Bank Holidays June 2024: ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ?

Karnataka has 8 days bank holidays in June: 2024ರ ಜೂನ್ ತಿಂಗಳಲ್ಲಿ ಒಟ್ಟು 13 ಬ್ಯಾಂಕ್ ರಜಾ ದಿನಗಳಿವೆ. ಇದರಲ್ಲಿ ಏಳು ಶನಿವಾರ ಮತ್ತು ಭಾನುವಾರದ ರಜೆಯೇ ಇರುತ್ತದೆ. ಜೂನ್ ತಿಂಗಳಲ್ಲಿ ಐದು ಭಾನುವಾರಗಳು ಬಂದಿವೆ. ಪ್ರಮುಖ ಹಬ್ಬವಾಗಿ ಬಕ್ರೀದ್ ಇದೆ. ಬಕ್ರೀದ್​ಗೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ದಿನಗಳಿಗೆ ರಜೆ ಇದೆ. ಒಡಿಶಾದಲ್ಲಿ ಸತತ ನಾಲ್ಕು ದಿನ ರಜೆ ಇದೆ. ಪಂಜಾಬ್​ನಲ್ಲಿ ಸತತ ಮೂರು ದಿನ ರಜೆ ಇದೆ. ಕರ್ನಾಟಕದಲ್ಲಿ ಶನಿವಾರ, ಭಾನುವಾರದ ರಜೆ ಬಿಟ್ಟರೆ ಬೇರೆ ದಿನ ಬಕ್ರೀದ್​ಗೆ ಮಾತ್ರವೇ ರಜೆ ಇರುವುದು.

Bank Holidays June 2024: ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲಿ ಯಾವತ್ತಿದೆ ರಜೆ?
ಬ್ಯಾಂಕುಗಳಿಗೆ ರಜೆ
Follow us
|

Updated on: May 28, 2024 | 11:41 AM

ನವದೆಹಲಿ, ಮೇ 28: ಜೂನ್ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನಗಳವರೆಗೆ ರಜೆ (bank holidays) ಇವೆ. ಬೇರೆ ಬೇರೆ ರಾಜ್ಯಗಳಲ್ಲಿ ರಜಾ ದಿನಗಳು ವ್ಯತ್ಯಾಸ ಆಗಬಹುದು. ಈ 13 ದಿನದಲ್ಲಿ ಬರೋಬ್ಬರಿ ಏಳು ದಿನಗಳು ಶನಿವಾರ ಮತ್ತು ಭಾನುವಾರದ ರಜೆಗಳೇ ಆಗಿವೆ. ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಎಂಟು ದಿನ ಬ್ಯಾಂಕುಗಳು ಬಂದ್ ಆಗಿರುತ್ತವೆ. ಒಡಿಶಾ ರಾಜ್ಯದಲ್ಲಿ ಜೂನ್ 14ರಿಂದ 17ರವರೆಗೆ ಸತತ ನಾಲ್ಕು ದಿನ ಬ್ಯಾಂಕ್ ರಜೆ ಇರುವುದು ವಿಶೇಷ. ಪಂಜಾಬ್​ನಲ್ಲಿ ಜೂನ್ 8ರಿಂದ 10ರವರೆಗೆ ಮೂರು ದಿನಗಳು ರಜೆ ಇರುತ್ತವೆ. ಕರ್ನಾಟದಲ್ಲಿ ಜೂನ್ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರ ರಜೆ ಬಿಟ್ಟರೆ ಜೂನ್ 17ಕ್ಕೆ ಬಕ್ರೀದ್ ಹಬ್ಬಕ್ಕೆ ಬ್ಯಾಂಕ್ ರಜೆ ಇರುತ್ತದೆ.

2024ರ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು

  • ಜೂನ್ 2: ಭಾನುವಾರ
  • ಜೂನ್ 8: ಎರಡನೆ ಶನಿವಾರ
  • ಜೂನ್ 9: ಭಾನುವಾರ
  • ಜೂನ್ 10, ಸೋಮವಾರ: ಗುರು ಅರ್ಜುನ್ ದೇವ್ ಬಲಿದಾನ ದಿನ (ಪಂಜಾಬ್​ನಲ್ಲಿ ರಜೆ)
  • ಜೂನ್ 14, ಶುಕ್ರವಾರ: ಪಹಿಲಿ ರಾಜ ದಿನ (ಒಡಿಶಾದಲ್ಲಿ ರಜೆ)
  • ಜೂನ್ 15, ಶನಿವಾರ: ವೈಎಂಎ ದಿನ ಮತ್ತು ರಾಜ ಸಂಕ್ರಾಂತಿ ಹಬ್ಬ (ಮಿಜೋರಾಂ, ಒಡಿಶಾದಲ್ಲಿ ರಜೆ)
  • ಜೂನ್ 16: ಭಾನುವಾರ
  • ಜೂನ್ 17, ಸೋಮವಾರ: ಬಕ್ರೀದ್ ಹಬ್ಬ (ಮಿಜೋರಾಂ, ಸಿಕ್ಕಿಂ, ಅರುಣಾಚಲ ಬಿಟ್ಟು ಉಳಿದೆಡೆ ರಜೆ)
  • ಜೂನ್ 18, ಮಂಗಳವಾರ: ಬಕ್ರೀದ್ ಹಬ್ಬ (ಜಮ್ಮು ಕಾಶ್ಮೀರದಲ್ಲಿ ರಜೆ)
  • ಜೂನ್ 21: ವಟ ಸಾವಿತ್ರ ವ್ರತ (ಹಲವು ರಾಜ್ಯಗಳಲ್ಲಿ ರಜೆ)
  • ಜೂನ್ 22: ನಾಲ್ಕನೇ ಶನಿವಾರ
  • ಜೂನ್ 23: ಭಾನುವಾರ
  • ಜೂನ್ 30: ಭಾನುವಾರ

ಇದನ್ನೂ ಓದಿ: ಅಂಬಾನಿ ಅಡ್ಡೆಗೆ ಇಳಿಯುತ್ತಾರಾ ಅಡಾನಿ?; ಯುಪಿಐ, ಕ್ರೆಡಿಟ್ ಕಾರ್ಡ್, ಇಕಾಮರ್ಸ್ ಬಿಸಿನೆಸ್​ಗೆ ಇಳಿಯಲು ಸಜ್ಜು

ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜಾ ದಿನಗಳಿವು…

  • ಜೂನ್ 2: ಭಾನುವಾರ
  • ಜೂನ್ 8: ಎರಡನೆ ಶನಿವಾರ
  • ಜೂನ್ 9: ಭಾನುವಾರ
  • ಜೂನ್ 16: ಭಾನುವಾರ
  • ಜೂನ್ 17, ಸೋಮವಾರ: ಬಕ್ರೀದ್ ಹಬ್ಬ
  • ಜೂನ್ 22: ನಾಲ್ಕನೇ ಶನಿವಾರ
  • ಜೂನ್ 23: ಭಾನುವಾರ
  • ಜೂನ್ 30: ಭಾನುವಾರ

ಬ್ಯಾಂಕುಗಳಿಗೆ ರಜೆ ಇದ್ದರೂ ನೆಟ್ ಬ್ಯಾಂಕಿಂಗ್, ಬ್ಯಾಂಕ್ ಆ್ಯಪ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ ಇತ್ಯಾದಿ ಮೂಲಕ ಹಣದ ವಹಿವಾಟು ನಡೆಸಲು ಅವಕಾಶ ಇರುತ್ತದೆ. ಚೆಕ್ ಟ್ರಾಕ್ಸಾಕ್ಷನ್, ಆರ್​ಟಿಜಿಎಸ್ ಇತ್ಯಾದಿ ಸೇವೆ ಲಭಿಸದೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು