AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒರಾಕಲ್​ನಲ್ಲಿ ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು; ಎಐನಲ್ಲಿ ಹೂಡಿಕೆ ಮಾಡಲಿರುವ ಐಟಿ ದಿಗ್ಗಜ

Oracle lays off 21,000 jobs in a year: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರಮುಖ ಐಟಿ ಸಂಸ್ಥೆ ಒರಾಕಲ್ (Oracle), ತನ್ನ ಸಿಸ್ಟಂ ಅನ್ನು ಸಂಪೂರ್ಣವಾಗಿ ಮರುರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಬರೋಬ್ಬರಿ 21,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ (Layoffs). ಎಐ ಮೂಲಸೌಕರ್ಯ ಅಭಿವೃದ್ಧಿಗಾಗಿ 70 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ.

ಒರಾಕಲ್​ನಲ್ಲಿ ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು; ಎಐನಲ್ಲಿ ಹೂಡಿಕೆ ಮಾಡಲಿರುವ ಐಟಿ ದಿಗ್ಗಜ
ಬೆಂಗಳೂರಿನಲ್ಲಿರುವ ಆರೇಕಲ್ ಕಚೇರಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 23, 2026 | 1:07 PM

Share

ಟೆಕ್ಸಾಸ್, ಅಮೆರಿಕ, ಜೂನ್ 23: ಕಳೆದ ಹಣಕಾಸು ವರ್ಷದಲ್ಲಿ (2025-26) ಪ್ರಮುಖ ಸಾಫ್ಟ್​ವೇರ್ ಕಂಪನಿ ಆರೇಕಲ್ (Oracle) ಶೇ. 13ರಷ್ಟು ಲೇಫ್ ಮಾಡಿದೆ. ಬರೋಬ್ಬರಿ 21,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ (Job cut. ಜಾಗತಿಕವಾಗಿ 1.62 ಲಕ್ಷದಷ್ಟಿದ್ದ ಒರಾಕಲ್ ಉದ್ಯೋಗಿಗಳ ಸಂಖ್ಯೆ 2026ರ ಮೇ 31ಕ್ಕೆ 1.41 ಲಕ್ಷಕ್ಕೆ ಕುಸಿದಿದೆ. ಒರಾಕಲ್ ತನ್ನ ಇಡೀ ಸಿಸ್ಟಂ ಅನ್ನು ಮರುರಚಿಸುವ ಹಾದಿಯಲ್ಲಿ ಈ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಉದ್ಯೋಗಿಗಳನ್ನು ತೆಗೆದುಹಾಕಲು ಮತ್ತು ಕಂಪನಿಯ ಮರುರಚನೆಗಾಗಿ (Restructuring) ಒರಾಕಲ್ ಈ ವರ್ಷ 1.84 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಬಹಳ ಹೆಚ್ಚಾಗಿದೆ.

ಒರಾಕಲ್ $70 ಬಿಲಿಯನ್ ಹೂಡಿಕೆ ಯೋಜನೆ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇವೆಗಳು ಮತ್ತು ಡೇಟಾ ಸೆಂಟರ್‌ಗಳ (Data Centers) ಭಾರಿ ಬೇಡಿಕೆಯನ್ನು ಪೂರೈಸಲು ಒರಾಕಲ್ ಪ್ರಸ್ತುತ ಆರ್ಥಿಕ ವರ್ಷದಲ್ಲಿ 70 ಬಿಲಿಯನ್ ಡಾಲರ್ (6.6 ಲಕ್ಷ ಕೋಟಿ ರೂ) ಬಂಡವಾಳ ಹೂಡಿಕೆ (Capital Expenditure) ಮಾಡಲು ನಿರ್ಧರಿಸಿದೆ.

ಈ ಬೃಹತ್ ಹೂಡಿಕೆಗೆ ಹಣ ಹೊಂದಿಸಲು ಕಂಪನಿಯು ಡೆಟ್ ಮತ್ತು ಈಕ್ವಿಟಿ ಮಾರುಕಟ್ಟೆ ಮೂಲಕ ಹೆಚ್ಚುವರಿ 40 ಬಿಲಿಯನ್ ಡಾಲರ್ ಸಂಗ್ರಹಿಸಲು ಯೋಜಿಸಿದೆ. ಇದರಲ್ಲಿ ಈಗಾಗಲೇ ಘೋಷಿಸಲಾದ 20 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾರಾಟವೂ ಸೇರಿದೆ.

ಇದನ್ನೂ ಓದಿ: ಇರಾನ್ ವಿರುದ್ಧ ಆತ್ಮರಕ್ಷಣೆಗೆ ಭಾರತದ ಆಕಾಶ್​ತೀರ್ ಡಿಫೆನ್ಸ್ ಸಿಸ್ಟಂ ಮತ್ತು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಯುಎಇ ಮುಂದು

OpenAI ಜೊತೆ ಒರಾಕಲ್ ಒಪ್ಪಂದ

ಒರಾಕಲ್ ಭವಿಷ್ಯದ ಹಲವು ಪ್ರಮುಖ ಎಐ ಒಪ್ಪಂದಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಪ್ರಸಿದ್ಧ ಕಂಪನಿ ‘OpenAI’ ಕೂಡ ಸೇರಿದೆ. ಪ್ರಸ್ತುತ ಕಂಪನಿಯ ಕೈಯಲ್ಲಿರುವ ಆರ್ಡರ್‌ಗಳ ಒಟ್ಟು ಮೌಲ್ಯವು ಒರಾಕಲ್‌ನ ಇಡೀ ಷೇರು ಮಾರುಕಟ್ಟೆ ಮೌಲ್ಯಕ್ಕಿಂತ (Stock Market Value) ಹೆಚ್ಚಾಗಿದೆ.

ಷೇರು ಮಾರುಕಟ್ಟೆಯಲ್ಲಿ ಒರಾಕಲ್​ಗೆ ಒತ್ತಡ: ಇಷ್ಟೆಲ್ಲಾ ಭಾರಿ ಒಪ್ಪಂದಗಳಿದ್ದರೂ, ಇತ್ತೀಚಿನ ದಿನಗಳಲ್ಲಿ ಒರಾಕಲ್‌ನ ಷೇರುಗಳು ಸ್ವಲ್ಪ ಕುಸಿತ ಕಂಡಿವೆ. ಕಳೆದ ಒಂದು ವಾರದಲ್ಲಿ 9.1% ಮತ್ತು ಈ ವರ್ಷದ ಆರಂಭದಿಂದ 10.5% ರಷ್ಟು ಕುಸಿದು, ಸದ್ಯ ಪ್ರತಿ ಷೇರಿನ ಬೆಲೆ $175.07 ತಲುಪಿದೆ. ಆದಾಗ್ಯೂ, ದೀರ್ಘಾವಧಿಯಲ್ಲಿ (ಕಳೆದ 5 ವರ್ಷಗಳಲ್ಲಿ) ಕಂಪನಿಯ ಷೇರುಗಳು 138% ರಷ್ಟು ಭಾರಿ ಲಾಭ ನೀಡಿವೆ.

ಇದನ್ನೂ ಓದಿ: ಬೆಂಗಳೂರು ಮೂಲದ ಸ್ಟಾರ್ಟಪ್​ನಲ್ಲಿ ಮೆಟಾ ಭಾರೀ ಹೂಡಿಕೆ; ವಾಟ್ಸಪ್​ಗೆ ಕುನಾಲ್ ಶಾ ಹೊಸ ಬಾಸ್

ಒರಾಕಲ್ ಕಂಪನಿಯು ಸಾಂಪ್ರದಾಯಿಕ ಐಟಿ ಸೇವೆಗಳಿಂದ ಸಂಪೂರ್ಣವಾಗಿ ಎಐ ಮತ್ತು ಕ್ಲೌಡ್ ಮೂಲಸೌಕರ್ಯ ಒದಗಿಸುವ ಪ್ರಮುಖ ಜಾಗತಿಕ ಸಂಸ್ಥೆಯಾಗಿ ಬದಲಾಗಲು ಈ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದು ಕಂಪನಿಯ ಭವಿಷ್ಯದ ಆದಾಯವನ್ನು ಹೆಚ್ಚಿಸಬಹುದಾದರೂ, ಸದ್ಯಕ್ಕೆ ಉದ್ಯೋಗಿಗಳಿಗೆ ಇದು ದೊಡ್ಡ ಹೊಡೆತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್