Barclays Projection: ಭಾರತದ ಬ್ಲಾಕ್​ಬಸ್ಟರ್ ಜಿಡಿಪಿ ದರದ ಎಫೆಕ್ಟ್; ಈ ವರ್ಷದ ಆರ್ಥಿಕತೆ ಬೆಳವಣಿಗೆಯ ನಿರೀಕ್ಷೆ ಹೆಚ್ಚಿಸಿದ ಬಾರ್​ಕ್ಲೇಸ್

Indian Economy in 2023-24: 2023-24ರ ಮೂರನೇ ಕ್ವಾರ್ಟರ್ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 8.4ರಷ್ಟು ಬೆಳೆದಿದೆ. ಇದರ ಬೆನ್ನಲ್ಲೇ ಬಾರ್ಕ್ಲೇಸ್ ಸಂಸ್ಥೆ ಈ ವರ್ಷದ ಆರ್ಥಿಕ ಬೆಳವಣಿಗೆ ಸಾಧ್ಯತೆಯನ್ನು ಶೇ 7.8ಕ್ಕೆ ಹೆಚ್ಚಿಸಿದೆ. ಈ ಹಿಂದೆ ಅದು ಮಾಡಿದ ಅಂದಾಜು ಪ್ರಕಾರ ಆರ್ಥಿಕ ಬೆಳವಣಿಗೆ ಶೇ. 6.7ರಷ್ಟು ಆಗಬಹುದು ಎಂದಿತ್ತು. 2023-24ರ ಹಣಕಾಸು ವರ್ಷದ ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಭಾರತದ ಜಿಡಿಪಿ ದರ ಕ್ರಮವಾಗಿ ಶೇ. 7.8, ಶೇ. 7.6 ಮತ್ತು ಶೇ. 8.4ರಷ್ಟು ಇದೆ.

Barclays Projection: ಭಾರತದ ಬ್ಲಾಕ್​ಬಸ್ಟರ್ ಜಿಡಿಪಿ ದರದ ಎಫೆಕ್ಟ್; ಈ ವರ್ಷದ ಆರ್ಥಿಕತೆ ಬೆಳವಣಿಗೆಯ ನಿರೀಕ್ಷೆ ಹೆಚ್ಚಿಸಿದ ಬಾರ್​ಕ್ಲೇಸ್
ಬಾರ್ಕ್ಲೇಸ್ ಸಂಸ್ಥೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 01, 2024 | 3:17 PM

ನವದೆಹಲಿ, ಮಾರ್ಚ್ 1: ಮೂರನೇ ಕ್ವಾರ್ಟರ್​ನಲ್ಲಿ ಭಾರತ ಸಾಧಿಸಿದ ಅನಿರೀಕ್ಷಿತ ಜಿಡಿಪಿ ಬೆಳವಣಿಗೆ ದರ (GDP rate) ಹಲವು ಆರ್ಥಿಕ ತಜ್ಞರ ಲೆಕ್ಕಾಚಾರ ಬದಲಿಸುವಂತೆ ಮಾಡಿದೆ. ಮೂರನೇ ಕ್ವಾರ್ಟರ್​ನಲ್ಲಿ ಶೇ. 7ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆರ್ಥಿಕತೆ (Indian Economy) ವೃದ್ಧಿಸಬಹುದು ಎಂದು ಬಹುತೇಕ ಎಲ್ಲರೂ ಅಂದಾಜು ಮಾಡಿದ್ದರು. ಸ್ವತಃ ಆರ್​ಬಿಐ ಕೂಡ ಶೇ. 7ಕ್ಕೆ ತನ್ನ ಅಂದಾಜು ಸೀಮಿತಗೊಳಿಸಿತ್ತು. ಆದರೆ, ನಿನ್ನೆ ಕೇಂದ್ರ ಸಾಂಖ್ಯಿಕ ಕಚೇರಿ (National statistics Office) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮೂರನೇ ಕ್ವಾರ್ಟರ್​ನಲ್ಲಿ (ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಅವಧಿ) ಶೇ. 8.4ರಷ್ಟು ಜಿಡಿಪಿ ಬೆಳೆದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇದರ ಬೆನ್ನಲ್ಲೇ ಬಾರ್​ಕ್ಲೇಸ್ (Barclays) ಬ್ಯಾಂಕಿಂಗ್ ಸಂಸ್ಥೆ ಭಾರತದ ಈ ಹಣಕಾಸು ವರ್ಷದ ತನ್ನ ಅಂದಾಜನ್ನು ಪರಿಷ್ಕರಿಸಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.7ರಷ್ಟು ಬೆಳೆಯಬಹುದು ಎಂದು ಅದು ಈ ಹಿಂದೆ ಅಂದಾಜು ಮಾಡಿತ್ತು. ಇದೀಗ ಶೇ. 7.8ರಷ್ಟು ಬೆಳೆಯಬಹುದು ಎಂದು ತನ್ನ ಅಭಿಪ್ರಾಯವನ್ನು ಬದಲಿಸಿದೆ.

ಬಾರ್​ಕ್ಲೇಸ್ ಮಾತ್ರವಲ್ಲ, ಬಹುತೇಕ ಎಲ್ಲಾ ಆರ್ಥಿಕ ತಜ್ಞರೂ ಕೂಡ ತಮ್ಮ ನಿರೀಕ್ಷೆ ಹೆಚ್ಚಿಸಬೇಕಾಗುತ್ತದೆ. ಬಹುತೇಕ ಎಲ್ಲಾ ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ಸರಾಸರಿಯಾಗಿ ಪರಿಗಣಿಸಿದಾಗ ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.5ರಷ್ಟಿರಬಹುದು ಎನ್ನಲಾಗಿತ್ತು. ಈಗ ಮೂರು ಕ್ವಾರ್ಟರ್​ಗಳಲ್ಲಿ ಸರಾಸರಿ ಬೆಳವಣಿಗೆ ಶೇ. 8ಕ್ಕೆ ಸಮೀಪ ಇದೆ. ಕೊನೆಯ ಕ್ವಾರ್ಟರ್​ನಲ್ಲಿ ಇಳಿಕೆ ಕಂಡರೂ ಕೂಡ ಶೇ. 7ಕ್ಕಿಂತ ಹೆಚ್ಚೇ ಇರುವುದರಲ್ಲಿ ಸಂಶಯ ಇಲ್ಲ.

ಇದನ್ನೂ ಓದಿ: ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ಶೇ. 8.4ರಷ್ಟು ಬೆಳೆದ ಜಿಡಿಪಿ; ಮತ್ತೆ ಅಚ್ಚರಿ ಮೂಡಿಸಿದ ಭಾರತದ ಆರ್ಥಿಕ ಬೆಳವಣಿಗೆ

‘ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಕಂಡಿರುವ ಬೆಳವಣಿಗೆಯನ್ನು ಪರಿಗಣಿಸಿ, 2023-24ರ ಜಿಡಿಪಿ ಬೆಳವಣಿಗೆ ಸಾಧ್ಯತೆyನ್ನು ಶೇ. 7.8ಕ್ಕೆ ಹೆಚ್ಚಿಸಿದ್ದೇವೆ,’ ಎಂದು ಬಾರ್ಕ್ಲೇಸ್​ನ ಏಷ್ಯಾ ಆರ್ಥಿಕತೆ ವಿಭಾಗದ ಮುಖ್ಯಸ್ಥ ರಾಹುಲ್ ಬಜೋರಿಯಾ ಹೇಳಿದ್ದಾರೆ.

ಹಾಗೆಯೇ, ಬಾರ್ಕ್ಲೇಸ್ ಸಂಸ್ಥೆ ಮುಂದಿನ ಹಣಕಾಸು ವರ್ಷಕ್ಕೆ (2024-25) ಭಾರತದ ಜಿಡಿಪಿ ಬೆಳವಣಿಗೆಯ ನಿರೀಕ್ಷೆಯನ್ನು ಶೇ. 6.5ರಿಂದ ಶೇ. 7.0ಕ್ಕೆ ಹೆಚ್ಚಿಸಿದೆ. ಸ್ಥಿರ ಆಂತರಿಕ ಬೆಳವಣಿಗೆ ಮತ್ತು ಸರ್ಕಾರದ ಬಂಡವಾಳ ವೆಚ್ಚ, ಖಾಸಗಿ ಹೂಡಿಕೆ ಹೀಗೇ ಮುಂದುವರಿಯುವ ಸಾಧ್ಯತೆಯನ್ನು ಇಲ್ಲಿ ಅದು ಪರಿಗಣಿಸಿದೆ.

ಇದನ್ನೂ ಓದಿ: ಭಾರತದ ಷೇರುಪೇಟೆಯಲ್ಲಿ ಮಿಂಚಿನ ಸಂಚಾರ; ಗರಿಗೆದರಿದ ನಿಫ್ಟಿ; ಸೆನ್ಸೆಕ್ಸ್ ಹೊಸ ಎತ್ತರ

ಭಾರತದ ಈ ಅಗಾಧ ಜಿಡಿಪಿ ಬೆಳವಣಿಗೆಗೆ ಏನು ಕಾರಣ?

ಭಾರತದ ಜಿಡಿಪಿ ಎರಡನೇ ಮತ್ತು ಮೂರನೇ ಕ್ವಾರ್ಟರ್​ನಲ್ಲಿ ತೋರಿದ ಬೆಳವಣಿಗೆ ಬಹುತೇಕ ಎಲ್ಲರ ಲೆಕ್ಕಾಚಾರಕ್ಕಿಂತ ಬಹಳ ಮೇಲೆ ಇದೆ. ಅದರಲ್ಲೂ ಮೂರನೇ ಕ್ವಾರ್ಟರ್​ನಲ್ಲಿ ಕಂಡ ವೃದ್ಧಿಯಂತೂ ಅಕ್ಷರಶಃ ಶಾಕ್ ಕೊಟ್ಟಿದೆ. ಆರ್ಥಿಕ ತಜ್ಞರ ಪ್ರಕಾರ ಪರೋಕ್ಷ ತೆರಿಗೆ ಅಥವಾ ಇನ್​ಡೈರೆಕ್ಟ್ ಟ್ಯಾಕ್ಸ್ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ಆಗಿರುವುದು ಜಿಡಿಪಿ ದರ ಏರಿಕೆಗೆ ಕಾರಣವಾಗಿರಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ