ಎನ್ಪಿಎಸ್, ಹೆಲ್ತ್ ಇನ್ಷೂರೆನ್ಸ್ ಹಾಗು 80ಸಿ ಸೆಕ್ಷನ್ ಅಡಿಯಲ್ಲಿನ ಹೂಡಿಕೆಗಳು; ಗರಿಷ್ಠ ತೆರಿಗೆ ಉಳಿಸುವ ಆಯ್ಕೆಗಳು
Tax saving options: ಹೆಚ್ಚಿನ ಆದಾಯ ಗುಂಪಿನಲ್ಲಿರುವ ವ್ಯಕ್ತಿಗಳಿಗೆ ತೆರಿಗೆ ಉಳಿಸುವುದೇ ದೊಡ್ಡ ತಲೆನೋವು. ಕೆಲವೊಂದು ಹೂಡಿಕೆ ಮತ್ತು ಯೋಜನೆಗಳಿಗೆ ಸರ್ಕಾರ ಟ್ಯಾಕ್ಸ್ ಎಕ್ಸೆಂಪ್ಷನ್ ಕಲ್ಪಿಸುತ್ತದೆ. ನಿಮಗೆ ಸೂಕ್ತವೆನಿಸುವ ಯೋಜನೆಗಳನ್ನು ಆಯ್ದುಕೊಂಡು ಹೂಡಿಕೆ ಮಾಡಿರಿ. 2.25 ಲಕ್ಷ ರೂವರೆಗಿನ ಹೂಡಿಕೆಗೆ ನೀವು ತೆರಿಗೆ ವಿನಾಯಿತಿ ಪಡೆಯಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ಒಂದೂವರೆ ಲಕ್ಷ ರೂಗೆ ಎಕ್ಸೆಂಪ್ಷನ್ ಪಡೆಯಬಹುದು. ಹೆಲ್ತ್ ಇನ್ಷೂರೆನ್ಸ್, ಎನ್ಪಿಎಸ್ ಮೂಲಕ ಹೆಚ್ಚುವರಿ ತೆರಿಗೆ ಉಳಿತಾಯ ಮಾಡಬಹುದು.
ನೀವು ಹಳೆಯ ಇನ್ಕಮ್ ಟ್ಯಾಕ್ಸ್ ರೆಜಿಮೆಯಲ್ಲೇ (old tax regime) ಇದ್ದಲ್ಲಿ ಆದಾಯ ತೆರಿಗೆ ಉಳಿಸುವ ಅವಕಾಶಗಳು ಇರುತ್ತವೆ. ಐಟಿ ಸೆಕ್ಷನ್ 80 ಸಿ, ಡಿ, ಇತ್ಯಾದಿ ಸರಣಿಗಳ ಅಡಿಯಲ್ಲಿ ಹೂಡಿಕೆ ಮಾಡಿದರೆ ಆ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ, ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿ (income tax exemption limit) ವರ್ಷಕ್ಕೆ 1.5 ಲಕ್ಷ ರೂ ಇರುತ್ತದೆ. ಸೆಕ್ಷನ್ 80ಡಿ ಅಡಿಯಲ್ಲಿ ಮಿತಿ 25,000 ರೂ ಇರುತ್ತದೆ. ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ಎನ್ಪಿಎಸ್ಗೆ ಮಾಡಿದ ಹೂಡಿಕೆಗೆ ವರ್ಷಕ್ಕೆ 50,000 ರೂವರೆಗೂ ತೆರಿಗೆ ವಿನಾಯಿತಿ ಪಡೆಯಬಹುದು. ಅಲ್ಲಿಗೆ ಹಳೆಯ ತೆರಿಗೆ ರೆಜಿಮೆಯಲ್ಲಿ ಒಟ್ಟಾರೆ 2.25 ಲಕ್ಷ ರೂವರೆಗಿನ ಹಣಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದು.
ಸೆಕ್ಷನ್ 80ಸಿ ಅಡಿಯಲ್ಲಿ ಯಾವ್ಯಾವ ಹೂಡಿಕೆ ಮಾಡಬಹುದು?
- ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ನಲ್ಲಿನ ಹೂಡಿಕೆಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.
- ಗೃಹ ಸಾಲಕ್ಕೆ ಪಾವತಿಸಲಾಗುವ ಬಡ್ಡಿಹಣಕ್ಕೂ ಇದೇ ಸೆಕ್ಷನ್ ಅಡಿಯಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಇದೆ.
- ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ನಲ್ಲಿ ಮಾಡುವ ಹೂಡಿಕೆಗೂ ತೆರಿಗೆ ವಿನಾಯಿತಿ ಇದೆ.
- ಜೀವ ವಿಮೆ, ಸ್ಮಾಲ್ ಸೇವಿಂಗ್ಸ್ ಸ್ಕೀಮ್ಸ್, ಪೋಸ್ಟ್ ಆಫೀಸ್ ಎಫ್ಡಿ ಇತ್ಯಾದಿ ಯೋಜನೆಗಳಲ್ಲಿ ಹಣ ತೊಡಗಿಸಬಹುದು.
ನಿಮಗೆ ಅನುಕೂಲಕರವಾದ ಒಂದು ಅಥವಾ ಹೆಚ್ಚಿನ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ಆದರೆ, ಒಟ್ಟಾರೆ 1.5 ಲಕ್ಷ ರೂಗೆ ಮಾತ್ರವೇ ತೆರಿಗೆ ವಿನಾಯಿತಿ ಇರುತ್ತದೆ.
ಮೆಡಿಕಲ್ ಇನ್ಷೂರೆನ್ಸ್ ಮಾಡಿಸಿ ವರ್ಷಕ್ಕೆ 25,000 ರೂವರೆಗಿನ ಹಣಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಿರಿ
ಸೆಕ್ಷನ್ 80ಸಿ ಅಡಿಯಲ್ಲಿ ಇರುವ 1.5 ಲಕ್ಷ ರೂ ಟ್ಯಾಕ್ಸ್ ಎಕ್ಸೆಂಪ್ಷನ್ ಅವಕಾಶದ ಜೊತೆಗೆ ಹೆಚ್ಚುವರಿಯಾಗಿ 25,000 ರೂಗೆ ವಿನಾಯಿತಿ ಪಡೆಯಬಹುದು. ಹೆಲ್ತ್ ಇನ್ಷೂರೆನ್ಸ್ ಖರೀದಿಸುವುದರಿಂದ ಅದು ಸಾಧ್ಯ.
ಇದನ್ನೂ ಓದಿ: ಮಕ್ಕಳ ಉನ್ನತ ಶಿಕ್ಷಣಕ್ಕೆ 15 ವರ್ಷದಲ್ಲಿ ಮೂರು ಕೋಟಿ ರೂ ಗಳಿಸುವುದು ಹೇಗೆ?
ಎನ್ಪಿಎಸ್ನಲ್ಲಿ ಹೂಡಿಕೆ ಮಾಡಿ
ನ್ಯಾಷನಲ್ ಪೆನ್ಷನ್ ಸಿಸ್ಟಂ ಯೋಜನೆಯಲ್ಲಿ ಹಣ ತೊಡಗಿಸಿದರೆ ವರ್ಷಕ್ಕೆ 50,000 ರೂವರೆಗಿನ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.
ಈ ರೀತಿಯಲ್ಲಿ 2.25 ಲಕ್ಷ ರುಪಾಯಿಗೆ ನೀವು ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಹಳೆಯ ಟ್ಯಾಕ್ಸ್ ಸಿಸ್ಟಂನಲ್ಲಿ ನಿಮ್ಮ ಆದಾಯದಲ್ಲಿ ಎರಡೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಹೇರಿಕೆ ಇರುವುದಿಲ್ಲ. ಈಗ ವಿವಿಧ ಹೂಡಿಕೆಗಳ ಮೂಲಕ ಹತ್ತಿರ ಹತ್ತಿರ ಐದು ಲಕ್ಷ ರೂವರೆಗೆ ನೀವು ತೆರಿಗೆಯನ್ನು ದೂರವಿಡಬಹುದು. ಅದಕ್ಕಿಂತ ಮೇಲಿನ ಆದಾಯಕ್ಕೆ ತೆರಿಗೆ ಕಟ್ಟಬೇಕಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ