ಇನ್ಫ್ಲೇಷನ್ ವರದಿ ಬಿಡುಗಡೆ; ಅಕ್ಟೋಬರ್ನಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿಕೆ; ರಾಯ್ಟರ್ಸ್ ಪೋಲ್ ನಿರೀಕ್ಷೆ ನಿಜ
Inflation In October 2023: ಭಾರತದ ರೀಟೇಲ್ ಹಣದುಬ್ಬರ ದರ ಕಡಿಮೆ ಆಗಿದೆ. ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಫೀಸ್ (ಎನ್ಎಸ್ಒ) ಇಂದು ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿದಿದೆ. ಸೆಪ್ಟೆಂಬರ್ನಲ್ಲಿ ಹಣದುಬ್ಬರ ಶೇ. 5.02ರಷ್ಟಿತ್ತು.
ನವದೆಹಲಿ, ನವೆಂಬರ್ 13: ಭಾರತದ ರೀಟೇಲ್ ಹಣದುಬ್ಬರ ದರ (Retail inflation) ಕಡಿಮೆ ಆಗಿದೆ. ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಫೀಸ್ (NSO) ಇಂದು ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಶೇ. 4.87ಕ್ಕೆ ಇಳಿದಿದೆ. ಸೆಪ್ಟೆಂಬರ್ನಲ್ಲಿ ಹಣದುಬ್ಬರ ಶೇ. 5.02ರಷ್ಟಿತ್ತು. ಕಳೆದ ವಾರ ರಾಯ್ಟರ್ಸ್ ಸಂಸ್ಥೆ ನಡೆಸಿದ 50ಕ್ಕೂ ಹೆಚ್ಚು ಆರ್ಥಿಕ ತಜ್ಞರ ಸಮೀಕ್ಷೆಯಲ್ಲಿ ಅಕ್ಟೋಬರ್ನಲ್ಲಿ ಹಣದುಬ್ಬರ ಶೇ. 4.80ರಷ್ಟಿರಬಹುದು ಎಂದು ಅಂದಾಜು ಮಾಡಲಾಗಿತ್ತು. ಆ ನಿರೀಕ್ಷೆ ನಿಜವಾಗಿದೆ. ಶೇ. 4.87ರಷ್ಟು ಹಣದುಬ್ಬರವು ಕಳೆದ ಐದು ತಿಂಗಳಲ್ಲೇ ಕನಿಷ್ಠ ಮಟ್ಟವಾಗಿದೆ. ಅದೇ ವೇಳೆ ಆರ್ಬಿಐನ ಶೇ. 4ರ ಹಣದುಬ್ಬರ ಗುರಿಗೆ ಸಮೀಪ ಇದೆ.
ಗ್ರಾಹಕ ಬೆಲೆ ಅನುಸೂಚಿ ಆಧರಿತ ಹಣದುಬ್ಬರ ಇದಾಗಿದೆ. ಎನ್ಎಸ್ಒ ನೀಡಿರುವ ಮಾಹಿತಿ ಪ್ರಕಾರ ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಅಥವಾ ರೀಟೇಲ್ ಬೆಲೆ ಏರಿಕೆ ಶೇ. 5.12ರಷ್ಟಿದೆ. ನಗರ ಪ್ರದೇಶಗಳಲ್ಲಿ ಈ ದರ ಶೇ. 4.62ರಷ್ಟಿದೆ.
ಹಣದುಬ್ಬರ ನಿರ್ಣಯಿಸುವ ವಿವಿಧ ಅಂಶಗಳ ಪೈಕಿ ಪ್ರಮುಖವಾದುದು ಆಹಾರಗಳ ಗುಂಪು. ಸೆಪ್ಟೆಂಬರ್ನಲ್ಲಿ ಆಹಾರ ಬೆಲೆಯುಬ್ಬರ ಶೇ. 6.56ರಷ್ಟು ಇದ್ದದ್ದು ಅಕ್ಟೋಬರ್ನಲ್ಲಿ ಶೇ. 6.61ಕ್ಕೆ ಹೆಚ್ಚಿದೆ. ಅದು ಬಿಟ್ಟರೆ ಉಳಿದಂತೆ ಬೆಲೆ ಏರಿಕೆಯ ಬಿಸಿ ಅಷ್ಟು ತಾಗಿಲ್ಲ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಭಾರತದ ಹಣದುಬ್ಬರ ಶೇ. 4.80ಕ್ಕೆ ಇಳಿದಿರಬಹುದು: ರಾಯ್ಟರ್ಸ್ ಸಮೀಕ್ಷೆಯಲ್ಲಿ ಅನಿಸಿಕೆ
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದರಿಂದ ಆ ಎರಡು ತಿಂಗಳು ಹಣದುಬ್ಬರ ದರ ಶೇ. 6ಕ್ಕಿಂತಲೂ ಮೇಲೇ ಇತ್ತು. ಸೆಪ್ಟೆಂಬರ್ನಿಂದೀಚೆ ತರಕಾರಿ ಬೆಲೆಗಳು ತುಸು ಇಳಿಮುಖವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Mon, 13 November 23