ಬೆಲೆ ಪರಿಷ್ಕರಣೆ, ಕಡ್ಡಾಯ ಇಕೆವೈಸಿ ಸೇರಿದಂತೆ ನವೆಂಬರ್ 1ರಿಂದ ಹೊಸ ಎಲ್​ಪಿಜಿ ನಿಯಮಗಳು

ನವೆಂಬರ್ 1ರಿಂದ ಅಡುಗೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಸಬ್ಸಿಡಿ ದರದಲ್ಲಿ ಎಲ್​ಪಿಜಿ ಪಡೆಯಲು ಇ-ಕೆವೈಸಿ ಕಡ್ಡಾಯವೆಂಬ ನಿಯಮ ನವೆಂಬರ್​ನಿಂದ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಆಧಾರ್ ಇ-ಕೆವೈಸಿ ಕಡ್ಡಾಯ ಹಾಗೂ ಬೆಲೆ ಪರಿಷ್ಕರಣೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಪರಿಷ್ಕರಣೆ, ಕಡ್ಡಾಯ ಇಕೆವೈಸಿ ಸೇರಿದಂತೆ ನವೆಂಬರ್ 1ರಿಂದ ಹೊಸ ಎಲ್​ಪಿಜಿ ನಿಯಮಗಳು
ಎಲ್‌ಪಿಜಿ
Image Credit source: Getty Images

Updated on: Oct 26, 2026 | 5:00 PM

ನವದೆಹಲಿ, ಅಕ್ಟೋಬರ್ 26: ನವೆಂಬರ್ 1ರಿಂದ ಮನೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (LPG) ನಿಯಮಗಳು ಹಾಗೂ ಬೆಲೆಯಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಪ್ರತೀ ತಿಂಗಳು ತೈಲ ಮಾರುಕಟ್ಟೆ ಸಂಸ್ಥೆಗಳಾದ ಇಂಡೇನ್, ಹೆಚ್‌ಪಿ ಗ್ಯಾಸ್ ಮತ್ತು ಭಾರತ್ ಗ್ಯಾಸ್ ಪ್ರತೀ ತಿಂಗಳು ಮೊದಲ ದಿನ ಎಲ್​ಪಿಜಿ ದರ ಪರಿಷ್ಕರಣೆ ಮಾಡುವುದು ಮುಂದುವರಿಯುತ್ತವೆ. ಹಾಗೆಯೇ, ಆಧಾರ್ ಇ-ಕೆವೈಸಿ ನಿಯಮ ಕೂಡ ಮುಂದುವರಿಯುತ್ತದೆ. ಅಕ್ಟೋಬರ್​ನಲ್ಲೇ ಇದು ಜಾರಿಗೆ ಬಂದರೂ ನವೆಂಬರ್​ನಿಂದ ಕಟ್ಟುನಿಟ್ಟಾಗಿ ನಿಯಮ ಪಾಲನೆಯಾಗಲಿದೆ.

ಆಧಾರ್ ಇ-ಕೆವೈಸಿ ಕಡ್ಡಾಯ

ಸಬ್ಸಿಡಿ ದರದಲ್ಲಿ ಸಿಲಿಂಡರ್ ಪಡೆಯುವ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಸಬ್ಸಿಡಿ ಸಿಲಿಂಡರ್ ಬುಕಿಂಗ್ ತಡೆಯಾಗುವ ಸಾಧ್ಯತೆಯಿದೆ. ಗ್ರಾಹಕರು ಗ್ಯಾಸ್ ಒದಗಿಸುವ ಕಂಪನಿಗಳ ಆಪ್‌ಗಳು ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಮುಖದ ಸ್ಕ್ಯಾನ್ ಅಥವಾ ಒಟಿಪಿ (OTP) ಬಳಸಿ ಇ-ಕೆವೈಸಿ ಪೂರ್ಣಗೊಳಿಸಬಹುದು.

ಇದನ್ನೂ ಓದಿ: 2028, ಅಕ್ಟೋಬರ್ 23ಕ್ಕೆ ಬರಲಿದೆ ಅಪ್ಪಟ ಭಾರತೀಯ ಸ್ಮಾರ್ಟ್​ಫೋನ್; ಸಚಿವ ಎ ವೈಷ್ಣವ್ ಡೆಡ್​ಲೈನ್

ಅಕ್ಟೋಬರ್​ನಲ್ಲೇ ಕಡ್ಡಾಯ ಇ-ಕೆವೈಸಿ ನಿಯಮ ಜಾರಿಯಾಗಿತ್ತಾದರೂ, ನವೆಂಬರ್​ನಿಂದ ಕಟ್ಟುನಿಟ್ಟಾಗಿ ಜಾರಿಯಾಗಬಹುದು ಎನ್ನಲಾಗಿದೆ.

ವಾಣಿಜ್ಯ ಮತ್ತು ಗೃಹಬಳಕೆ ಸಿಲಿಂಡರ್ ಬೆಲೆಗಳು

ತೈಲ ಮಾರುಕಟ್ಟೆ ಕಂಪನಿಗಳು (OMCs) ಪ್ರತಿ ತಿಂಗಳ ಮೊದಲ ದಿನದಂದು ವಾಣಿಜ್ಯ ಬಳಕೆಯ (Commercial) ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ಜಾಗತಿಕ ಮಾರುಕಟ್ಟೆಯ ಇಂಧನ ಸ್ಥಿತಿಗತಿಯ ಮೇರೆಗೆ ನವೆಂಬರ್ 1ರಂದು ಹೊಸ ದರಗಳು ಪ್ರಕಟವಾಗಲಿವೆ. ಆದರೆ, ಮನೆ ಬಳಕೆಯ 14.2 ಕೆ.ಜಿ. ಸಿಲಿಂಡರ್ ಬೆಲೆಯಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಿಲ್ಲ.

ಇದನ್ನೂ ಓದಿ: ‘ಸೈಬರ್ ಭಯೋತ್ಪಾದನೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ’; ಪ್ರಧಾನಿ ಮೋದಿ ಕಳವಳ

ಗ್ರಾಹಕರು ನವೆಂಬರ್ ತಿಂಗಳ ರೀಫಿಲ್ ಬುಕಿಂಗ್ ಮಾಡುವ ಮುನ್ನ ತಮ್ಮ ನಗರದ ನಿಖರವಾದ ದರಗಳು ಹಾಗೂ ಇ-ಕೆವೈಸಿ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಇ-ಕೆವೈಸಿ ಮಾಡದಿದ್ದರೆ ಏನಾಗುತ್ತದೆ?

ಎಲ್​ಪಿಜಿ ಗ್ರಾಹಕರು ಇ-ಕೆವೈಸಿ ಮಾಡದಿದ್ದರೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಸಿಗುವುದಿಲ್ಲ. ಕೆಲ ವರದಿಗಳ ಪ್ರಕಾರ, ಅಂಥ ಗ್ರಾಹಕರು ಕಮರ್ಷಿಯಲ್ ಬೆಲೆಗೆ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್ ಪಡೆಯುವ ಆಯ್ಕೆ ಮಾತ್ರ ಹೊಂದಿರುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us