ಹೋಟೆಲ್ ರೂಮ್ ಬುಕಿಂಗ್ ಪ್ಲಾಟ್ಫಾರ್ಮ್ ಆದ ಓಯೋ (OYO) ಬಗ್ಗೆ ನೀವು ಕೇಳಿರಬಹುದು. ಇದರ ಸಿಇಒ ರಿತೇಶ್ ಅಗರ್ವಾಲ್ (Ritesh Agarwal) ವಯಸ್ಸಿನ್ನೂ ಕೇವಲ 29 ವರ್ಷ. ಇಷ್ಟು ಸಣ್ಣ ವಯಸ್ಸಿನಲ್ಲಿ ಸಿಇಒ ಆಗಿದ್ದು ನಮಗೆ ನಿಮಗೆ ಕಣ್ಣು ಕುಕ್ಕಬಹುದು. ಇವನೆಂಥ ಭಾಗ್ಯಶಾಲಿ ಎಂದು ಭಾವಿಸಬಹುದು. ಆದರೆ, ಈ ಎತ್ತರಕ್ಕೆ ಹೋಗುವ ಹಾದಿಯಲ್ಲಿ ಈ ಯುವಕ ಪಟ್ಟಿರುವ ಕಷ್ಟ, ಎಡರುತೊಡರು ಸುಮ್ಮನೆ ಅಲ್ಲ. ಇವರು ಮಾತ್ರವಲ್ಲ ಯಾರೇ ಸಾಧಕರ ಜೀವನ ಹಾದಿಯಲ್ಲಿ ಹೂವಿನ ಹಾಸೇ ಇರುವುದಿಲ್ಲ. ಕಾಲೇಜು ಓದಿಗೆ ಅರ್ಧದಲ್ಲೇ ತಿಲಾಂಜಲಿ ಹೇಳಿ ಸ್ಟಾರ್ಟಪ್ ಹುಟ್ಟುಹಾಕಿದ ರಿತೇಶ್ ಅಗರ್ವಾಲ್ ತಮ್ಮ ವ್ಯವಹಾರದ ಆರಂಭಿಕ ದಿನಗಳಲ್ಲಿ ನಡೆದ ಕೆಲ ಘಟನೆಗಳನ್ನು ಮೆಲುಕುಹಾಕಿದ್ದಾರೆ. ಅಸಮಾಧಾನಿತ ಗ್ರಾಹಕನಿಂದ ಬೈಸಿಕೊಂಡಿದ್ದು, ಅದೇ ಗ್ರಾಹಕನಿಂದ ಶಹಬ್ಬಾಸ್ ಗಳಿಸಿ 20 ರೂ ಟಿಪ್ಸ್ ಪಡೆದುಕೊಂಡಿದ್ದು, ಆ ಘಟನೆಯನ್ನು ಓಯೋ ಸಿಇಒ ರಿತೇಶ್ ಅಗರ್ವಾಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆಗಳು ಒಂದು ರೀತಿ ಸಿನಿಮೀಯ ಎನಿಸುವಷ್ಟು ಆಸಕ್ತಿಕರವಾಗಿವೆ.
ಓಯೋ ಕಂಪನಿ ಶುರುವಾದ ಹೊಸದರಲ್ಲಿ ಹೋಟೆಲ್ನ ಸ್ವಚ್ಚತೆ ಇತ್ಯಾದಿ ಕಾರ್ಯದಲ್ಲಿ ರಿತೇಶ್ ಅಗರ್ವಾಲ್ ಕೂಡ ತೊಡಗಿಸಿಕೊಳ್ಳುತ್ತಿದ್ದರು. ಒಮ್ಮೆ ಒಂದು ರೂಮು ಸ್ವಚ್ಛಗೊಳಿಸಲು ಹೋದಾಗ, 10 ನಿಮಿಷ ತಡವಾಯಿತೆಂದು ಅಲ್ಲಿದ್ದ ಗ್ರಾಹಕ ಕುಪಿತಗೊಂಡು ಇವರಿಗೆ ಬಯ್ದಿದ್ದರಂತೆ. ತಾನು ಹೋಟೆಲ್ ಬುಕ್ ಮಾಡಿದ್ದ ಓಯೋ ಕಂಪನಿಯ ಸಿಇಒ ಇದೇ ರಿತೇಶ್ ಅಗರ್ವಾಲ್ ಎಂದು ಆ ಗ್ರಾಹಕನಿಗೆ ಗೊತ್ತಾಗಿರಲಿಲ್ಲ. ಪಕ್ಕದ ರೂಮಿನಲ್ಲಿ ಸಿಬ್ಬಂದಿ ಜೊತೆ ಸೇರಿ ರಿತೇಶ್ ಕೂಡ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರಿಂದ ಆತನೂ ಒಬ್ಬ ನೌಕರ ಇರಬಹುದು ಎಂದು ಭಾವಿಸಿ ಆವಾಜ್ ಹಾಕಿದ್ದರು ಆ ಗ್ರಾಹಕ.
ಇದನ್ನೂ ಓದಿ: Tour Package: ಐಆರ್ಸಿಟಿಸಿಯಿಂದ ಕಡಿಮೆ ಬೆಲೆಗೆ ಊಟಿ ಮುದುಮಲೈ ಪ್ರವಾಸ ಪ್ಯಾಕೇಜ್; ಲಾಡ್ಜ್, ಕಾರ್ ಉಚಿತ; ನೋಡಿ ಡೀಟೇಲ್ಸ್
ಅದರೆ, ಗ್ರಾಹಕ ಬೈದರೂ ರಿತೇಶ್ ಅಗರ್ವಾಲ್ ತಾನು ಸಿಇಒ ಎಂದು ತೋರಿಸಿಕೊಳ್ಳದೇ ಆ ರೂಮನ್ನು ಪೂರ್ಣವಾಗಿ ಸ್ವಚ್ಛಗೊಳಿಸಿದರಂತೆ. ಇವರ ಕೆಲಸ ಮೆಚ್ಚಿದ ಆ ಗ್ರಾಹಕ ಕೊನೆಗೆ ಸಂತುಷ್ಟಿಕೊಂಡು 20 ರೂ ಹಣವನ್ನು ಟಿಪ್ ಆಗಿ ನೀಡಿದರಂತೆ. ಆ ಘಟನೆಯನ್ನು ಸ್ಮರಿಸಿ ವಿಡಿಯೋವೊಂದನ್ನು ರಿತೇಶ್ ಟ್ವೀಟ್ ಮಾಡಿದ್ದಾರೆ.
ಓಯೋ ಸಿಇಒ ರಿತೇಶ್ ಅಗರ್ವಾಲ್ ತಮ್ಮ ವಿಡಿಯೋದಲ್ಲಿ ಮಾತನಾಡುತ್ತಾ, ಆತಿಥ್ಯ ಉದ್ಯಮದಲ್ಲಿ ಹೌಸ್ಕೀಪರ್ಗಳು ಮತ್ತಿತರರ ಕೆಲಸ ಬಹಳ ಮುಖ್ಯ ಎಂದು ಹೇಳುತ್ತಾರೆ.
ಇದನ್ನೂ ಓದಿ: Bengaluru Egg Story: ಬಿಸಿಲಿಗೆ ಕೋಳಿಗಳ ವರ್ತನೆ, ಉತ್ಪಾದನೆ ಬದಲಾಗುತ್ತಾ? ಒಂದು ಮೊಟ್ಟೆ ದುಬಾರಿಯಾದ ಕಥೆ ಕೇಳಿ
ಈ ಉದ್ಯಮದಲ್ಲಿ ನಿಜವಾದ ಸ್ಟಾರ್ಗಳೆಂದರೆ ಫ್ರಂಟ್ ಆಫೀಸ್ ಮ್ಯಾನೇಜರ್ಗಳು, ಸ್ವಚ್ಛತಾ ಸಿಬ್ಬಂದಿ, ರಿಸಿಪ್ಷನಿಸ್ಟರು, ಬ್ಯಾಕ್ ಸ್ಟೇಜ್ನಲ್ಲಿ ಕೆಲಸ ಮಾಡುವವರು. ಇವರೆಲ್ಲರೂ ಗ್ರಾಹಕರಿಗೆ ಒಳ್ಳೆಯ ಅನುಭವ ತರುವಂತಹ ವ್ಯವಸ್ಥೆ ಮಾಡುತ್ತಾರೆ ಎಂದು 29 ವರ್ಷದ ರೀತೇಶ್ ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
The real stars of the hospitality industry are the front office managers, cleaning crew, receptionists and behind-the-scenes staff who ensure guests have the best possible experience during their stay.
Early on I got to experience this first-hand when a customer tipped me Rs… pic.twitter.com/M1Gre6NTUh
— Ritesh Agarwal (@riteshagar) May 28, 2023
ಒಡಿಶಾ ಮೂಲದ ರಿತೇಶ್ ಅಗರ್ವಾಲ್ ಸ್ವಂತವಾಗಿ ಬಿಲಿಯನೇರ್ ಆದ ವಿಶ್ವದ ಅತಿ ಚಿಕ್ಕ ವಯಸ್ಸಿನ ವ್ಯಕ್ತಿ ಎಂಬ ದಾಖಲೆ ಬರೆದಿ್ದಾರೆ. ಜಾಗತಿಕ ಆತಿಥ್ಯೋದ್ಯಮದಲ್ಲಿ ರಿತೇಶ್ ಹೆಸರೂ ಪ್ರಧಾನವಾಗಿ ಕೇಳಿಬರುತ್ತದೆ. ಇವರ ಕಂಪನಿಯು ಫ್ರಾಂಚೈಸಿ ರೀತಿಯಲ್ಲಿ ಹೋಟೆಲ್ಗಳನ್ನು ನಿಭಾಯಿಸುತ್ತದೆ.
Published On - 6:32 pm, Mon, 29 May 23