ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಾರ್ವಕಾಲಿಕ ದಾಖಲೆ; 110 ಕೋಟಿ ವಿಸಿಟ್; ಸ್ಮಾರ್ಟ್ಫೋನ್ ಭರಾಟೆ
Amazon Great Indian Festival Sale: ಅಕ್ಟೋಬರ್ 8ರಂದು ಶುರುವಾದ ಈ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಗೆ ಈವರೆಗೆ 110 ಕೋಟಿ ವಿಸಿಟ್ಗಳಾಗಿವೆ. ಯಾವುದೇ ವರ್ಷದ ಸೀಸನ್ನಲ್ಲಿ ಇಷ್ಟು ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿರಲಿಲ್ಲ. ಆ ಮಟ್ಟಿಗೆ ಇದು ಹೊಸ ದಾಖಲೆ ಆಗಿದೆ. ಈ ಸೀಸನ್ನಲ್ಲಿ 40 ಲಕ್ಷ ಹೊಸ ಗ್ರಾಹಕರು ಮೊದಲ ಬಾರಿಗೆ ಅಮೇಜಾನ್ನಲ್ಲಿ ಶಾಪಿಂಗ್ ಮಾಡಿದ್ದಾರೆ. ಅದೂ ಕೂಡ ಹೊಸ ದಾಖಲೆಯಾಗಿದೆ.
ಜಾಗತಿಕ ಇಕಾಮರ್ಸ್ ದೈತ್ಯ ಅಮೇಜಾನ್ನ ಈ ಬಾರಿಯ ಫೆಸ್ಟಿವಲ್ ಸೀಸನ್ ಸೇಲ್ಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon Great Indian Festival Sale) ಹೊಸ ದಾಖಲೆ ಸೃಷ್ಟಿಸಿದೆ. ಅಕ್ಟೋಬರ್ 8ರಂದು ಶುರುವಾದ ಈ ಫೆಸ್ಟಿವಲ್ ಸೇಲ್ಗೆ ಈವರೆಗೆ 110 ಕೋಟಿ ವಿಸಿಟ್ಗಳಾಗಿವೆ. ಯಾವುದೇ ವರ್ಷದ ಸೀಸನ್ನಲ್ಲಿ ಇಷ್ಟು ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿರಲಿಲ್ಲ. ಆ ಮಟ್ಟಿಗೆ ಇದು ಹೊಸ ದಾಖಲೆ ಆಗಿದೆ. ಈ ಸೀಸನ್ನಲ್ಲಿ 40 ಲಕ್ಷ ಹೊಸ ಗ್ರಾಹಕರು ಮೊದಲ ಬಾರಿಗೆ ಅಮೇಜಾನ್ನಲ್ಲಿ ಶಾಪಿಂಗ್ ಮಾಡಿದ್ದಾರೆ. ಅದೂ ಕೂಡ ಹೊಸ ದಾಖಲೆಯಾಗಿದೆ.
‘ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಇತಿಹಾಸದಲ್ಲೇ ಅತಿದೊಡ್ಡದು. ಗ್ರಾಹಕರ ಹಬ್ಬದ ಸಂಭ್ರಮದ ಭಾಗವಾಗಿರುವುದಕ್ಕೆ ಖುಷಿಯಾಗಿದೆ. 110 ಕೋಟಿಗೂ ಹೆಚ್ಚು ಭೇಟಿಗಳು, 40 ಲಕ್ಷಕ್ಕೂ ಹೆಚ್ಚು ಗ್ರಾಹಕರು ಮೊದಲ ಬಾರಿಗೆ ಶಾಪಿಂಗ್ ಮಾಡಿರುವುದು ಖುಷಿ ತಂದಿದೆ,’ ಎಂದು ಅಮೇಜಾನ್ನ ಇಂಡಿಯಾ ಕನ್ಸೂಮರ್ ಬಿಸಿನೆಸ್ ವಿಭಾಗದ ಮ್ಯಾನೇಜರ್ ಮನೀಶ್ ತಿವಾರಿ ಹೇಳಿದ್ದಾರೆ.
ಇದನ್ನೂ ಓದಿ: Wipro: ವಿಪ್ರೋದಲ್ಲಿ ಈ ಬಾರಿ ಅಧಿಕ ಸಂಬಳದ ದಕ್ಷ ಉದ್ಯೋಗಿಗಳಿಗೆ ಇಲ್ಲ ಸಂಬಳಹೆಚ್ಚಳ
ಅಮೇಜಾನ್ನ ಈ ಬಾರಿಯ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಹೊಸ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಿದೆ. ಸ್ಮಾರ್ಟ್ಫೋನ್, ಎಲೆಕ್ಟ್ರಾನಿಕ್ಸ್, ಪರ್ಸನಲ್ ಹೆಲ್ತ್ ಕೇರ್ ಉತ್ಪನ್ನಗಳು, ಫ್ಯಾಷನ್ ವಸ್ತು, ಹೋಮ್ ಡೆಕೋರ್, ಫಿಟ್ನೆಸ್ ಗೇರ್ ಇತ್ಯಾದಿ ಎಲ್ಲಾ ವಿಭಾಗಗಳಲ್ಲಿ 5,000 ಹೊಸ ಉತ್ಪನ್ನಗಳನ್ನು ಅಮೇಜಾನ್ ಬಿಡುಗಡೆ ಮಾಡಿದೆ. ಟಾಪ್ ಬ್ರ್ಯಾಂಡ್ಗಳ ಉತ್ಪನ್ನಗಳ ಲಭ್ಯತೆ, ಬ್ಯಾಂಕ್ ಡಿಸ್ಕೌಂಟ್, ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಅಂಶಗಳು ಜನರನ್ನು ಸೆಳೆದಿದೆ.
ಕುತೂಹಲ ಎಂದರೆ ಅಮೇಜಾನ್ ಫೆಸ್ಟಿವಲ್ ಸೇಲ್ಗೆ ಪ್ರಮುಖ ನಗರಗಳಿಗಿಂತ ಹೆಚ್ಚು ಬೇರೆಡೆಯಿಂದ ಗ್ರಾಹಕರು ಬಂದಿದ್ದಾರೆ. ಶಾಪಿಂಗ್ ಮಾಡಿದವರಲ್ಲಿ ಶೇ. 80ರಷ್ಟು ಮಂದಿ ಎರಡನೇ ಮತ್ತು ಮೂರನೇ ಸ್ತರದ ನಗರಗಳವರು ಎನ್ನಲಾಗಿದೆ. ಇದು ಅಮೇಜಾನ್ನ ರೀಚ್ ವ್ಯಾಪಿಸಿರುವುದು ರುಜುವಾತಾಗಿದೆ. ಇನ್ನು, ಅಮೇಜಾನ್ನ ಪ್ರೈಮ್ ಸದಸ್ಯತ್ವ ಕೂಡ ಹೆಚ್ಚಾಗಿದೆ.
ಇದನ್ನೂ ಓದಿ: ‘ಕೆಲಸ ಬಿಡಿ, 4 ಲಕ್ಷ ಹಣ ಪಡೆಯಿರಿ’- ಅಮೇಜಾನ್ ಉದ್ಯೋಗಿಗಳಿಗೆ ಪೇ ಟು ಕ್ವಿಟ್ ಆಫರ್; ವರ್ಕೌಟ್ ಆಗುತ್ತಾ ಈ ತಂತ್ರ?
ಅಮೇಜಾನ್ ಪ್ಲಾಟ್ಫಾರ್ಮ್ನಲ್ಲಿ 6,500 ಮಾರಾಟಗಾರರು 2022ಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚು ವ್ಯಾಪಾರ ಕಂಡಿದ್ದಾರೆ. 38,000 ಮಾರಾಟಗಾರರು ದಿನ ಅತ್ಯಂತ ಗರಿಷ್ಠ ಮಾರಾಟ ಕಂಡಿದ್ದಾರೆ. 31,00 ಮಾರಾಟಗಾರರು ಈ ಸೀಸನ್ನಲ್ಲಿ ಲಕ್ಷಗಟ್ಟಲೆ ಮೌಲ್ಯದ ವಸ್ತುಗಳನ್ನು ಮಾರಿದ್ದಾರೆ. 750ಕ್ಕೂ ಹೆಚ್ಚು ಮಾರಾಟಗಾರರು ಒಂದು ಕೋಟಿ ರೂಗೂ ಹೆಚ್ಚು ಮೊತ್ತದ ವ್ಯಾಪಾರ ಮಾಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಮಾರ್ಟ್ಫೋನ್ ಮಾರಾಟ ಎರಡೂವರೆ ಪಟ್ಟು ಹೆಚ್ಚಾಗಿದೆ. ಶೇ. 60ರಷ್ಟು ಸ್ಮಾರ್ಟ್ಫೋನ್ಗಳು 5ಜಿಯದ್ದಾಗಿವೆ. ಇನ್ನು, ದೊಡ್ಡ ಪರದೆಯ ಟಿವಿಗಳ ಮಾರಾಟದಲ್ಲಿ ಶೇ. 50ರಷ್ಟು ಹೆಚ್ಚಳವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ