ಅಕ್ಟೋಬರ್​ನಲ್ಲಿ ಭಾರತದ ಹಣದುಬ್ಬರ ಶೇ. 4.80ಕ್ಕೆ ಇಳಿದಿರಬಹುದು: ರಾಯ್ಟರ್ಸ್ ಸಮೀಕ್ಷೆಯಲ್ಲಿ ಅನಿಸಿಕೆ

October Inflation Prediction: ಅಕ್ಟೋಬರ್ ತಿಂಗಳಲ್ಲಿ ಭಾರತದ ಹಣದುಬ್ಬರ ಕಡಿಮೆ ಆಗಿರುವ ಸಾಧ್ಯತೆ ಇದೆ ಎಂದು ವಿವಿಧ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಯ್ಟರ್ಸ್ ನಡೆಸಿದ ಪೋಲ್ ಅಥವಾ ಸಮೀಕ್ಷೆಯಲ್ಲಿ ಪಾಲ್ಗೊಂಡ ತಜ್ಞರ ಪ್ರಕಾರ ಹಣದುಬ್ಬರ ಅಕ್ಟೋಬರ್​ನಲ್ಲಿ ಶೇ. 4.80ರಷ್ಟಿರಬಹುದು. ಸೆಪ್ಟೆಂಬರ್​ನಲ್ಲಿ ಶೇ. 5.02ರಷ್ಟಿದ್ದ ಹಣದುಬ್ಬರ ಅಕ್ಟೋಬರ್​ನಲ್ಲಿ ಆಹಾರ ಬೆಲೆ ಇಳಿಕೆ ಕಾರಣದಿಂದ ತುಸು ಕಡಿಮೆ ಆಗಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

ಅಕ್ಟೋಬರ್​ನಲ್ಲಿ ಭಾರತದ ಹಣದುಬ್ಬರ ಶೇ. 4.80ಕ್ಕೆ ಇಳಿದಿರಬಹುದು: ರಾಯ್ಟರ್ಸ್ ಸಮೀಕ್ಷೆಯಲ್ಲಿ ಅನಿಸಿಕೆ
ಹಣದುಬ್ಬರ
Follow us
|

Updated on: Nov 10, 2023 | 10:50 AM

ನವದೆಹಲಿ, ನವೆಂಬರ್ 10: ಅಕ್ಟೋಬರ್ ತಿಂಗಳಲ್ಲಿ ಭಾರತದ ಹಣದುಬ್ಬರ (October Inflation Rate) ಕಡಿಮೆ ಆಗಿರುವ ಸಾಧ್ಯತೆ ಇದೆ ಎಂದು ವಿವಿಧ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಯ್ಟರ್ಸ್ ನಡೆಸಿದ ಪೋಲ್ ಅಥವಾ ಸಮೀಕ್ಷೆಯಲ್ಲಿ (Reuters Poll) ಪಾಲ್ಗೊಂಡ ತಜ್ಞರ ಪ್ರಕಾರ ಹಣದುಬ್ಬರ ಅಕ್ಟೋಬರ್​ನಲ್ಲಿ ಶೇ. 4.80ರಷ್ಟಿರಬಹುದು. ವಿವಿಧ ಅಭಿಪ್ರಾಯಗಳ ಸರಾಸರಿ ಪಡೆದಾಗ ಶೇ. 4.80ರಷ್ಟಾಗಿದೆ. ಇದು ಕಳೆದ ನಾಲ್ಕು ತಿಂಗಳಲ್ಲೇ ಅತ್ಯಂತ ಕಡಿಮೆ ಹಣದುಬ್ಬರ ದರವಾಗಿದೆ.

ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 6.83ರಷ್ಟು ಇದ್ದದ್ದು ಸೆಪ್ಟೆಂಬರ್ ತಿಂಗಳಲ್ಲಿ ಶೇ. 5.02ಕ್ಕೆ ಇಳಿದಿತ್ತು. ಆರ್​ಬಿಐ ಅಂದಾಜು ಪ್ರಕಾರ ಅಕ್ಟೋಬರ್​ನಿಂದ ನವೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ಸರಾಸರಿ ಶೇ. 5.6ರಷ್ಟಿರಬಹುದು ಎಂದಿದೆ. ಇದೀಗ ಅಕ್ಟೋಬರ್ ತಿಂಗಳ ಹಣದುಬ್ಬರ ದರ ಎಷ್ಟೆಂಬುದು ಇನ್ನೆರಡು ದಿನಗಳಲ್ಲಿ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ: Inflation Target: ಇನ್ನೂ ಕೆಲ ಕಾಲ ಹಣದುಬ್ಬರ ಇದ್ದರೆ ಚಿಂತೆ ಬೇಡ; ಅಭಿವೃದ್ದಿಗೋಸ್ಕರ ಹಣದುಬ್ಬರ ಇರಲಿಬಿಡಿ: ಎಂಪಿಸಿ ಸದಸ್ಯ ಜಯಂತ್ ವರ್ಮಾ

ಸಾಮಾನ್ಯವಾಗಿ ಹಣದುಬ್ಬರ ದರ ಪ್ರಕಟವಾಗುವ ಕೆಲ ದಿನಗಳ ಮೊದಲು ರಾಯ್ಟರ್ಸ್ ಸಂಸ್ಥೆ ವಿವಿಧ ಹಣಕಾಸು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಅಂದಾಜು ದರವನ್ನು ಪ್ರಕಟಿಸುತ್ತದೆ. ನವೆಂಬರ್ 6ರಿಂದ 9ರವರೆಗಿನ ಅವಧಿಯಲ್ಲಿ 53 ಮಂದಿ ಆರ್ಥಿಕ ತಜ್ಞರ ಸಮೀಕ್ಷೆ ನಡೆಸಲಾಗಿದೆ. ಅವರೆಲ್ಲರ ಅಭಿಪ್ರಾಯದ ಸರಾಸರಿ ಪಡೆದಾಗ ಅಕ್ಟೋಬರ್​ನಲ್ಲಿ ಶೇ. 4.8ರಷ್ಟು ಹಣದುಬ್ಬರ ಇರಬಹುದು ಎಂದು ಭಾವಿಸಲಾಗಿದೆ. ಈ 53 ಆರ್ಥಿಕ ತಜ್ಞರು ಶೇ. 4.47ರಿಂದ ಶುರುವಾಗಿ ಶೇ. 5.55ರವರೆಗೆ ವಿವಿಧ ದರಗಳನ್ನು ಹೆಸರಿಸಿದ್ದರು.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇ. 20ರಷ್ಟು ಮಂದಿ ಮಾತ್ರ ಹಣದುಬ್ಬರ ಸೆಪ್ಟೆಂಬರ್​ನದ್ದಕ್ಕಿಂತ ಹೆಚ್ಚಬಹುದು ಎಂದಿದ್ದಾರೆ. ಉಳಿದವರು ಹಣದುಬ್ಬರ ದರ ಇಳಿಕೆ ಆಗಲಿದೆ ಎಂಬ ಅಭಿಪ್ರಾಯ ನೀಡಿದ್ದಾರೆ.

ಇದನ್ನೂ ಓದಿ: ಆರ್​ಬಿಐ ಎಂಪಿಸಿ ಸಭೆ ಹೈಲೈಟ್ಸ್; ರೆಪೋ ದರ ಶೇ. 6.5ರಲ್ಲಿ ಮುಂದುವರಿಕೆ; ಜಿಡಿಪಿ, ಹಣದುಬ್ಬರ ಅಂದಾಜು ವಿವರ ಇಲ್ಲಿದೆ

ಅಕ್ಟೋಬರ್​ನಲ್ಲಿ ಹಣದುಬ್ಬರ ದರ ಇಳಿಯಲು ಆಹಾರ ಬೆಲೆ ಇಳಿಕೆ ಪ್ರಮುಖ ಕಾರಣವಾಗಬಹುದು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಟೊಮೆಟೋ ಸೇರಿದಂತೆ ವಿವಿಧ ತರಕಾರಿಗಳ ಬೆಲೆ ಬಹಳ ಉಚ್ಚ ಮಟ್ಟದಲ್ಲಿತ್ತು. ಸೆಪ್ಟೆಂಬರ್​ನಿಂದೀಚೆ ಬೆಲೆ ತಗ್ಗಿದೆ. ಈಗ ಈರುಳ್ಳಿ ಬೆಲೆ ಹೆಚ್ಚಿನ ಮಟ್ಟದಲ್ಲಿದ್ದರೂ ಬೇರೆ ತರಕಾರಿಗಳ ಬೆಲೆ ಕೈಮೀರಿಹೋಗಿಲ್ಲ. ಹೀಗಾಗಿ, ಹಣದುಬ್ಬರ ತುಸು ಕಡಿಮೆ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು