New Rules: ವೆಬ್ ಬ್ರೌಸರ್​ನಲ್ಲಿ ವಾಟ್ಸಾಪ್ ಪ್ರತೀ 6 ಗಂಟೆಗೆ ಲಾಗೌಟ್ ಆಗುತ್ತೆ: ಭಾರತದಲ್ಲಿ ಬರುತ್ತಿದೆ ಹೊಸ ರೂಲ್ಸ್

Govt Orders WhatsApp, Telegram, Signal To Stay Tied To Active Numbers: ಕೇಂದ್ರ ದೂರಸಂಪರ್ಕ ಇಲಾಖೆಯು ವಾಟ್ಸಾಪ್​ನಂತಹ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳಿಗೆ ಹೊಸ ನಿಯಮಗಳನ್ನು ರೂಪಿಸಿದೆ. ಮೆಸೇಜಿಂಗ್ ಆ್ಯಪ್​ಗಳು ಬಳಕೆದಾರರ ಸಿಮ್ ಕಾರ್ಡ್​ಗಳನ್ನು ಮೂರು ತಿಂಗಳಿಗೊಮ್ಮೆಯಾದರೂ ವೆರಿಫೈ ಮಾಡಬೇಕು. ಹಾಗೆಯೇ, ಮೆಸೇಜಿಂಗ್ ಸರ್ವಿಸ್ ಬಳಸುವ ಸಾಧನದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸಿಮ್ ಕಾರ್ಡ್ ಜೋಡಿತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

New Rules: ವೆಬ್ ಬ್ರೌಸರ್​ನಲ್ಲಿ ವಾಟ್ಸಾಪ್ ಪ್ರತೀ 6 ಗಂಟೆಗೆ ಲಾಗೌಟ್ ಆಗುತ್ತೆ: ಭಾರತದಲ್ಲಿ ಬರುತ್ತಿದೆ ಹೊಸ ರೂಲ್ಸ್
ವಾಟ್ಸಾಪ್

Updated on: Nov 30, 2025 | 3:55 PM

ನವದೆಹಲಿ, ನವೆಂಬರ್ 30: ಸೈಬರ್ ಕ್ರೈಮ್ ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳಿಗೆ (Messaging platforms) ಹೊಸ ನಿಯಮವೊಂದನ್ನು ರೂಪಿಸಿದೆ. ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಸ್ನ್ಯಾಪ್​ಚಾಟ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳು ತಮ್ಮ ಬಳಕೆದಾರರ ಸಿಮ್ ಕಾರ್ಡ್ ಸಕ್ರಿಯವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು, ಮತ್ತು ಸಾಧನಗಳಿಗೆ ಸಿಮ್ ಕಾರ್ಡ್ ನಿರಂತವಾಗಿ ಜೋಡಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ದೂರಸಂಪರ್ಕ ಇಲಾಖೆಯು ಭಾನುವಾರ ನಿರ್ದೇಶನ ನೀಡಿದೆ. 2025ರ ಟೆಲಿಕಮ್ಯೂನಿಕೇಶನ್ ಸೈಬರ್ ಸೆಕ್ಯೂರಿಟಿ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಈ ಹೊಸ ನಿಯಮವನ್ನು ತರಲಾಗಿದೆ.

ಈ ನಿಯಮದ ಪ್ರಕಾರ, ಬ್ಯಾಂಕ್, ಯುಪಿಐ ಇತ್ಯಾದಿ ಆ್ಯಪ್​ಗಳ ರೀತಿಯಲ್ಲಿ ಮೆಸೇಜಿಂಗ್ ಆ್ಯಪ್​ಗಳೂ ಕೂಡ ಬಳಕೆದಾರರ ಸಿಮ್ ಕಾರ್ಡ್​ಗಳನ್ನು ಪ್ರತೀ 90 ದಿನಗಳಿಗೊಮ್ಮೆ ವೆರಿಫೈ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ

ಹಾಗೆಯೇ, ಮೊಬೈಲ್​ನಲ್ಲಿ ಆ್ಯಕ್ಟಿವ್ ಆಗಿರುವ ಸಿಮ್ ಇದ್ದರೆ ಮಾತ್ರ ಮೆಸೇಜಿಂಗ್ ಸರ್ವಿಸಸ್ ನೀಡಬೇಕು. ಉದಾಹರಣೆಗೆ, ಒಂದು ಸಾಧನದಲ್ಲಿ ವಾಟ್ಸಾಪ್ ವೆಬ್ ಅನ್ನು ಆಕ್ಟಿವ್ ಮಾಡಿದಾಗ, ಮೊಬೈಲ್ ಇಲ್ಲದಿದ್ದರೂ ಆ ಸಾಧನದಲ್ಲಿ ವಾಟ್ಸಾಪ್ ಸರ್ವಿಸ್ ಚಾಲನೆಯಲ್ಲಿ ಇರುತ್ತದೆ. ಇದರಿಂದ ಸೈಬರ್ ಕ್ರಿಮಿನಲ್​ಗಳು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಹೊಸ ನಿಯಮದ ಪ್ರಕಾರ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಂದರೆ, ಪ್ರತೀ ಅರು ಗಂಟೆಗಳಿಗೊಮ್ಮೆ ಬ್ರೌಸರ್​ನಲ್ಲಿ ವಾಟ್ಸಾಪ್ ಅಥವಾ ಇತರ ಮೆಸೇಜಿಂಗ್ ಸರ್ವಿಸ್ ಲಾಗೌಟ್ ಆಗುತ್ತದೆ. ಆ್ಯಕ್ಟಿವ್ ಮೊಬೈಲ್ ಬಳಸಿ ಮತ್ತೆ ಲಿಂಕ್ ಮಾಡಬೇಕಾಗುತ್ತದೆ.

ದೂರಸಂಪರ್ಕ ಇಲಾಖೆ ಮಾಡಿರುವ ಈ ಹೊಸ ಕಾನೂನಿಂದ ವಾಟ್ಸಾಪ್​ನಂತಹ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳನ್ನು ಟೆಲಿಕಮ್ಯೂನಿಕೇಶನ್ ಐಡೆಂಟಿಫಯರ್ ಯೂಸರ್ ಎಂಟಿಟೀಸ್ (ಟಿಐಯುಇ) ಎದು ಅಧಿಕೃತವಾಗಿ ವರ್ಗೀಕರಿಸಿದಂತಾಗುತ್ತದೆ. ಒಂದು ರೀತಿಯಲ್ಲಿ ವಾಟ್ಸಾಪ್ ಇತ್ಯಾದಿ ಮೆಸೇಜಿಂಗ್ ಆ್ಯಪ್​ಗಳನ್ನು ಸಾಂಪ್ರದಾಯಿಕ ಟೆಲಿಕಾಂ ಆಪರೇಟರ್​ಗಳ ರೀತಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮೊದಲ ಬಾರಿಗೆ ಏಷ್ಯಾದ ಪ್ರಮುಖ ಶಕ್ತಿ ಎನಿಸಿದ ಭಾರತ; ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ 3ನೇ ಸ್ಥಾನ

ಈ ಹೊಸ ನಿಯಮದಿಂದ ಸೈಬರ್ ಅಪರಾಧವನ್ನು ನಿಗ್ರಹಿಸುವುದು ಸ್ವಲ್ಪ ಸುಲಭವಾಗುತ್ತದೆ. ಡಿಜಿಟಲ್ ಹೆಜ್ಜೆ ಗುರುತಿನಲ್ಲಿ ಮೊಬೈಲ್ ನಂಬರ್ ಬಹಳ ಮುಖ್ಯವಾಗಿದೆ. ಇದರ ದುರ್ಬಳಕೆ ತಡೆಯಲು ಇಂತಹ ಕಾನೂನು ಅವಶ್ಯಕ ಎನ್ನುವ ಅಭಿಪ್ರಾಯ ಸಾಕಷ್ಟು ಕೇಳಿಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ