AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀರೋ ಮೋಟೋಕಾರ್ಪ್ ಮುಖ್ಯಸ್ಥ ಪವನ್ ಮುಂಜಲ್​ರ 25 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

Hero MotoCorp CMD Pawan Munjal's Properties Attached: ಹೀರೋ ಮೋಟೋಕಾರ್ಪ್​ನ ಸಿಎಂಡಿ ಪವನ್ ಮುಂಜಲ್ ಅವರ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಸುದ್ದಿ ವರದಿಯಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ, ಮನಿ ಲಾಂಡರಿಂಗ್ ಕಾಯ್ದೆ ಅಡಿಯಲ್ಲಿ ಮುಂಜಲ್ ಅವರ 24.95 ಕೋಟಿ ರೂ ಮೌಲ್ಯದ ಒಟ್ಟು 3 ಚಿರಾಸ್ತಿಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಆಸ್ತಿಗಳು ದೆಹಲಿಯಲ್ಲಿವೆ.

ಹೀರೋ ಮೋಟೋಕಾರ್ಪ್ ಮುಖ್ಯಸ್ಥ ಪವನ್ ಮುಂಜಲ್​ರ 25 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ
ಪವನ್ ಮುಂಜಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 10, 2023 | 1:02 PM

Share

ನವದೆಹಲಿ, ನವೆಂಬರ್ 10: ಭಾರತದ ಅಗ್ರಗಣ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹೀರೋ ಮೋಟೋಕಾರ್ಪ್​ನ ಸಿಎಂಡಿ ಪವನ್ ಮುಂಜಲ್ (Pawan Munjal) ಅವರ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು (Properties Attached by ED) ಹಾಕಿಕೊಂಡಿರುವ ಸುದ್ದಿ ವರದಿಯಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ, ಪಿಎಂಎಲ್​ಎ (PMLA- Prevention of Money Laundering Act) ಅಡಿಯಲ್ಲಿ ಮುಂಜಲ್ ಅವರ 24.95 ಕೋಟಿ ರೂ ಮೌಲ್ಯದ ಒಟ್ಟು 3 ಚಿರಾಸ್ತಿಗಳನ್ನು (Immovable Properties) ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಆಸ್ತಿಗಳು ದೆಹಲಿಯಲ್ಲಿವೆ.

ವಿದೇಶೀ ವಿನಿಮಯ ಹಣವನ್ನು ದೇಶದಿಂದ ಅಕ್ರಮವಾಗಿ ಹೊರಗೆ ಸಾಗಿಸಿದ ಆರೋಪ ಪ್ರವೀಣ್ ಮುಂಜಲ್ ಸೇರಿದಂತೆ ವಿವಿಧ ಮಂದಿ ಮೇಲಿದೆ. ರೆವಿನ್ಯೂ ಇಂಟೆಲಿಜೆನ್ಸ್ ಡೈರೆಕ್ಟೋರೇಟ್ (ಡಿಆರ್​ಐ) ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದ್ದು, ಜಾರಿ ನಿರ್ದೇಶನಾಲಯವು ಇದರ ತನಿಖೆ ನಡೆಸುತ್ತಿದೆ. ಡಿಆರ್​ಐ ನೀಡಿರುವ ದೂರಿನ ಪ್ರಕಾರ ಹೀರೋ ಮೋಟಾಕಾರ್ಪ್ ಸಿಎಂಡಿ ಮತ್ತಿತರರು ಭಾರತದಿಂದ 54 ಕೋಟಿ ರೂ ಮೌಲ್ಯದ ವಿದೇಶೀ ಕರೆನ್ಸಿಗಳನ್ನು ಅಕ್ರಮವಾಗಿ ಹೊರಗೆ ಕಳುಹಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Wipro: ವಿಪ್ರೋದಲ್ಲಿ ಈ ಬಾರಿ ಅಧಿಕ ಸಂಬಳದ ದಕ್ಷ ಉದ್ಯೋಗಿಗಳಿಗೆ ಇಲ್ಲ ಸಂಬಳಹೆಚ್ಚಳ

ಪವನ್ ಮುಂಜಲ್ ಮಾಡಿದ ತಪ್ಪೇನು?

ಹೀರೋ ಮೋಟೋಕಾರ್ಪ್ ಸಿಎಂಡಿ ಪವನ್ ಮುಂಜಲ್ ಅವರು ಬೇನಾಮಿ ಹೆಸರಲ್ಲಿ ವಿದೇಶೀ ಕರೆನ್ಸಿಗಳ ವಿತರಣೆ ಮಾಡಿಸಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಬೇರೆ ಬೇರೆ ಉದ್ಯೋಗಿಗಳ ಹೆಸರಿನಲ್ಲಿ ಹೀರೋ ಮೋಟೋಕಾರ್ಪ್​ನ ಆಥರೈಸ್ಡ್ ಡೀಲರ್​ಗಳಿಂದ ಫಾರೀನ್ ಎಕ್ಸ್​ಚೇಂಜ್ ಹಣವನ್ನು ಪಡೆಯಲಾಗಿದೆ. ಬಳಿಕ ಅದನ್ನು ಪವನ್ ಮುಂಜಲ್ ಅವರ ರಿಲೇಶನ್​ಶಿಪ್ ಮ್ಯಾನೇಜರ್​ಗೆ ಹಸ್ತಾಂತರಿಸಲಾಗಿದೆ. ವಿದೇಶಗಳಲ್ಲಿ ಈ ಹಣವನ್ನು ಪವನ್ ಮುಂಜಲ್ ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ವಿಚಾರವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Vedanta: ಡಿಸ್​ಪ್ಲೇ ಫ್ಯಾಬ್ ಘಟಕ ಸ್ಥಾಪನೆಗೆ ವೇದಾಂತ ಮತ್ತು ತೈವಾನ್​ನ ಇನ್ನೋಲುಕ್ಸ್ ನಡುವೆ ನಡೆದಿದೆ ಮಾತುಕತೆ

ಪವನ್ ಮುಂಜಲ್ ಅವರು ವಿದೇಶಕ್ಕೆ ಹೋದಾಗಲೆಲ್ಲ ಅವರ ರಿಲೇಶನ್​ಶಿಪ್ ಮ್ಯಾನೇಜರ್ ಫಾರೀನ್ ಕರೆನ್ಸಿಯ ನಗದು ಹಣವನ್ನು ರಹಸ್ಯವಾಗಿ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ವಿದೇಶಗಳಲ್ಲಿ ಒಬ್ಬ ವ್ಯಕ್ತಿ ಮಾಡುವ ಖರ್ಚು ಒಂದು ವರ್ಷಕ್ಕೆ 2.5 ಲಕ್ಷ ಡಾಲರ್ ಮಿತಿ ಇದೆ. ಹೀಗಾಗಿ, ಪವನ್ ಮುಂಜಲ್ ಅವರು ಈ ಕಳ್ಳ ದಾರಿ ಹಿಡಿದಿದ್ದರು ಎಂಬುದು ಇಡಿ ತನಿಖೆಯಲ್ಲಿ ಗೊತ್ತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Fri, 10 November 23

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ