ಕಡು ಬಡತನ ತೊಡೆದು ಹಾಕಿದ ಭಾರತ: ಅಧಿಕೃತ ಅಂಕಿಅಂಶಗಳು ಹೇಳೋದೇನು ನೋಡಿ

ಕಡುಬಡತನ ತೊಡೆದು ಹಾಕುವಲ್ಲಿ ಭಾರತ ಬಹಳ ದೊಡ್ಡ ಸಾಧನೆ ಮಾಡಿರುವುದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. ವಿಶ್ವಬ್ಯಾಂಕ್ ಶಿಫಾರಸು ಮಾಡಿರುವ ಅಂಕಿಅಂಶಗಳ ಮಾನದಂಡದ ಪ್ರಕಾರವೂ ಸಮೀಕ್ಷಾ ವರದಿ ಶುಭ ಸುದ್ದಿಯನ್ನೇ ನೀಡಿದೆ. 2011-12ನೇ ಸಾಲಿಗೆ ಹೋಲಿಸಿದರೆ ಇದೀಗ ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಉತ್ತಮ ಸಾಧನೆ ಮಾಡಲಾಗಿದೆ.

ಕಡು ಬಡತನ ತೊಡೆದು ಹಾಕಿದ ಭಾರತ: ಅಧಿಕೃತ ಅಂಕಿಅಂಶಗಳು ಹೇಳೋದೇನು ನೋಡಿ
ಸಾಂದರ್ಭಿಕ ಚಿತ್ರ
Follow us
|

Updated on: Mar 02, 2024 | 10:03 AM

ನವದೆಹಲಿ, ಮಾರ್ಚ್​ 2: ತೀವ್ರ ಅಥವಾ ಕಡು ಬಡತನವನ್ನು (Poverty) ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ (India) ಅತ್ಯುತ್ತಮ ಸಾಧನೆ ಮಾಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. 2022 – 23ನೇ ಸಾಲಿನ ಅನುಭೋಗಿ / ಬಳಕೆಯ ವೆಚ್ಚ ದತ್ತಾಂಶವನ್ನು (Consumption Expenditure Data) ಬಿಡುಗಡೆ ಮಾಡಲಾಗಿದ್ದು, ಇದು 10 ವರ್ಷ ಅವಧಿಯ ಬಡತನ ಸಂಬಂಧಿತ ಸಮೀಕ್ಷೆ ಆಧಾರಿತ ಮಾಹಿತಿಯನ್ನು ಒದಗಿಸಿದೆ. ಈ ಹಿಂದಿನ ಅಧಿಕೃತ ಸಮೀಕ್ಷೆಯನ್ನು 2011 12ನೇ ಸಾಲಿನಲ್ಲಿ ನಡೆಸಲಾಗಿತ್ತು. ಭಾರತವು ಅನುಭೋಗಿ ಅಥವಾ ಬಳಕೆಯ ವೆಚ್ಚಗಳನ್ನು ಅಂದಾಜು ಮಾಡಲು ಎರಡು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿದೆ. ಅವುಗಳು ಯೂನಿಫಾರ್ಮ್ ರಿಕಾಲ್ ಪಿರಿಯಡ್ (URP) ಮತ್ತು ಅಕ್ಯುರೇಟ್ ಮಾಡಿಫೈಡ್ ಮಿಕ್ಸೆಡ್ ರಿಕಾಲ್ ಪಿರಿಯಡ್ (MMRP) ಆಗಿವೆ.

30 ದಿನಗಳ ಅವಧಿಗೆ ಕುಟುಂಬಗಳು ಮಾಡಿದ ವೆಚ್ಚದ ಕುರಿತು ಕೇಳಿದ ಪ್ರಶ್ನೆಗಳಿಗೆ ದೊರೆತ ಉತ್ತರದ ಆಧಾರದಲ್ಲಿ ಯುಆರ್​ಪಿ ವಿಧಾನ ವರದಿ ಸಿದ್ಧಪಡಿಸಲಾಗಿದೆ. ಬೇಗನೆ ಹಾಳಾಗುವ ಸರಕುಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ದೊರೆತ ಉತ್ತರಗಳನ್ನು ಬಳಸಿಕೊಂಡು ಎಂಎಂಆರ್​ಪಿ ವಿಧಾನದ ವರದಿ ಸಿದ್ಧಪಡಿಸಲಾಗಿದೆ. ಹಿಂದೆಲ್ಲ ಈ ಎರಡೂ ವಿಧಾನಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದ ಭಾರತ ಈ ಬಾರಿ ಇತರ ದೇಶಗಳ ಗುಣಮಟ್ಟ ಮಾನದಂಡ ಆಧಾರಿತ ಎಂಎಂಆರ್​ಪಿ ವಿಧಾನವನ್ನೇ ಆಯ್ಕೆ ಮಾಡಿಕೊಂಡಿತ್ತು ಎಂದು ‘ಬ್ರೂಕಿಂಗ್ಸ್ ಡಾಟ್ ಎಜು’ ವರದಿ ಮಾಡಿದೆ.

ಯುಆರ್​ಪಿ ವಿಧಾನದಲ್ಲಿ ಸಮೀಕ್ಷೆ ಮಾಡಿದ್ದ 1977-78ನೇ ಸಾಲಿನ ಬಡತನ ವರದಿ ಮತ್ತು 2011-12ನೇ ಸಾಲಿನ ವರದಿಯನ್ನು ತುಲನೆ ಮಾಡಿಕೊಂಡು 2022-23ನೇ ಸಾಲಿನ ವರದಿಯನ್ನು ಎಂಎಂಆರ್​​ಪಿ ವಿಧಾನದಲ್ಲಿ ಸಿದ್ಧಪಡಿಸಲಾಗಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ವಿಶ್ವಬ್ಯಾಂಕ್ ನಿಗದಿಪಡಿಸಿದ ಮಾನದಂಡದ ಪ್ರಕಾರ ಬಡತನದ ಅಂದಾಜು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ದತ್ತಾಂಶಗಳು ಹೇಳುವುದೇನು?

ರಿಲಯಲ್ ಪರ್ ಕ್ಯಾಪಿಟಾ ಕನ್ಸಂಪ್ಷನ್ ಗ್ರೋತ್ (ನೈಜ ಸಮಯದ ತಲಾ ಆದಾಯ ವೆಚ್ಚದ ಬೆಳವಣಿಗೆ) 2011-12ರಿಂದ ವಾರ್ಷಿಕ ಶೇ 2.9ರ ಬೆಳವಣಿಗೆ ದಾಖಲಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಇದು ಶೇ 3.1ರ ಬೆಳವಣಿಗೆ ದಾಖಲಿಸಿದೆ. ಒಟ್ಟಾರೆಯಾಗಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ವೆಚ್ಚದ ಸಾಮರ್ಥ್ಯದ ಪ್ರಮಾಣ ಹೆಚ್ಚಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.

 ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳಿಗೆ ಡಬಲ್ ಭಾಗ್ಯ; ಜೂನ್​ನಲ್ಲಿ ಸಂಬಳ ಹೆಚ್ಚಳ; ವಾರಕ್ಕೆ ಐದು ದಿನ ಕೆಲಸ

ವಿಶ್ವಬ್ಯಾಂಕ್ ಅಂದಾಜಿಸಿರುವ ಅಂಕಿಅಂಶಗಳ ಮಾನದಂಡದ ಪ್ರಕಾರ, ಸಮೀಕ್ಷೆಯಲ್ಲಿ ಭಾರತದ ಬಡವರ ಸಂಖ್ಯೆಯು ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದನ್ನು ದತ್ತಾಂಶಗಳು ತೋರಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್