Salary Hike: ಬ್ಯಾಂಕ್ ಉದ್ಯೋಗಿಗಳಿಗೆ ಡಬಲ್ ಭಾಗ್ಯ; ಜೂನ್​ನಲ್ಲಿ ಸಂಬಳ ಹೆಚ್ಚಳ; ವಾರಕ್ಕೆ ಐದು ದಿನ ಕೆಲಸ

5-day work week and Salary hike: ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ವೀಕಾಫ್ ಕೊಡಬೇಕೆಂಬ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ಕೊಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಉದ್ಯೋಗಿಗಳಿಗೆ ವಾರಕ್ಕೆ ಐದು ದಿನ ಕೆಲಸ ನಿಗದಿ ಮಾಡಬೇಕೆಂದು ಕೆಲವಾರು ವರ್ಷಗಳಿಂದ ಒತ್ತಾಯ ಮಾಡಲಾಗುತ್ತಿದೆ. ಇನ್ನು, 2024ರ ಜೂನ್ ತಿಂಗಳಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ಶೇ. 17ರಷ್ಟು ಸಂಬಳ ಹೆಚ್ಚಳ ನಿರ್ಧಾರ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Salary Hike: ಬ್ಯಾಂಕ್ ಉದ್ಯೋಗಿಗಳಿಗೆ ಡಬಲ್ ಭಾಗ್ಯ; ಜೂನ್​ನಲ್ಲಿ ಸಂಬಳ ಹೆಚ್ಚಳ; ವಾರಕ್ಕೆ ಐದು ದಿನ ಕೆಲಸ
ಬ್ಯಾಂಕು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 01, 2024 | 5:21 PM

ನವದೆಹಲಿ, ಮಾರ್ಚ್ 1: ವಾರದಲ್ಲಿ ಐದು ದಿನ ಕೆಲಸ ನಿಗದಿ ಮಾಡಬೇಕೆಂದು ಬ್ಯಾಂಕ್ ಉದ್ಯೋಗಿಗಳು (bank employees) ಮಾಡುತ್ತಾ ಬಂದಿರುವ ಒತ್ತಾಯಕ್ಕೆ ಸರ್ಕಾರ ಮಣಿಯುವ ಸಾಧ್ಯತೆ ಇದೆ. ಐದು ಕಾರ್ಯದಿನಗಳ ವಾರಕ್ಕೆ ಸರ್ಕಾರ ಈ ವರ್ಷವೇ ಅನುಮೋದನೆ ಕೊಡಬಹುದು ಎನ್ನಲಾಗಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (United Forum of Bank Unions) ಬ್ಯಾಂಕಿಂಗ್ ವಲಯದಲ್ಲಿ ಐದು ದಿನಗಳ ವರ್ಕ್ ವೀಕ್​ಗೆ (5-day work week) ಅನುಮತಿಸುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು. ಅದಕ್ಕೆ ಒಪ್ಪಿಗೆ ಬೀಳುವ ಸಾಧ್ಯತೆ ಬಹುತೇಕ ಖಚಿತ ಎನ್ನಲಾಗಿದೆ.

ಸರ್ಕಾರಿ ಬ್ಯಾಂಕುಗಳ ಉದ್ಯೋಗಿಗಳಿಗೆ ಶೇ. 17ರಷ್ಟು ಸಂಬಳ ಹೆಚ್ಚಳ ಸಾಧ್ಯತೆ

ಸರ್ಕಾರಿ ವಲಯದ ಬ್ಯಾಂಕುಗಳಲ್ಲಿ ಉದ್ಯೋಗಿಗಳಿಗೆ ಶೇ. 17ರಷ್ಟು ಸಂಬಳಹೆಚ್ಚಳ ಸಿಗಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ. ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು 2023ರಲ್ಲಿ ಶೇ. 17ರ ಸಂಬಳಹೆಚ್ಚಳ ಪ್ರಸ್ತಾವಕ್ಕೆ ಸಹಮತ ವ್ಯಕ್ತಪಡಿಸಿದ್ದವು.

ಇದನ್ನೂ ಓದಿ: ಭಾರತದ ಷೇರುಪೇಟೆಯಲ್ಲಿ ಮಿಂಚಿನ ಸಂಚಾರ; ಗರಿಗೆದರಿದ ನಿಫ್ಟಿ; ಸೆನ್ಸೆಕ್ಸ್ ಹೊಸ ಎತ್ತರ

ಒಂದು ವೇಳೆ ಸಂಬಳ ಹೆಚ್ಚಾದರೆ 9 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ. ಬ್ಯಾಂಕುಗಳಿಗೆ 12,449 ಕೋಟಿ ರೂನಷ್ಟು ಹೊರೆಯಾಗುತ್ತದೆ.

ಐದು ದಿನದ ವಾರವಾದರೂ ಕೆಲಸದ ಅವಧಿಯಲ್ಲಿ ಇಳಿಕೆ ಇಲ್ಲ

ಸದ್ಯ ಬ್ಯಾಂಕುಗಳು ಪ್ರತೀ ಭಾನುವಾರದ ರಜೆಯ ಜೊತೆಗೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆ ಹೊಂದಿವೆ. ಈಗ ಭಾನುವಾರದಂತೆ ಪ್ರತೀ ಶನಿವಾರವೂ ರಜೆ ಎಂದು ಘೋಷಿತವಾಗಬಹುದು.

ಇದನ್ನೂ ಓದಿ: ಮೈಕ್ರೋಸಾಫ್ಟ್ ಜೊತೆ ಓಪನ್​ಎಐ ಅನೈತಿಕ ಸಂಬಂಧ? ಕೋರ್ಟ್​ನಲ್ಲಿ ಇಲಾನ್ ಮಸ್ಕ್ ಮೊಕದ್ದಮೆ

ಆದರೆ, ಹೆಚ್ಚುವರಿ ರಜೆಯ ಅವಧಿಯ ಕೆಲಸವನ್ನು ಬೇರೆ ದಿನಗಳಲ್ಲಿ ಪೂರೈಸಬೇಕಾಗುತ್ತದೆ. ಅಂದರೆ ಕೆಲಸ ಮಾಡುವ ಐದು ದಿನಗಳಲ್ಲಿ ಪ್ರತೀ ದಿನವೂ 50 ನಿಮಿಷ ಹೆಚ್ಚು ಅವಧಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹಣಕಾಸು ಸಚಿವಾಲಯದಿಂದ ಅಧಿಕೃತ ಹೇಳಿಕೆ ಬಂದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ