
ನವದೆಹಲಿ, ಮೇ 28: ಪ್ಯಾನ್ ಕಾರ್ಡ್ಗೆ ಆಧಾರ್ ಅನ್ನು ಲಿಂಕ್ (PAN Aadhaar link) ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದೆ. ಮೇ 31ಕ್ಕೆ ಡೆಡ್ಲೈನ್ ಇದೆ. ಅಷ್ಟರೊಳಗೆ ಲಿಂಕ್ ಮಾಡದೇ ಹೋದರೆ ಹೆಚ್ಚಿನ ಟಿಡಿಎಸ್ ಕಟ್ಟಬೇಕಾದೀತು. ಐಟಿ ಇಲಾಖೆ (Income tax department) ಇಂದು ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದು, ಈ ಸಂಬಂಧ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮೇ 31ರೊಳಗೆ ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಜೋಡಿಸಿದರೆ ಐಟಿ ಸೆಕ್ಷನ್ 206ಎಎ ಮತ್ತು 206ಸಿಸಿ ಅಡಿಯಲ್ಲಿ ಹೆಚ್ಚಿನ ಟ್ಯಾಕ್ಸ್ ಪಾವತಿಯನ್ನು ತಪ್ಪಿಸಬಹುದು.
ಆಧಾರ್ಗೆ ಲಿಂಕ್ ಆಗದ ಪ್ಯಾನ್ ನಂಬರ್ ನಿಷ್ಕ್ರಿಯವಾಗಿರುತ್ತದೆ. ಅಂದರೆ ಇದನ್ನು ಬಳಸಲು ಆಗುವುದಿಲ್ಲ. ಆಧಾರ್ಗೆ ಲಿಂಕ್ ಮಾಡಿದಲ್ಲಿ ಮಾತ್ರವೇ ಪ್ಯಾನ್ ಬಳಕೆಯೋಗ್ಯ ಎನಿಸುತ್ತದೆ. ಈಗ ಆಧಾರ್ಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತವಾಗಿ ಮಾಡಲು ಇದ್ದ ಡೆಡ್ಲೈನ್ ಬಹಳ ದಿನಗಳ ಹಿಂದೆಯೇ ಮುಗಿದುಹೋಗಿದೆ. ಈಗ ಶುಲ್ಕ ಪಾವತಿಸಿ ಆಧಾರ್ಗೆ ಲಿಂಕ್ ಮಾಡುವ ಮೂಲಕ ಪ್ಯಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದು.
ಇದನ್ನೂ ಓದಿ: Bank Holidays June 2024: ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ?
2017ರ ಜುಲೈ 1ರ ಬಳಿಕ ವಿತರಿಸಲಾದ ಎಲ್ಲಾ ಪ್ಯಾನ್ ನಂಬರ್ಗೆ ಆಟೊಮ್ಯಾಟಿಕ್ ಆಗಿ ಆಧಾರ್ ಜೋಡಣೆ ಆಗಿರುತ್ತದೆ. ಆಧಾರ್ ದಾಖಲೆ ಹೊಂದಿದ್ದರೆ ಮಾತ್ರವೇ ಪ್ಯಾನ್ ನಂಬರ್ ಅಲಾಟ್ ಮಾಡಲಾಗುತ್ತದೆ. ಆದರೆ, 2017ರ ಜುಲೈ ಒಂದಕ್ಕಿಂತ ಮುಂಚೆ ಪ್ಯಾನ್ ಕಾರ್ಡ್ ಮಾಡಿಸುವಾಗ ಆಧಾರ್ ದಾಖಲೆ ಕಡ್ಡಾಯ ಇರಲಿಲ್ಲ. ಬೇರೆ ಬೇರೆ ದಾಖಲೆಗಳನ್ನು ನೀಡಿ ಪ್ಯಾನ್ ಕಾರ್ಡ್ ಮಾಡಿಸಿದವರು ಹಲವರಿದ್ದರು.
ಆ ದಿನಕ್ಕೆ ಮುಂಚೆ ಪ್ಯಾನ್ ಕಾರ್ಡ್ ಮಾಡಿಸಿದವರು ಆಧಾರ್ಗೆ ಲಿಂಕ್ ಮಾಡುವುದು ಅವಶ್ಯಕವಾಗಿದೆ.
ಆಧಾರ್ಗೆ ಲಿಂಕ್ ಆಗದ ಪ್ಯಾನ್ ನಿಷ್ಕ್ರಿಯಗೊಂಡಿರುತ್ತದೆ. ಕಾರ್ಡ್ ಇದ್ದೂ ಇಲ್ಲದಂತಾಗುತ್ತದೆ. ಆದಾಯ ತೆರಿಗೆ ಸೆಕ್ಷನ್ 206 ಪ್ರಕಾರ ಪ್ಯಾನ್ ಕಾರ್ಡ್ ಇಲ್ಲದ ವಹಿವಾಟಿಗೆ ಶೇ. 20ರಷ್ಟು ಟಿಡಿಎಸ್ ತೆರಿಗೆ ಕಡಿತ ಆಗುತ್ತದೆ.
ಇದನ್ನೂ ಓದಿ: ಎನ್ಪಿಎಸ್, ಹೆಲ್ತ್ ಇನ್ಷೂರೆನ್ಸ್ ಹಾಗು 80ಸಿ ಸೆಕ್ಷನ್ ಅಡಿಯಲ್ಲಿನ ಹೂಡಿಕೆಗಳು; ಗರಿಷ್ಠ ತೆರಿಗೆ ಉಳಿಸುವ ಆಯ್ಕೆಗಳು
ನೀವು ಒಂದು ಲಕ್ಷ ರೂ ಆದಾಯ ಪಡೆದರೆ ಅದಕ್ಕೆ 20,000 ರೂ ತೆರಿಗೆಯನ್ನೇ ಪಾವಿತಸಬೇಕಾಗುತ್ತದೆ. ಹೀಗಾಗಿ, ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡದೇ ಇದ್ದರೆ ಕೂಡಲೇ ಆ ಕೆಲಸ ಮಾಡಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Tue, 28 May 24