AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wipro: ವಿಪ್ರೋದಲ್ಲಿ ಈ ಬಾರಿ ಅಧಿಕ ಸಂಬಳದ ದಕ್ಷ ಉದ್ಯೋಗಿಗಳಿಗೆ ಇಲ್ಲ ಸಂಬಳಹೆಚ್ಚಳ

No Salary Hike For Top Performers With High Compensation: ವರದಿ ಪ್ರಕಾರ, ಡಿಸೆಂಬರ್​ನಲ್ಲಿ ವಿಪ್ರೋ ಉದ್ಯೋಗಿಗಳ ಸ್ಯಾಲರಿ ಪರಿಷ್ಕರಣೆ ಆಗಲಿದೆ. ಈ ಬಾರಿ ಟಾಪ್ ಪರ್ಫಾರ್ಮರ್ಸ್​ಗಳೆಲ್ಲರಿಗೂ ಸಂಬಳ ಹೆಚ್ಚಳ ಸಿಗುವುದು ಅನುಮಾನ. ಅಧಿಕ ಸಂಬಳ ಇರುವ ದಕ್ಷ ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಇರುವುದಿಲ್ಲ. ಕಡಿಮೆ ಸಂಬಳದವರಿಗೆ ಮೊದಲ ಆದ್ಯತೆ ಕೊಡಲು ವಿಪ್ರೋ ಆಡಳಿತ ನಿರ್ಧರಿಸಿದೆ ಎಂದು ರಾಯ್ಟರ್ಸ್ ವರದಿಯಲ್ಲಿ ಹೇಳಲಾಗಿದೆ.

Wipro: ವಿಪ್ರೋದಲ್ಲಿ ಈ ಬಾರಿ ಅಧಿಕ ಸಂಬಳದ ದಕ್ಷ ಉದ್ಯೋಗಿಗಳಿಗೆ ಇಲ್ಲ ಸಂಬಳಹೆಚ್ಚಳ
ವಿಪ್ರೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2023 | 11:24 AM

Share

ಬೆಂಗಳೂರು, ನವೆಂಬರ್ 10: ಭಾರತದ ಐಟಿ ದಿಗ್ಗಜ ಸಂಸ್ಥೆ ವಿಪ್ರೋ (Wipro Technologies) ಈ ಬಾರಿ ಅಳೆದು ತೂಗಿ ಸಂಬಳ ಹೆಚ್ಚಳ ಕ್ರಮ ತೆಗೆದುಕೊಳ್ಳಲಿದೆ. ಐಟಿ ಕ್ಷೇತ್ರದಲ್ಲಿ ತುಸು ಹಿನ್ನಡೆ ಇರುವುದರಿಂದ ವಿಪ್ರೋ ಮಾಮೂಲಿಯ ರೀತಿಯಲ್ಲಿ ಸಂಬಳ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಿಪ್ರೋದ ಇಂಟರ್ನಲ್ ಮೆಮೋವೊಂದನ್ನು (wipro internal memo) ಆಧರಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ಪ್ರಕಟಿಸಿದ ವರದಿ ಪ್ರಕಾರ, ಡಿಸೆಂಬರ್​ನಲ್ಲಿ ಸ್ಯಾಲರಿ ಪರಿಷ್ಕರಣೆ (salary revision) ಆಗಲಿದೆ. ಈ ಬಾರಿ ಟಾಪ್ ಪರ್ಫಾರ್ಮರ್ಸ್​ಗಳೆಲ್ಲರಿಗೂ ಸಂಬಳ ಹೆಚ್ಚಳ ಸಿಗುವುದು ಅನುಮಾನ. ಅಧಿಕ ಸಂಬಳ ಇರುವ ದಕ್ಷ ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಇರುವುದಿಲ್ಲ. ಕಡಿಮೆ ಸಂಬಳದವರಿಗೆ ಮೊದಲ ಆದ್ಯತೆ ಕೊಡಲು ವಿಪ್ರೋ ಆಡಳಿತ ನಿರ್ಧರಿಸಿದೆ ಎಂದು ರಾಯ್ಟರ್ಸ್ ವರದಿಯಲ್ಲಿ ಹೇಳಲಾಗಿದೆ.

ಇಂಟರ್ನಲ್ ಮೆಮೋದಲ್ಲಿ ಏನಿದೆ…?

‘ನಮ್ಮ ವ್ಯವಹಾರಕ್ಕೆ ಅನುಗುಣವಾಗಿ ಎಂಎಸ್​ಐ (ಮೆರಿಟ್ ಆಧಾರಿತ ಸಂಬಳ ಹೆಚ್ಚಳ) ಕ್ರಮ ತೆಗೆದುಕೊಳ್ಳುತ್ತಿದ್ದೇವೆ… ಸಂಬಳ ಹೆಚ್ಚಳಕ್ಕೆ ಅರ್ಹರಾಗಿರುವವರ ಪೈಕಿ ಕಡಿಮೆ ಸಂಬಳದ ಉದ್ಯೋಗಿಗಳಿಗೆ ಆದ್ಯತೆ ಕೊಡುತ್ತೇವೆ. ಅಧಿಕ ಸಂಬಳದ ಅರ್ಹ ಉದ್ಯೋಗಿಗಳನ್ನು ಈ ಬಾರಿ ಸಂಬಳ ಹೆಚ್ಚಳಕ್ಕೆ ಪರಿಗಣಿಸಲಾಗುವುದಿಲ್ಲ,’ ಎಂದು ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್​ನಲ್ಲಿ ವಿಪ್ರೋದ ಹಿರಿಯ ಅಧಿಕಾರಿ ನಾಗೇಂದ್ರ ಬಂಡಾರು ತಿಳಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ರಿಲಾಯನ್ಸ್​ನ ಮೊದಲ ‘ಸ್ವದೇಶ್ ಸ್ಟೋರ್’; ದೇಶದ ಕರಕುಶಲಕರ್ಮಿಗಳ ಬದುಕಿಕೊಂದು ಆಧಾರ

ಇದು ವಿಪ್ರೋ ಎಂಟರ್ಪ್ರೈಸ್ ಫ್ಯೂಚರಿಂಗ್ (Wipro Interprise Futuring business line) ವಿಭಾಗದಲ್ಲಿ ತೆಗೆದುಕೊಳ್ಳಲಾಗುವ ಕ್ರಮ. ನಾಗೇಂದ್ರ ಬಂಡಾರು ಅವರು ಈ ವಿಭಾಗದ ಮ್ಯಾನೇಜಿಂಗ್ ಪಾರ್ಟ್ನರ್ ಮತ್ತು ಪ್ರೆಸಿಡೆಂಟ್ ಆಗಿದ್ದಾರೆ. ವಿಪ್ರೋದಲ್ಲಿ ಇದಲ್ಲದೇ ಇನ್ನೂ ಮೂರು ಬಿಸಿನೆಸ್ ಲೈನ್​ಗಳಿವೆ. ಎಲ್ಲಾ ವಿಭಾಗದಲ್ಲೂ ಇದೇ ಕ್ರಮ ಅನುಸರಿಸಲಾಗುತ್ತದಾ ಎಂಬುದು ಗೊತ್ತಾಗಿಲ್ಲ ಎಂದೂ ರಾಯ್ಟರ್ಸ್ ವರದಿ ಸ್ಪಷ್ಟಪಡಿಸಿದೆ. ಡಿಸೆಂಬರ್ 1ಕ್ಕೆ ವಿಪ್ರೋ ಉದ್ಯೋಗಿಗಳಿಗೆ ಪರಿಷ್ಕೃತ ಸಂಬಳ ಬಿಡುಗಡೆ ಆಗುತ್ತದೆ.

ಭಾರತದ ಐಟಿ ಕಂಪನಿಗಳ ಬಿಸಿನೆಸ್ ಜಾಗತಿಕ ಆರ್ಥಿಕತೆಯ ಮೇಲೆ ನಿಂತಿದೆ. ಅದರ ಹೆಚ್ಚಿನ ಕ್ಲೈಂಟ್​ಗಳು ಅಮೆರಿಕ ಮತ್ತು ಯೂರೋಪ್​ನಲ್ಲಿವೆ. ಆದರೆ, ಅಲ್ಲೀಗ ಆರ್ಥಿಕ ಹಿನ್ನಡೆ ಇರುವುದರಿಂದ ಹೆಚ್ಚಿನ ಕಂಪನಿಗಳು ತಮ್ಮ ಖರ್ಚುವೆಚ್ಚವನ್ನು ಕಡಿಮೆ ಮಾಡಿವೆ. ಅದರಲ್ಲಿ ಐಟಿ ಸೇವೆಗೆ ಮಾಡಲಾಗುವ ವೆಚ್ಚವೂ ಕಡಿತಗೊಂಡಿದೆ. ಇದರ ಪರಿಣಾಮವಾಗಿ ಭಾರತದ ಐಟಿ ಸರ್ವಿಸ್ ಕಂಪನಿಗಳ ಬಿಸಿನೆಸ್​ಗೆ ಹಿನ್ನಡೆ ಆಗಿದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ ಇತ್ಯಾದಿ ಕಂಪನಿಗಳ ಆದಾಯದಲ್ಲಿ ಇಳಿಕೆ ಕಂಡುಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ