ಭಾರತದ ಆರ್ಥಿಕತೆ ನಾಲ್ಕು ವರ್ಷದಲ್ಲಿ ಜಪಾನ್, ಜರ್ಮನಿಯನ್ನು ಮೀರಿಸಲಿದೆ: ನಿರ್ಮಲಾ ಸೀತಾರಾಮನ್

Indian Economy: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತ 2027ರಷ್ಟರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು ಎಂದು ಮತ್ತೊಮ್ಮೆ ಹೇಳಿದ್ದಾರೆ. ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದ್ದು ಉತ್ತಮ ಭವಿಷ್ಯದತ್ತ ಸಾಗುತ್ತಿದೆ ಎಂದ ಅವರು ಈ ವರ್ಷ ಶೇ. 7ಕ್ಕೆ ಸಮೀಪದ ಜಿಡಿಪಿ ದರ ಇರಬಹುದು. ಬೇರೆ ಪ್ರಮುಖ ಆರ್ಥಿಕತೆಗಳಿಗಿಂತ ಭಾರತದ ಜಿಡಿಪಿವೃದ್ಧಿ ಹೆಚ್ಚಿರಲಿದೆ ಎಂದು ನಿರ್ಮಲಾ ಸೀತಾಮನ್ ಹೇಳಿದ್ದಾರೆ.

ಭಾರತದ ಆರ್ಥಿಕತೆ ನಾಲ್ಕು ವರ್ಷದಲ್ಲಿ ಜಪಾನ್, ಜರ್ಮನಿಯನ್ನು ಮೀರಿಸಲಿದೆ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

Updated on: Nov 15, 2023 | 5:06 PM

ನವದೆಹಲಿ, ನವೆಂಬರ್ 15: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತ 2027ರಷ್ಟರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು (biggest economies) ಎಂದು ಮತ್ತೊಮ್ಮೆ ಹೇಳಿದ್ದಾರೆ. ಇಂಡೋ ಪೆಸಿಫಿಕ್ ರೀಜನಲ್ ಡೈಲಾಗ್ (Indo Pacific Regional dialogue) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಮುಂದಿನ 4 ವರ್ಷದಲ್ಲಿ ಭಾರತದ ಆರ್ಥಿಕತೆಯು ಜಪಾನ್ ಮತ್ತು ಜರ್ಮನಿಯನ್ನು ಮೀರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದ್ದು ಉತ್ತಮ ಭವಿಷ್ಯದತ್ತ ಸಾಗುತ್ತಿದೆ ಎಂದ ಅವರು ಈ ವರ್ಷ ಶೇ. 7ಕ್ಕೆ ಸಮೀಪದ ಜಿಡಿಪಿ ದರ ಇರಬಹುದು. ಬೇರೆ ಪ್ರಮುಖ ಆರ್ಥಿಕತೆಗಳಿಗಿಂತ ಭಾರತದ ಜಿಡಿಪಿವೃದ್ಧಿ ಹೆಚ್ಚಿರಲಿದೆ ಎಂದು ನಿರ್ಮಲಾ ಸೀತಾಮನ್ ಹೇಳಿದ್ದಾರೆ.

ಜಾಗತಿಕ ರಾಜಕೀಯ ಮತ್ತು ಮಿಲಿಟರಿ ಬಿಕ್ಕಟ್ಟುಗಳಿಂದ ಸರಬರಾಜು ಸರಪಳಿ ವ್ಯವಸ್ಥೆ ವ್ಯತ್ಯವಾದರೂ ಕೂಡ ಭಾರತದ ಆರ್ಥಿಕತೆ ಹೊಳೆಯುತ್ತಿದೆ ಎಂದ ಅವರು ಐಎಂಎಫ್​ನ ಅಂದಾಜು ಲೆಕ್ಕವನ್ನು ಉದಾಹರಿಸಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಆಮದು ಮತ್ತು ರಫ್ತು ಎರಡೂ ಹೆಚ್ಚಳ; ಟ್ರೇಡ್ ಡೆಫಿಸಿಟ್ ಹೊಸ ದಾಖಲೆ ಮಟ್ಟದಲ್ಲಿ

‘ಐಎಂಎಫ್​ನ ಕನಿಷ್ಠ ಅಂದಾಜು ಪ್ರಕಾರ ಲೆಕ್ಕ ಹಾಕಿದರೂ ಭಾರತದ ಆರ್ಥಿಕತೆ 2027ರಷ್ಟರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಅದರ ಜಿಡಿಪಿ 5 ಟ್ರಿಲಿಯನ್ ಡಾಲರ್ ಮಟ್ಟವನ್ನು ಮೀರಿ ಹೋಗುತ್ತದೆ. ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕುತ್ತದೆ. 2047ರಲ್ಲಿ ಭಾರತ ಅಭಿವೃದ್ಧಿ ಆರ್ಥಿಕತೆಯ ದೇಶವಾಗುವ ಗುರಿ ಹೊಂದಿದೆ,’ ಎಂದು ಕೇಂದ್ರ ಹಣಕಾಸು ಸಚಿವೆ ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿ

ಅತಿಹೆಚ್ಚು ಜಿಡಿಪಿ ಇರುವ ದೇಶಗಳ ಪೈಕಿ ಭಾರತ 5ನೇ ಸ್ಥಾನದಲ್ಲಿದೆ. ಸದ್ಯ ಭಾರತ 3.7 ಟ್ರಿಲಿಯನ್ ಡಾಲರ್​ನ ಜಿಡಿಪಿ ಮಟ್ಟ ಮುಟ್ಟಿದೆ. ಜಪಾನ್ ಮತ್ತು ಜರ್ಮನಿ ದೇಶಗಳ ಜಿಡಿಪಿ ಕ್ರಮವಾಗಿ 4.23 ಮತ್ತು 4.43 ಟ್ರಿಲಿಯನ್ ಡಾಲರ್​ನಷ್ಟಿವೆ. ಟಾಪ್ 10 ಪಟ್ಟಿ ಇಲ್ಲಿದೆ…

ಇದನ್ನೂ ಓದಿ: ಈ ಶಿಕ್ಷಕರಿಗೆ 83 ಲಕ್ಷ ಸಂಬಳ ಕೊಡಿ; 10 ಸಾವಿರ ರಿಟೈರ್ಡ್ ಟೀಚರ್​ಗಳನ್ನು ಟ್ರೈನರುಗಳಾಗಿ ನೇಮಿಸುವಂತೆ ನಾರಾಯಣಮೂರ್ತಿ ಸಲಹೆ

  1. ಅಮೆರಿಕ: 26 ಟ್ರಿಲಿಯನ್ ಡಾಲರ್
  2. ಚೀನಾ: 17.8 ಟ್ರಿಲಿಯನ್ ಡಾಲರ್
  3. ಜರ್ಮನಿ: 4.4 ಟ್ರಿಲಿಯನ್ ಡಾಲರ್
  4. ಜಪಾನ್: 4.23 ಟ್ರಿಲಿಯನ್ ಡಾಲರ್
  5. ಭಾರತ: 3.73 ಟ್ರಿಲಿಯನ್ ಡಾಲರ್
  6. ಬ್ರಿಟನ್: 3.33 ಟ್ರಿಲಿಯನ್ ಡಾಲರ್
  7. ಫ್ರಾನ್ಸ್: 3 ಟ್ರಿಲಿಯನ್ ಡಾಲರ್
  8. ಇಟಲಿ: 2.2 ಟ್ರಿಲಿಯನ್ ಡಾಲರ್
  9. ಬ್ರೆಜಿಲ್: 2.13 ಟ್ರಿಲಿಯನ್ ಡಾಲರ್
  10. ಕೆನಡಾ: 2.1 ಟ್ರಿಲಿಯನ್ ಡಾಲರ್

ಈ ಅಗ್ರ 10 ಬೃಹತ್ ಆರ್ಥಿಕತೆಗಳ ಪೈಕಿ ಅತಿ ಕಡಿಮೆ ತಲಾದಾಯ ಇರುವುದು ಭಾರತವೇ. ಜಿಡಿಪಿ ತಲಾದಾಯ ಕೇವಲ 2,610 ಡಾಲರ್ ಇದೆ. ಬ್ರೆಜಿಲ್ ಮತ್ತು ಚೀನಾದ ತಲಾದಾಯ ಕ್ರಮವಾಗಿ 10,410 ಡಾಲರ್ ಮತ್ತು 12,540 ಡಾಲರ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us