ಒಮೆಗಾದಿಂದ ಉಚಿತ ತರಬೇತಿ ಕಾರ್ಯಾಗಾರ; ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಕುಟುಂಬದವರಿಗೆ ಹೊಲಿಗೆಯಂತ್ರ ವಿತರಣೆ
Omega Cabs' free training workshop: ಒಮೆಗಾ ಕ್ಯಾಬ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಇತ್ತೀಚೆಗೆ ವಿಸ್ತೃತ ಕಾರ್ಯಾಗಾರ ಹಮ್ಮಿಕೊಂಡಿತ್ತು. ಕ್ಯಾಬ್ ಚಾಲಕರಲ್ಲಿ ಶಿಸ್ತು, ವೃತ್ತಿಪರತೆ ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ಮತ್ತು ನೈಪುಣ್ಯತೆ ನೀಡಲಾಯಿತು. ಇದೇ ವೇಳೆ, ಕ್ಯಾಬ್ ಚಾಲಕರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿವೇತನ, ಹಾಗು ಕ್ಯಾಬ್ ಚಾಲಕರ ಆಯ್ದ ಕುಟುಂಬದವರಿಗೆ ಹೊಲಿಗೆಯಂತ್ರ ವಿತರಣೆಯ ಸಮಾರಂಭ ನಡೆಯಿತು.

ಬೆಂಗಳೂರು, ಡಿಸೆಂಬರ್ 7: ಕ್ಯಾಬ್ ಚಾಲಕರಿಗೆ ಶಿಸ್ತು, ಸಂಯಮ, ಸ್ವಚ್ಛತೆ, ಸಮಯಪಾಲನೆ, ನಿಯಮಪಾಲನೆ, ವೃತ್ತಿಪರತೆಯ ಬಗ್ಗೆ ನಿದರ್ಶನ ಸಹಿತವಾಗಿ ವಿವರಿಸುವ ವಿಸ್ತ್ರತ ಕಾರ್ಯಾಗಾರ ಬೆಂಗಳೂರಿನ ಹಲಸೂರಿನಲ್ಲಿ ಇತ್ತೀಚೆಗೆ (ನ. 29) ನಡೆಯಿತು. ಚರ್ಚೆ, ಚಿಂತನೆ, ಸಂವಾದ ರೂಪದ ಉಚಿತ ತರಬೇತಿ ಕಾರ್ಯಾಗಾರದ (Omega Cabs’ free workshop) ಜೊತೆಗೆ ಉತ್ತಮ ಚಾಲಕರನ್ನು ಪುರಸ್ಕರಿಸಲಾಯಿತು.
ಕಾರ್ಪೋರೇಟ್ ಸoಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕಂಪನಿ ಆಯೋಜಿಸಿದ್ದ ಈ ತರಬೇತಿ ಕಾರ್ಯಾಗಾರದ ನಂತರ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಕ್ಯಾಬ್ ಚಾಲಕರ ಮಕ್ಕಳಾದ ಲಿಷಿತಾ ಮುದ್ದುರಾಜ್ (SSLC 97%), ಡಿಂಪಲ್ ಸುರೇಶ ಮಾನೆ (SSLC 93%), ಉನ್ನತಿ ರವೀಂದ್ರ (SSLC 89%), ನಿವೇದಿತಾ ರಾಮಕೃಷ್ಣ (SSLC 80%), ಧ್ರುವ ರಮೇಶ್ (PUC 89%), ಮ್ಯಾಥ್ಯೂ (PUC 92%), ಪೃಥ್ವಿ ರಾಜೇಶ್ (PUC 82%), ಶ್ವೇತಾ ರಾಘಣ್ಣ (B.Com 91%), ಮಹಿಮಾ ಶ್ಯಾಮ್ (B.Com 89%), ಧಿಯಾ ಸುರೇಶ ಮಾನೆ (MBBS 2nd Year 71%) ವಿದ್ಯಾರ್ಥಿವೇತನ ಪಡೆದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಂತರ ಆಯ್ದ ಕ್ಯಾಬ್ ಚಾಲಕರ ಕುಟುಂಬದವರಿಗೆ ಉಚಿತವಾಗಿ ಹೊಲಿಗೆಯಂತ್ರ ವಿತರಿಸಲಾಯಿತು. ಫಲಾನುಭವಿಗಳು ಈ ಸೌಲಭ್ಯದ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢವಾಗುವ ಜೊತೆಗೆ ಕುಟುಂಬ ನಿರ್ವಹಣೆಗೆ ನೆರವಾಗಲಿ ಎಂಬ ಆಶಯ ಈ ಉಚಿತ ಹೊಲಿಗೆಯಂತ್ರ ವಿತರಣಾ ಯೋಜನೆಯದ್ದು. ಮಹಿಳಾ ಸಬಲೀಕರಣಕ್ಕೆ ಅಲ್ಪ ಪ್ರಮಾಣದಲ್ಲಿ ಕೊಡುಗೆ ನೀಡುವ ಸದುದ್ಧೇಶದಿoದ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಬಸವಣ್ಣ, ರವೀಶ್, ಮಲ್ಲೇಶ್, ನಿರಂಜನ್, ಸಂತೋಷ್ ಕುಟುಂಬದವರು ಉಚಿತ ಹೊಲಿಗೆಯoತ್ರ ಪಡೆದರು.
ಕಳೆದ ಕೆಲವು ವರ್ಷಗಳಿಂದ ಆಯ್ದ ಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಆಯ್ದ ಕ್ಯಾಬ್ ಚಾಲಕರ ಕುಟುಂಬದವರಿಗೆ ಹೊಲಿಗೆಯಂತ್ರ ನೀಡಿದ್ದ ಒಮೆಗಾ ಸಂಸ್ಥೆ ಸಾಮಾಜಿಕ ಕಳಕಳಿಯ ಬದ್ಧತೆಯನ್ನು ತೋರಿಸುತ್ತಾ ಉದ್ಯಮ ನಡೆಸುತ್ತಿದೆ.
ಕಾರ್ಯಕ್ರಮದಲ್ಲಿ ಅನುಭವಿ ತರಬೇತುದಾರ್ತಿ ಡಾ. ಉಷಾ ಮೋಹನ್, ಹಲಸೂರು ಟ್ರಾಫಿಕ್ ಎ.ಎಸ್.ಐ ಆಗಿರುವ ಶ್ರೀನಾಥ್ ಎನ್., ಮತ್ತು ಟ್ರಾಫಿಕ್ ಪೋಲಿಸ್ ರಮೇಶ್, ಒಮೆಗಾ ಸಂಸ್ಥೆಯ ಸಿಬ್ಬಂದಿಗಳಾದ ಗಣಪತಿ, ನವೀನ, ಚೇತನ್, ಲವೇಶ, ಕಾಸಿಫ್, ರಘುರಾಜ್, ಪ್ರಜ್ವಲ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಚಾಲಕರಿಗೆ ಮೊಬೈಲ್ ಹೋಲ್ಡರ್ ನೀಡಲಾಯಿತು.
ಒಮೇಗಾ ಕ್ಯಾಬ್ಸ್ನ ವೆಬ್ಸೈಟ್ ವಿಳಾಸ: www.omegacabs.in
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




