‘ಸೈಬರ್ ಭಯೋತ್ಪಾದನೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ’; ಪ್ರಧಾನಿ ಮೋದಿ ಕಳವಳ
ಹೊಸ ಭಾರತದಲ್ಲಿ ಯುದ್ಧಗಳ ಸ್ವರೂಪ ಬದಲಾಗಿದ್ದು, ಕೇವಲ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲದೆ ದೇಶಗಳ ಆರ್ಥಿಕತೆಯನ್ನೇ ಗುರಿಯಾಗಿಸಿಕೊಂಡು ಯುದ್ಧಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು "ಸೈಬರ್ ದರೋಡೆಕೋರರು ಮತ್ತು ಸೈಬರ್ ಭಯೋತ್ಪಾದಕರಿಂದ" ರಕ್ಷಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ಆರ್ಬಿಐನ 169 ಕೋಟಿ ರೂ. ವೆಚ್ಚದ ನೂತನ ಡೇಟಾ ಸೆಂಟರ್ ಮತ್ತು ಸೈಬರ್ ಸೆಕ್ಯುರಿಟಿ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿದ ಅವರು, "ಒಂದು ದೇಶವನ್ನು ದುರ್ಬಲಗೊಳಿಸಬೇಕಾದರೆ, ಅದರ ಆರ್ಥಿಕತೆಯ ಮೇಲೆ ದಾಳಿ ಮಾಡಿದರೆ ಸಾಕು. ಭಾರತವು ಆರ್ಥಿಕವಾಗಿ ಬಲಗೊಳ್ಳುತ್ತಿರುವ ಈ ಸಮಯದಲ್ಲಿ, ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸೈಬರ್ ದಾಳಿಗಳಿಂದ ರಕ್ಷಿಸಿಕೊಳ್ಳುವುದು ತೀರಾ ಅಗತ್ಯ" ಎಂದು ಹೇಳಿದ್ದಾರೆ.

ಭುವನೇಶ್ವರ, ಅಕ್ಟೋಬರ್ 25: “ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಸೈಬರ್ ಭಯೋತ್ಪಾದಕರು ಹಾಗೂ ಸೈಬರ್ ದರೋಡೆಕೋರರಿಂದ ರಕ್ಷಿಸುವುದು ಇಂದಿನ ಕಾಲದ ಅತ್ಯಂತ ತುರ್ತು ಅಗತ್ಯವಾಗಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 169 ಕೋಟಿ ರೂ. ವೆಚ್ಚದ ಅತ್ಯಾಧುನಿಕ ಡೇಟಾ ಸೆಂಟರ್ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇಂದಿನ ಆಧುನಿಕ ಯುಗದಲ್ಲಿ ಯುದ್ಧಗಳು ಕೇವಲ ಗಡಿಭಾಗದಲ್ಲಿ ಶಸ್ತ್ರಾಸ್ತ್ರಗಳ ಮೂಲಕ ನಡೆಯುತ್ತಿಲ್ಲ. ಬಲಿಷ್ಠ ದೇಶವನ್ನು ದುರ್ಬಲಗೊಳಿಸಲು ಅದರ ಆರ್ಥಿಕತೆ ಮತ್ತು ಬ್ಯಾಂಕಿಂಗ್ ಜಾಲವನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ, ಹಳೆಯ ತರಬೇತಿ ವಿಧಾನಗಳು ಹಾಗೂ ಉಪಕರಣಗಳಿಂದ ಹೊಸ ಮಾದರಿಯ ಸೈಬರ್ ಬೆದರಿಕೆಗಳನ್ನು ಎದುರಿಸಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಸುಧಾರಿತ ಸೈಬರ್ ಸವಾಲುಗಳನ್ನು ತಡೆಯಲು ಬಲವಾದ ಮಾನವಸಂಪನ್ಮೂಲ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವಿದೆ” ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
#WATCH | Bhubaneswar, Odisha: At the inauguration of the Reserve Bank of India’s newly established Data Centre and Cybersecurity Training Institute, PM Narendra Modi says, “Today Bhubaneswar is giving a new institution to the new India. The inauguration of RBI’s data center and cyber security training institute here is an important occasion… I congratulate all those associated with this project.”
(Source: ANI/DD)
— ANI (@ANI) October 25, 2026
ಬ್ಯಾಂಕಿಂಗ್ ವ್ಯವಸ್ಥೆಯ ಸಬಲೀಕರಣ:
“ಕಳೆದ ದಶಕದಲ್ಲಿ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿದ್ದ ಕೋಟಿಗಟ್ಟಲೆ ಬಡವರಿಗೆ ಜನ್ ಧನ್ ಖಾತೆಗಳ ಮೂಲಕ ತಲುಪಿಸಲಾಗಿದೆ. ಮುಂದಿನ ದಶಕವು ಭಾರತದ ಬ್ಯಾಂಕಿಂಗ್ ಕ್ಷೇತ್ರವನ್ನು ಅತ್ಯಂತ ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಸನೀಯಗೊಳಿಸುವುದಕ್ಕೆ ಮೀಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
VIDEO | Bhubaneswar: “Wars being fought not only conventionally but also by attacking economies; need to protect India’s banking system from cyber terrorists,” says Prime Minister Narendra Modi in Odisha.
(Source: PM Modi YT)
(Full video available on PTI Videos – https://t.co/bIyFWTfmBd)
— Press Trust of India (@PTI_News) October 25, 2026
“ಕಾಂಗ್ರೆಸ್ ಆಡಳಿತದಲ್ಲಿ ಶ್ರೀಮಂತರಿಗೆ ಮತ್ತು ಪ್ರಭಾವಿಗಳಿಗೆ ಒಂದೇ ಫೋನ್ ಕಾಲ್‌ನಲ್ಲಿ ಸಾವಿರಾರು ಕೋಟಿ ರೂ. ಸಾಲ ಸಿಗುತ್ತಿತ್ತು. ಈ ದುರಾಡಳಿತದಿಂದಾಗಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಕುಸಿತದ ಅಂಚಿಗೆ ತಲುಪಿತ್ತು. ಹಿಂದೊಬ್ಬರು ಪ್ರಧಾನಿ ದೆಹಲಿಯಿಂದ ಕಳುಹಿಸುವ 1 ರೂ.ನಲ್ಲಿ ಬರಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದಿದ್ದರು. ಆದರೆ ಇಂದು ಆಡಳಿತ ಬದಲಾಗಿದ್ದು, ಸರ್ಕಾರ ನೀಡುವ ಪೂರ್ತಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಸುಮಾರು 60 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ” ಎಂದು ಅವರು ಹೇಳಿದ್ದಾರೆ.
#WATCH | Odisha: Prime Minister Narendra Modi felicitated during the inauguration of the Reserve Bank of India’s newly established Data Centre and Cybersecurity Training Institute in Bhubaneswar.
(Source: ANI/DD) https://t.co/NANKqhcIZv
— ANI (@ANI) October 25, 2026
ಭುವನೇಶ್ವರದ ಜಟಣಿಯಲ್ಲಿ 18.55 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಡೇಟಾ ಸೆಂಟರ್, ನೈಸರ್ಗಿಕ ವಿಕೋಪಗಳಿಂದ ಸುಕ್ಷೇಮವಾಗಿರುವ ಭೌಗೋಳಿಕ ವಲಯದಲ್ಲಿದ್ದು, ದೇಶದ ನಿರ್ಣಾಯಕ ಹಣಕಾಸು ಪಾವತಿ ವ್ಯವಸ್ಥೆಗಳನ್ನು ನಿರ್ವಹಿಸಲಿದೆ. ಇದರ ಜೊತೆಗೆ ಉದ್ಘಾಟನೆಗೊಂಡ ಸೈಬರ್ ಭದ್ರತಾ ತರಬೇತಿ ಸಂಸ್ಥೆಯು ದೇಶದ ಹಣಕಾಸು ಕ್ಷೇತ್ರದಲ್ಲಿ ಸೈಬರ್ ಬೆದರಿಕೆಗಳನ್ನು ಗುರುತಿಸಿ ತಡೆಯುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ವಿಶೇಷ ತರಬೇತಿ ನೀಡಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




