ ಮಟ್ಟಕ್ಕೆ ಸಮೀಪ ಹೋಗಿತ್ತು. ಒಂದು ಹಂತದಲ್ಲಿ ಒಂದು ಡಾಲರ್​ಗೆ 83.9450 ರೂಗೆ ಏರಿತ್ತು. ಆರ್​ಬಿಐ ಕ್ರಮಗಳ ಪರಿಣಾಮ ಸದ್ಯ ರುಪಾಯಿ ಮೌಲ್ಯ 82.85ಕ್ಕೆ ಬಂದಿದೆ. ಮುಂದಿನ ವಾರ ಹೆಚ್ಚು ಡಾಲರ್​ಗಳು ಹರಿದುಬರಲಿದೆ. ಡಾಲರ್ ಎದುರು ರುಪಾಯಿ ಮೌಲ್ಯ 83ರ ಒಳಗೆಯೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ