ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

Ola, Uber, Other Apps Can't Ask You to Tip Before Your Ride: ರೈಡ್ ಹೈಲಿಂಗ್ ಆ್ಯಪ್​ಗಳಲ್ಲಿ ಕ್ಯಾಬ್ ಬುಕಿಂಗ್ ಮಾಡುವಾಗ ಚಾಲಕರಿಗೆ ಮುಂಚಿತವಾಗಿ ಟಿಪ್ಸ್ ನೀಡುವಂತೆ ಗ್ರಾಹಕರನ್ನು ಒತ್ತಾಯಪಡಿಸುವ ಕ್ರಮಕ್ಕೆ ಸರ್ಕಾರ ಬ್ರೇಕ್ ಹಾಕುತ್ತಿದೆ. ರೇಡ್​ಗೆ ಮುನ್ನ ಯಾವುದೇ ರೀತಿಯಲ್ಲಿ ಟಿಪ್ಸ್ ನೀಡಲು ಬಲವಂತಪಡಿಸುವಂತಿಲ್ಲ ಎಂದು ರಸ್ತೆ ಸಾರಿಗೆ ಸಚಿವಾಲಯವು ಆದೇಶಿಸಿದೆ. ರೇಡ್ ನಂತರ ಗ್ರಾಹಕರು ಬೇಕಾದರೆ ಡ್ರೈವರ್​ಗೆ ಟಿಪ್ಸ್ ನೀಡಲು ಅಡ್ಡಿ ಇಲ್ಲ.

ಪ್ರಿ-ರೈಡ್ ಟಿಪ್ಸ್ ಬಂದ್‌: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್
ಕ್ಯಾಬ್
Image Credit source: PTI

Updated on: Aug 13, 2026 | 7:36 PM

ನವದೆಹಲಿ, ಆಗಸ್ಟ್ 13: ಆನ್ಲೈನ್​ನಲ್ಲಿ ಕ್ಯಾಬ್ ಅಥವಾ ಆಟೋ ಬುಕ್ ಮಾಡುವ ಮುನ್ನವೇ ಚಾಲಕರಿಗೆ ‘ಟಿಪ್ಸ್’ ನೀಡುವಂತೆ ಒತ್ತಾಯಿಸುವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಎಲ್ಲಾ ರೈಡ್-ಹೇಲಿಂಗ್ (Ride-hailing) ಆ್ಯಪ್‌ಗಳಿಂದ ‘ಪ್ರಿ-ರೈಡ್ ಟಿಪ್ಸ್’ (Pre-ride tips) ಅಥವಾ ಮುಂಗಡ ಟಿಪ್ಸ್ ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶಿಸಿದೆ.

ಓಲಾ, ಊಬರ್ ಸೇರಿದಂತೆ ಎಲ್ಲಾ ಕ್ಯಾಬ್ ಬುಕಿಂಗ್ ಆ್ಯಪ್​ಗಳಲ್ಲಿ ಕ್ಯಾಬ್ ಬುಕಿಂಗ್ ಮಾಡುವಾಗ ತತ್​ಕ್ಷಣಕ್ಕೆ ಡ್ರೈವರ್​ಗಳಿಂದ ರಿಕ್ವೆಸ್ಟ್ ಸ್ವೀಕೃತಿ ಆಗದೇ ಇದ್ದಾಗ, ವಿವಿಧ ಪ್ರಮಾಣದ ಟಿಪ್ಸ್ ನೀಡಿ ಪ್ರಯತ್ನಿಸುವಂತೆ ಕೇಳಲಾಗುತ್ತದೆ. ಟಿಪ್ಸ್ ಕೊಟ್ಟರೆ ಡ್ರೈವರ್​ಗಳು ರೈಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಬಹುದು ಎಂದು ಗ್ರಾಹಕರನ್ನು ಪ್ರಲೋಬಿಸಲಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಟಿಪ್ಸ್ ಸೇರಿಸಿ ಬುಕ್ ಮಾಡುತ್ತಾರೆ. ಸರ್ಕಾರ ಈಗ ಕಡಿವಾಣ ಹಾಕಲು ಹೊರಟಿರುವುದು ಇದನ್ನೆಯೇ. ಸರ್ಕಾರದ ಹೊಸ ನಿಯಮಗಳು ಏನು ಹೇಳುತ್ತವೆ ನೋಡೋಣ:

ಇದನ್ನೂ ಓದಿ: ಕರ್ನಾಟಕದಲ್ಲಿ ಬಹಳ ಹೆಚ್ಚಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳು; ರಾಜ್ಯದ ಇವಿ ನೀತಿಗಳೇ ಇದಕ್ಕೆ ಕಾರಣವಾ?

  • ಬುಕಿಂಗ್‌ಗೂ ಮುನ್ನ ಟಿಪ್ಸ್ ಕೇಳುವಂತಿಲ್ಲ: ಕ್ಯಾಬ್ ಅಥವಾ ಆಟೋ ಬೇಗ ಸಿಗಬೇಕು ಎಂಬ ಕಾರಣಕ್ಕೆ ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್ ಆಫರ್ ಮಾಡಿಸುವ ಅಥವಾ ಕೇಳುವ ಯಾವುದೇ ಮೆಸೇಜ್/ಆಪ್ಷನ್ ಆ್ಯಪ್‌ನಲ್ಲಿ ಕಾಣಿಸುವಂತಿಲ್ಲ.
  • ಮೋಟಾರು ವಾಹನ ಮಾರ್ಗಸೂಚಿ ಉಲ್ಲಂಘನೆ: ‘ಮೋಟಾರು ವಾಹನ ಅಗ್ರಿಗೇಟರ್ ಗೈಡ್‌ಲೈನ್ಸ್ 2025’ (Motor Vehicle Aggregator Guidelines 2025) ಪ್ರಕಾರ, ಮುಂಗಡವಾಗಿ ಹೆಚ್ಚುವರಿ ಹಣ ಅಥವಾ ಟಿಪ್ಸ್ ಕೇಳುವುದು ನಿಯಮಬಾಹಿರ ಮತ್ತು ಅನುಚಿತ ವ್ಯಾಪಾರ ವಹಿವಾಟು (Unfair Trade Practice) ಎಂದು ಸರ್ಕಾರ ಸ್ಪಷ್ಟಪಡಿಸಿದೆ.
  • ಸವಾರಿ ಮುಗಿದ ನಂತರವಷ್ಟೇ ಅವಕಾಶ: ಚಾಲಕರ ಸೇವೆಗೆ ಮೆಚ್ಚಿ ಟಿಪ್ಸ್ ನೀಡುವುದಾದರೆ, ಅದು ಸಂಪೂರ್ಣವಾಗಿ ಪ್ರಯಾಣ (Ride) ಮುಗಿದ ನಂತರವಷ್ಟೇ ಸಾಧ್ಯವಾಗಲಿದೆ. ಅಲ್ಲದೆ, ಇದು ಸಂಪೂರ್ಣ ಗ್ರಾಹಕರ ಐಚ್ಛಿಕ ನಿರ್ಧಾರವಾಗಿರುತ್ತದೆ.
  • ಸಂಪೂರ್ಣ ಮೊತ್ತ ಚಾಲಕನಿಗೆ: ಪ್ರಯಾಣಿಕರು ಕೊಡುವ ಟಿಪ್ಸ್‌ನಿಂದ ಯಾವುದೇ ಕಂಪನಿಯು ಕಮಿಷನ್ ಕಟ್ ಮಾಡುವಂತಿಲ್ಲ, ಸಂಪೂರ್ಣ ಹಣ ಚಾಲಕನಿಗೇ ತಲುಪಬೇಕು.

ಇದನ್ನೂ ಓದಿ: ಏರ್​ಟೆಲ್​ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್​ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಮತ್ತು ರ‍್ಯಾಪಿಡೋದಂತಹ ಆ್ಯಪ್‌ಗಳು ಕ್ಯಾಬ್ ಹುಡುಕುವಾಗ “ಟಿಪ್ ಸೇರಿಸಿ, ಬೇಗನೆ ರೈಡ್ ಬುಕ್ ಮಾಡಿ” (Add a tip for faster pickup) ಎಂಬಂತಹ ಸಂದೇಶಗಳನ್ನು ನೀಡುತ್ತಿದ್ದವು. ಇದರಿಂದಾಗಿ ಹೆಚ್ಚುವರಿ ಹಣ (ಟಿಪ್) ನೀಡದಿದ್ದರೆ ರೈಡ್‌ಗಳು ರದ್ದಾಗುವ ಅಥವಾ ಚಾಲಕರು ಸ್ವೀಕರಿಸದೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಯಾಣಿಕರ ದೂರುಗಳನ್ನು ಪರಿಗಣಿಸಿದ ಕೇಂದ್ರ ಸರ್ಕಾರ, ಗ್ರಾಹಕರ ಮೇಲೆ ಮಾನಸಿಕ ಒತ್ತಡ ಹೇರುವ ಈ ವ್ಯವಸ್ಥೆಯನ್ನು ರದ್ದುಗೊಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us