ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ
ಭೂಕಂಪನ ರಹಿತ ಹಾಗೂ ಅಂತಾರಾಷ್ಟ್ರೀಯ ಗಡಿಗಳಿಂದ ದೂರವಿರುವ ಭೌಗೋಳಿಕವಾಗಿ ಸುರಕ್ಷಿತ ಪ್ರದೇಶವಾದ ಜಟಣಿಯಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದ್ದು, ನೈಸರ್ಗಿಕ ವಿಕೋಪಗಳು ಮತ್ತು ಭೌಗೋಳಿಕ ಸವಾಲುಗಳಿಂದ ಡೇಟಾಗೆ ಯಾವುದೇ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಈ ಡೇಟಾ ಸೆಂಟರ್ ಆರ್‌ಬಿಐನ ಪ್ರಮುಖ ಪಾವತಿ ವ್ಯವಸ್ಥೆಗಳು ಸೇರಿದಂತೆ ಅತ್ಯಂತ ನಿರ್ಣಾಯಕ ಹಣಕಾಸು ಸೇವೆಗಳನ್ನು ಸುಗಮವಾಗಿ ನಿರ್ವಹಿಸಲು ಬೆಂಬಲ ನೀಡಲಿದೆ.
ಭುವನೇಶ್ವರ, ಅಕ್ಟೋಬರ್ 25: ಒಡಿಶಾದ ಭುವನೇಶ್ವರದ ಜಟಣಿ (ಇನ್ಫೋ ವ್ಯಾಲಿ-II) ಪ್ರದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಡೇಟಾ ಸೆಂಟರ್ ಮತ್ತು ಸೈಬರ್ ಸೆಕ್ಯುರಿಟಿ ತರಬೇತಿ ಸಂಸ್ಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. 169 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಸೌಲಭ್ಯವು ಭಾರತದ ಡಿಜಿಟಲ್ ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತಗೊಳಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಹೆಚ್ಚು ಸುರಕ್ಷಿತ ಹಣಕಾಸು ವ್ಯವಸ್ಥೆಯತ್ತ ಇದು ಇಟ್ಟಿರುವ ಬಹುದೊಡ್ಡ ಹೆಜ್ಜೆಯಾಗಿದೆ. ಆರ್‌ಬಿಐನ ಈ ನೂತನ ಸೌಲಭ್ಯಗಳು ದೇಶದ ಡಿಜಿಟಲ್ ಮೂಲಸೌಕರ್ಯ ಮತ್ತು ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸಲಿವೆ” ಎಂದು ಹೇಳಿದರು.
ಭೂಕಂಪನ ರಹಿತ ಹಾಗೂ ಅಂತಾರಾಷ್ಟ್ರೀಯ ಗಡಿಗಳಿಂದ ದೂರವಿರುವ ಭೌಗೋಳಿಕವಾಗಿ ಸುರಕ್ಷಿತ ಪ್ರದೇಶವಾದ ಜಟಣಿಯಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದ್ದು, ನೈಸರ್ಗಿಕ ವಿಕೋಪಗಳು ಮತ್ತು ಭೌಗೋಳಿಕ ಸವಾಲುಗಳಿಂದ ಡೇಟಾಗೆ ಯಾವುದೇ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಈ ಡೇಟಾ ಸೆಂಟರ್ ಆರ್‌ಬಿಐನ ಪ್ರಮುಖ ಪಾವತಿ ವ್ಯವಸ್ಥೆಗಳು ಸೇರಿದಂತೆ ಅತ್ಯಂತ ನಿರ್ಣಾಯಕ ಹಣಕಾಸು ಸೇವೆಗಳನ್ನು ಸುಗಮವಾಗಿ ನಿರ್ವಹಿಸಲು ಬೆಂಬಲ ನೀಡಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

