ಈ ಶಿಕ್ಷಕರಿಗೆ 83 ಲಕ್ಷ ಸಂಬಳ ಕೊಡಿ; 10 ಸಾವಿರ ರಿಟೈರ್ಡ್ ಟೀಚರ್​ಗಳನ್ನು ಟ್ರೈನರುಗಳಾಗಿ ನೇಮಿಸುವಂತೆ ನಾರಾಯಣಮೂರ್ತಿ ಸಲಹೆ

|

Updated on: Nov 15, 2023 | 3:31 PM

Train The Teachers: ಎನ್ ಆರ್ ನಾರಾಯಣಮೂರ್ತಿ ಅವರ ಸಲಹೆಯಂತೆ ಶಿಕ್ಷಕರ ತರಬೇತಿಗೆ ಒಂದು ವರ್ಷಕ್ಕೆ ಒಂದು ಬಿಲಿಯನ್ ಡಾಲರ್ ಖರ್ಚಾಗುತ್ತದೆ. ಟೀಚರ್​ಗಳ ತರಬೇತಿ ಕೊಡುವ ಟ್ರೈನರುಗಳಿಗೆ ಒಂದು ವರ್ಷಕ್ಕೆ 1 ಲಕ್ಷ ಡಾಲರ್ (ಸುಮಾರು 83 ಲಕ್ಷ ರೂ) ಸಂಬಳ ಕೊಡಬೇಕು. 10,000 ಮಂದಿಗೆ 1 ಬಿಲಿಯನ್ ಡಾಲರ್ ವಾರ್ಷಿಕ ಸಂಭಾವನೆ ಕೊಡಬೇಕಾಗುತ್ತದೆ. ಈ ರೀತಿ 20 ವರ್ಷಕ್ಕೆ 20 ಬಿಲಿಯನ್ ಡಾಲರ್ ಖರ್ಚಾಗುತ್ತದೆ.

ಈ ಶಿಕ್ಷಕರಿಗೆ 83 ಲಕ್ಷ ಸಂಬಳ ಕೊಡಿ; 10 ಸಾವಿರ ರಿಟೈರ್ಡ್ ಟೀಚರ್​ಗಳನ್ನು ಟ್ರೈನರುಗಳಾಗಿ ನೇಮಿಸುವಂತೆ ನಾರಾಯಣಮೂರ್ತಿ ಸಲಹೆ
ಎನ್ ಆರ್ ನಾರಾಯಣಮೂರ್ತಿ
Follow us on

ಬೆಂಗಳೂರು, ನವೆಂಬರ್ 15: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ಆಗುವ ಕನಸು ಕಂಡಿದ್ದಾರೆ. ದೇಶದೆಲ್ಲೆಡೆ 2,500 ಟೀಚರ್ ಕಾಲೇಜುಗಳ (Train the Teachers Colleges) ಸ್ಥಾಪನೆಗೆ ಅವರು ಕರೆ ನೀಡಿದ್ದಾರೆ. ಶಿಕ್ಷಕರಿಗೆ ತರಬೇತಿ ಕೊಡುವ ಈ ಕಾಲೇಜುಗಳಿಗೆ 10,000 ನುರಿತ ಶಿಕ್ಷಕರನ್ನು ನೇಮಿಸಬೇಕೆಂದೂ ನಾರಾಯಣಮೂರ್ತಿ ಸಲಹೆ ನೀಡಿದ್ದಾರೆ. ಈ 10,000 ಶಿಕ್ಷಕರು ದೇಶ ವಿದೇಶಗಳಿಂದ ಆಯ್ದ ನಿವೃತ್ತ ಹಾಗೂ ಪ್ರತಿಷ್ಠಿತ ಟೀಚರುಗಳಾಗಿರಬೇಕು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಇವರು ಶಿಕ್ಷಕರಿಗೆ ಅತ್ಯುಚ್ಚ ತರಬೇತಿ ನೀಡಬೇಕು ಎಂದಿದ್ದಾರೆ.

‘ನಾಲ್ಕು ಜನರ ಟ್ರೈನರುಗಳ ತಂಡವೊಂದು ಒಂದು 100 ಪ್ರೈಮರಿ ಶಾಲೆ ಮತ್ತು 100 ಪ್ರೌಢಶಾಲೆಯ ಟೀಕಚರುಗಳಿಗೆ ತರಬೇತಿ ನೀಡಬಲ್ಲುದು. ಈ ರೀತಿಯಾಗಿ ನಾವು ಒಟ್ಟು 5 ಲಕ್ಷ ಟೀಚರುಗಳಿಗೆ ತರಬೇತಿ ನೀಡಬಹುದು. ಹೀಗೆ ತರಬೇತಿ ಪಡೆದ ಶಿಕ್ಷಕರು ಐದು ವರ್ಷದಲ್ಲಿ ಅವರೇ ಟ್ರೈನರುಗಳಾಗಿ ಕಾರ್ಯ ನಿರ್ವಹಿಸಬಹುದು’ ಎಂದು ಇನ್ಫೋಸಿಸ್​ನ ಮಾಜಿ ಛೇರ್ಮನ್ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ: ಟ್ರ್ಯೂಕಾಲರ್ ಸಿಇಒ ಮತ್ತು ನಾರಾಯಣಮೂರ್ತಿ ಮೊದಲ ಭೇಟಿ; ಇನ್ಫೋಸಿಸ್ ಸಂಸ್ಥಾಪಕರೆಂದು ಗೊತ್ತಾಗದೇ ನಡೆದ ಚರ್ಚೆಯಲ್ಲಿ ಆಗಿದ್ದೇನು?

20 ವರ್ಷದ 20 ಬಿಲಿಯನ್ ಡಾಲರ್ ಯೋಜನೆ

ಎನ್ ಆರ್ ನಾರಾಯಣಮೂರ್ತಿ ಅವರ ಸಲಹೆಯಂತೆ ಶಿಕ್ಷಕರ ತರಬೇತಿಗೆ ಒಂದು ವರ್ಷಕ್ಕೆ ಒಂದು ಬಿಲಿಯನ್ ಡಾಲರ್ ಖರ್ಚಾಗುತ್ತದೆ. ಟೀಚರ್​ಗಳ ತರಬೇತಿ ಕೊಡುವ ಟ್ರೈನರುಗಳಿಗೆ ಒಂದು ವರ್ಷಕ್ಕೆ 1 ಲಕ್ಷ ಡಾಲರ್ (ಸುಮಾರು 83 ಲಕ್ಷ ರೂ) ಸಂಬಳ ಕೊಡಬೇಕು. 10,000 ಮಂದಿಗೆ 1 ಬಿಲಿಯನ್ ಡಾಲರ್ ವಾರ್ಷಿಕ ಸಂಭಾವನೆ ಕೊಡಬೇಕಾಗುತ್ತದೆ. ಈ ರೀತಿ 20 ವರ್ಷಕ್ಕೆ 20 ಬಿಲಿಯನ್ ಡಾಲರ್ ಖರ್ಚಾಗುತ್ತದೆ ಎಂದು ಹೇಳುವ ಮೂರ್ತಿಗಳು, ಭಾರತದಂತಹ ದೊಡ್ಡ ಆರ್ಥಿಕತೆಗೆ ಇದು ದೊಡ್ಡ ಹಣಕಾಸು ಹೊರೆ ಆಗುವುದಿಲ್ಲ ಎಂದು ವಾದಿಸಿದ್ದಾರೆ.

‘ನಮ್ಮ ಟೀಚರುಗಳು ಮತ್ತು ರೀಸರ್ಚರ್​ಗಳಿಗೆ ನಾವು ಹೆಚ್ಚು ಗೌರವ ನೀಡಬೇಕು, ಹೆಚ್ಚು ಸಂಬಳ ಕೊಡಬೇಕು. ನಮ್ಮ ಸಂಶೋಧಕರಿಗೆ ಹೆಚ್ಚಿನ ಸವಲತ್ತುಗಳನ್ನೂ ಕೊಡಬೇಕು. ಅವರೆಲ್ಲರೂ ನಮ್ಮ ಯುವಜನಾಂಗಕ್ಕೆ ಆದರ್ಶಪ್ರಾಯರು,’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯವೀರ ತ್ರಿಮೂರ್ತಿಗಳನ್ನು ಹೆಸರಿಸಿದ ಇನ್ಫೋಸಿಸ್ ನಾರಾಯಣಮೂರ್ತಿ

ಎನ್ ಆರ್ ನಾರಾಯಣಮೂರ್ತಿ ಅವರು ನವೆಂಬರ್ 15ರಂದು ಇನ್ಫೋಸಿಸ್ ಪ್ರೈಜ್ 2023 ಪ್ರಶಸ್ತಿ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಸಂಸ್ಥೆ ಆರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತದೆ. 2009ರಿಂದಲೂ ಸಂಶೋಧಕರಿಗೆ ಇನ್ಫೋಸಿಸ್ ವತಿಯಿಂದ ಈ ಪ್ರಶಸ್ತಿಗಳು ಸಿಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ