ಅಕ್ಟೋಬರ್ನಲ್ಲಿ ಆಮದು ಮತ್ತು ರಫ್ತು ಎರಡೂ ಹೆಚ್ಚಳ; ಟ್ರೇಡ್ ಡೆಫಿಸಿಟ್ ಹೊಸ ದಾಖಲೆ ಮಟ್ಟದಲ್ಲಿ
India Exports and Imports: ಅಕ್ಟೋಬರ್ ತಿಂಗಳಲ್ಲಿ ರಫ್ತು ಹೆಚ್ಚಾಗಿದ್ದರೂ ಈ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ರಫ್ತು ಇಳಿಕೆಯಾಗಿದೆ. ಏಪ್ರಿಲ್ನಿಂದ ಅಕ್ಟೋಬರ್ವರೆಗೆ 7 ತಿಂಗಳಲ್ಲಿ ಭಾರತದಿಂದ ಒಟ್ಟಾರೆ 244.89 ಬಿಲಿಯನ್ ಡಾಲರ್ನಷ್ಟು ರಫ್ತಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು ಪ್ರಮಾಣ ಶೇ. 7ರಷ್ಟು ಕಡಿಮೆ ಆಗಿದೆ.
ನವದೆಹಲಿ, ನವೆಂಬರ್ 15: ಭಾರತದ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ಅಕ್ಟೋಬರ್ನಲ್ಲಿ ಹೆಚ್ಚಾಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ರಫ್ತು ಮತ್ತು ಆಮದು ಎರಡೂ ಕೂಡ ಹೆಚ್ಚಾಗಿದೆ. ಅಕ್ಟೋಬರ್ನಲ್ಲಿ ಭಾರತದ ರಫ್ತು (India exports) ಶೇ. 6.21ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ 31.6 ಬಿಲಿಯನ್ ಡಾಲರ್ನಷ್ಟಿದ್ದ ರಫ್ತು ಈ ಬಾರಿ 33.57 ಬಿಲಿಯನ್ ಡಾಲರ್ಗೆ (2.8 ಲಕ್ಷ ಕೋಟಿ ರೂ) ಏರಿದೆ. ಇನ್ನು, ಆಮದು ಪ್ರಮಾಣ 2022ರ ಅಕ್ಟೋಬರ್ನಲ್ಲಿ 57.91 ಬಿಲಿಯನ್ ಡಾಲರ್ ಇದ್ದದ್ದು ಈಗ 65.03 ಬಿಲಿಯನ್ ಡಾಲರ್ಗೆ (5.4 ಲಕ್ಷ ಕೋಟಿ ರೂ) ಎರಿದೆ. ಇದರೊಂದಿಗೆ ಭಾರತದ ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ 31.46 ಬಿಲಿಯನ್ ಡಾಲರ್ನಷ್ಟಿದೆ.
ಅಕ್ಟೋಬರ್ ತಿಂಗಳಲ್ಲಿ ರಫ್ತು ಹೆಚ್ಚಾಗಿದ್ದರೂ ಈ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ರಫ್ತು ಇಳಿಕೆಯಾಗಿದೆ. ಏಪ್ರಿಲ್ನಿಂದ ಅಕ್ಟೋಬರ್ವರೆಗೆ 7 ತಿಂಗಳಲ್ಲಿ ಒಟ್ಟಾರೆ 244.89 ಬಿಲಿಯನ್ ಡಾಲರ್ನಷ್ಟು ರಫ್ತಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು ಪ್ರಮಾಣ ಶೇ. 7ರಷ್ಟು ಕಡಿಮೆ ಆಗಿದೆ.
ಇದನ್ನೂ ಓದಿ: ಈ ಹಬ್ಬದ ಸೀಸನ್ನಲ್ಲಿ ರೀಟೇಲ್ ಮಾರುಕಟ್ಟೆಯಲ್ಲಿ 3.75 ಲಕ್ಷಕೋಟಿ ರೂ ವಹಿವಾಟು; ಇದು ಹೊಸ ದಾಖಲೆ
ಆಮದು ವಿಚಾರದಲ್ಲೂ ಇದೇ ಟ್ರೆಂಡ್ ಇದೆ. ಅಕ್ಟೋಬರ್ನಲ್ಲಿ ಆಮದು ಪ್ರಮಾಣ ಹೆಚ್ಚಾದರೂ ಏಪ್ರಿಲ್ನಿಂದೀಚೆಗಿನ ದತ್ತಾಂಶ ಗಮನಿಸಿದರೆ ಆಮದು ಪ್ರಮಾಣ ಶೇ. 8.95ರಷ್ಟು ಇಳಿಮುಖ ಆಗಿದೆ. ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಭಾರತ ಮಾಡಿರುವ ಒಟ್ಟಾರೆ ಆಮದು 391.96 ಬಿಲಿಯನ್ ಡಾಲರ್ನಷ್ಟು ಎಂದು ಹೇಳಲಾಗಿದೆ.
ಇನ್ನಷ್ಟು ಹಿಗ್ಗಿದ ಟ್ರೇಡ್ ಡೆಫಿಸಿಟ್
ಅಕ್ಟೋಬರ್ ತಿಂಗಳಲ್ಲಿ ಭಾರತದ ಆಮದು ಮತ್ತು ರಫ್ತು ಹೆಚ್ಚಾಗಿದೆ. ಆದರೆ, ರಫ್ತಿಗೆ ಹೋಲಿಸಿದರೆ ಆಮದು ಬಹಳ ಹೆಚ್ಚಾಗಿದೆ. ಒಟ್ಟಾರೆ ಟ್ರೇಡ್ ಡೆಫಿಸಿಟ್ 26.3 ಬಿಲಿಯನ್ ಡಾಲರ್ನಿಂದ 31.46 ಬಿಲಿಯನ್ ಡಾಲರ್ಗೆ ಏರಿದೆ. ಒಂದು ತಿಂಗಳಲ್ಲಿ ವ್ಯಾಪಾರ ಅಂತರ ಅತಿಹೆಚ್ಚಾಗಿದ್ದು ಇದೇ ಮೊದಲೆನ್ನಲಾಗಿದೆ.
ಇದನ್ನೂ ಓದಿ: ಇನ್ಫ್ಲೇಷನ್ ವರದಿ ಬಿಡುಗಡೆ; ಅಕ್ಟೋಬರ್ನಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿಕೆ; ರಾಯ್ಟರ್ಸ್ ಪೋಲ್ ನಿರೀಕ್ಷೆ ನಿಜ
ಟ್ರೇಡ್ ಡೆಫಿಸಿಟ್ ಹೆಚ್ಚಾಗಲು ಚಿನ್ನದ ಆಮದು ಹೆಚ್ಚಳ ಕಾರಣವಾಗಿದೆ. ಕಳೆದ ವರ್ಷದ ಅಕ್ಟೋಬರ್ಗೆ ಹೋಲಿಸಿದರೆ ಈ ಬಾರಿ ಚಿನ್ನದ ಆಮದು ದ್ವಿಗುಣಗೊಂಡಿದೆ. 3.7 ಬಿಲಿಯನ್ ಡಾಲರ್ ಇದ್ದ ಚಿನ್ನದ ಆಮದು ಈಗ 7.2 ಬಿಲಿಯನ್ ಡಾಲರ್ಗೆ ಏರಿದೆ. ದೀಪಾವಳಿ ಹಬ್ಬದ ಕಾರಣ ಚಿನ್ನದ ಆಮದು ಏರಿಕೆ ಆಗಿದೆ. ಆರ್ಬಿಐ ಕೂಡ ಚಿನ್ನದ ಮೀಸಲು ನಿಧಿಯನ್ನು ಹೆಚ್ಚಿಸುತ್ತಿದೆ. ಇದು ಒಟ್ಟಾರೆ ಟ್ರೇಡ್ ಡೆಫಿಸಿಟ್ ದಾಖಲೆ ಮಟ್ಟಕ್ಕೆ ಹಿಗ್ಗಲು ಕಾರಣವಾಗಿರುವುದು ತಿಳಿದು ಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ