Patanjali: ಹಬ್ಬದ ಋತುವಿನಲ್ಲಿ ಶ್ರೀಮಂತವಾದ ಪತಂಜಲಿ; 20 ದಿನಗಳಲ್ಲಿ 1,262 ಕೋಟಿ ರೂ. ಗಳಿಕೆ

Patanjali Foods share price: ಅಕ್ಟೋಬರ್ ಮೊದಲ ದಿನವೇ ಹಬ್ಬದ ಸೀಸನ್ ಪ್ರಾರಂಭವಾಗಿದ್ದು ಪತಂಜಲಿ ಫುಡ್ಸ್ ಕಂಪನಿಯ ಷೇರುಗಳು ಏರಿಕೆಯಾಗಲು ಪ್ರಾರಂಭಿಸಿವೆ. ಸೆಪ್ಟೆಂಬರ್ 30ರಂದು ಇದರ ಷೇರುಬೆಲೆ 577 ರೂ ಇತ್ತು. ಇವತ್ತು ಅಕ್ಟೋಬರ್ 20ರಂದು 590 ರೂಗೆ ಏರಿದೆ. ಹಬ್ಬದ ಸೀಸನ್​ನ ಮೊದಲ 20 ದಿನದಲ್ಲಿ ಪತಂಜಲಿ ಫುಡ್ಸ್ ಷೇರುಬೆಲೆ 13 ರೂಗಳಷ್ಟು ಏರಿದೆ.

Patanjali: ಹಬ್ಬದ ಋತುವಿನಲ್ಲಿ ಶ್ರೀಮಂತವಾದ ಪತಂಜಲಿ; 20 ದಿನಗಳಲ್ಲಿ 1,262 ಕೋಟಿ ರೂ. ಗಳಿಕೆ
ಪತಂಜಲಿ

Updated on: Oct 20, 2025 | 6:23 PM

ನವದೆಹಲಿ, ಅಕ್ಟೋಬರ್ 20: ಪತಂಜಲಿ ಸಂಸ್ಥೆ (Patanjali Foods) ಈ ಹಬ್ಬದ ಋತುವಿನಲ್ಲಿ ಗಮನಾರ್ಹವಾಗಿ ಲಾಭ ಗಳಿಸಿದೆ. ಇದರ ಷೇರುಬೆಲೆ 2% ಹೆಚ್ಚಳ ಕಂಡಿದೆ. ಪತಂಜಲಿ ಫುಡ್ಸ್​ನ ವ್ಯಾಲ್ಯುಯೇಶನ್ ಅಥವಾ ಮಾರುಕಟ್ಟೆ ಸಂಪತ್ತಿನಲ್ಲಿ (Market capitalization) ₹1,262 ಕೋಟಿ ಹೆಚ್ಚಳ ಆಗಿದೆ. ಮುಂಬರುವ ದಿನಗಳಲ್ಲಿ ಪತಂಜಲಿಯ ಷೇರುಗಳು ಮತ್ತಷ್ಟು ಏರಿಕೆಯಾಗಬಹುದು ಎಂಬುದು ಪರಿಣಿತರ ಅಂದಾಜು. GST ದರ ಇಳಿಕೆ ಆದ ಬಳಿಕ ಮತ್ತು ಹಬ್ಬದ ಋತು ಆರಂಭದ ನಂತರ, ಕಂಪನಿಯ ಸೇಲ್ಸ್ ಹೆಚ್ಚಾಗಿದೆ. ಅಂತೆಯೇ, ಷೇರುಗಳಿಗೂ ಬೇಡಿಕೆ ಹೆಚ್ಚುತ್ತಿದೆ.

ಹಬ್ಬದ ಸೀಸನ್ ಶುರು

ಅಕ್ಟೋಬರ್ ಮೊದಲ ದಿನದಿಂದಲೇ ಹಬ್ಬದ ಸೀಸನ್ ಆರಂಭವಾಗಿದೆ. ಪತಂಜಲಿ ಫುಡ್ಸ್ ಕಂಪನಿಯ ಷೇರುಬೆಲೆ ಏರಿಕೆಯಾಗಲು ಪ್ರಾರಂಭವಾಗಿದೆ. ಬಿಎಸ್‌ಇ ದತ್ತಾಂಶದ ಪ್ರಕಾರ, ಸೆಪ್ಟೆಂಬರ್ 30 ರಂದು ಕಂಪನಿಯ ಷೇರು ಬೆಲೆ ₹577.30 ಆಗಿತ್ತು. ಇವತ್ತು ಅಕ್ಟೋಬರ್ 20 ರಂದು ಅದರ ಬೆಲೆ ₹590 ಕ್ಕೆ ಏರಿದೆ. ಅಂದರೆ, ಹಬ್ಬದ ಸೀಸನ್​ನ ಈ 2-3 ವಾರದಲ್ಲಿ ಪತಂಜಲಿ ಫೂಡ್ಸ್ ಷೇರುಬೆಲೆಯಲ್ಲಿ ಶೇ. 13ಕ್ಕಿಂತಲೂ ಹೆಚ್ಚಾಗಿದೆ. ಅಂದರೆ, ಸುಮಾರು ಶೇ. 2ರಷ್ಟು ಬೆಲೆ 2 ವಾರದಲ್ಲೇ ಆಗಿದೆ.

ಇಂದು ಸೋಮವಾರ ಭಾರತದ ಷೇರು ಮಾರುಕಟ್ಟೆ ಬಹುತೇಕ ಅವಧಿ ಹಿನ್ನಡೆಯಲ್ಲಿದ್ದರೂ ಕೊನೆಯಲ್ಲಿ ತುಸು ಏರಿಕೆ ಪಡೆಯಿತು. ಪತಂಜಲಿ ಫೂಡ್ಸ್ ಕೂಡ ಬಹುತೇಕ ಇದೇ ಟ್ರೆಂಡ್​ನಲ್ಲಿ ಸಾಗಿತು. ಮಧ್ಯಾಹ್ನ 3 ಗಂಟೆಯಲ್ಲಿ ಇದರ ಷೇರುಬೆಲೆ ಗರಿಷ್ಠ ಮಟ್ಟ ಮುಟ್ಟಿತು. ಕೊನೆಯ 30 ನಿಮಿಷದಲ್ಲಿ ಒಂದಷ್ಟು ಸಂಚಲನವಾಗಿ ಕೆಲ ಪ್ರಮಾಣದಷ್ಟು ಮೌಲ್ಯ ತಗ್ಗಿತು. ಇಡೀ ದಿನದಲ್ಲಿ 5 ರೂಗಳಷ್ಟು ಏರಿಕೆ ಆಗಬೇಕಿದ್ದ ಪತಂಜಲಿ ಷೇರುಬೆಲೆ ಕೊನೆಯಲ್ಲಿ 2.15 ರೂ ಹೆಚ್ಚಳಕ್ಕೆ ತೃಪ್ತಿಪಟ್ಟುಕೊಂಡಿತು.

ಇದನ್ನೂ ಓದಿ: ಮಾನಸಿಕ ಆರೋಗ್ಯಕ್ಕೆ ಮಹಿಳೆಯರು ಮಾಡಬಹುದಾದ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ ಇದು

ಪತಂಜಲಿ ಫುಡ್ಸ್ ಲಾಭದಲ್ಲಿ ಹೆಚ್ಚಳ

ಅಕ್ಟೋಬರ್‌ನಲ್ಲಿ ಹಬ್ಬದ ಋತು ಆರಂಭವಾಗಿ ಇಪ್ಪತ್ತು ದಿನಗಳು ಕಳೆದಿವೆ. ಈ ದಿನಗಳಲ್ಲಿ ಕಂಪನಿಯ ಮಾರುಕಟ್ಟೆ ಸಿರಿತನ ಏರಿಕೆ ಕಂಡಿದೆ. ಸೆಪ್ಟೆಂಬರ್ 30 ರಂದು ಕಂಪನಿಯ ಮಾರ್ಕೆಟ್ ಕ್ಯಾಪಿಟಲ್ ₹62,800.33 ಕೋಟಿಗಳಷ್ಟಿತ್ತು. ಸೋಮವಾರದ ಮುಕ್ತಾಯದ ವೇಳೆಗೆ, ಅದರ ಮಾರುಕಟ್ಟೆ ಬಂಡವಾಳೀಕರಣವು ₹64,180 ಕೋಟಿಗಳನ್ನು ತಲುಪಿತ್ತು. ಅಂದರೆ, ಅದರ ಮಾರುಕಟ್ಟೆ ಬಂಡವಾಳ ಈ 20 ದಿನದಲ್ಲಿ ₹1,261.88 ಕೋಟಿಗಳಷ್ಟು ಹೆಚ್ಚಾಗಿದೆ. ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಕಂಪನಿಯ ಷೇರುಗಳು ಮತ್ತಷ್ಟು ಲಾಭವನ್ನು ಪಡೆಯಬಹುದು ಮತ್ತು ಅದರ ಒಟ್ಟಾರೆ ಮಾರ್ಕೆಟ್ ಕ್ಯಾಪಿಟಲ್ ₹70,000 ಕೋಟಿಗಳನ್ನು ಮೀರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ