AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PayNow-UPI: ಸಿಂಗಾಪುರದ ಪೇನೌ ಜೊತೆ ಯುಪಿಐ ಲಿಂಕ್; ಭಾರತೀಯರಿಗೆ ಹಣ ವರ್ಗಾವಣೆ ಇನ್ನಷ್ಟು ಸರಾಗ

Indians Can Receive Remittance From Singapore: ಪೇನೌ ಮತ್ತು ಯುಪಿಐ ಲಿಂಕ್ ಮಾಡಿರುವುದರಿಂದ ಸಿಂಗಾಪುರದಿಂದ ಭಾರತೀಯ ಸಮುದಾಯದವರು ತಮ್ಮ ಊರಿಗೆ ರೆಮಿಟನ್ಸ್ ಮಾಡುವ ಪ್ರಕ್ರಿಯೆ ಸುಲಭಗೊಂಡಿದೆ. ಕಳೆದ ವರ್ಷದ ಯುಪಿಐ ಮತ್ತು ಪೇ ನೌ ನಡುವೆ ಕ್ರಾಸ್ ಬಾರ್ಡರ್ ಕನೆಕ್ಟಿವಿಟಿ ಯೋಜನೆಯನ್ನು ಸಿಂಗಾಪುರ ಪ್ರಧಾನಿ ಲೀ ಸಿಯೆನ್ ಲೂಂಗ್ ಮತ್ತು ನರೇಂದ್ರ ಮೋದಿ ಆರಂಭಿಸಿದ್ದರು. ಸದ್ಯಕ್ಕೆ ಭೀಮ್ (BHIM), ಪೇಟಿಎಂ ಮತ್ತು ಫೋನ್​ಪೇ ಪ್ಲಾಟ್​ಫಾರ್ಮ್​ಗಳಲ್ಲಿ ಈ ಸೌಲಭ್ಯ ಇದೆ. ಕೆಲ ಬ್ಯಾಂಕುಗಳ ಆಪ್ಯ್​ಗಳಲ್ಲೂ ಈ ಫೆಸಿಲಿಟಿ ಇದೆ.

PayNow-UPI: ಸಿಂಗಾಪುರದ ಪೇನೌ ಜೊತೆ ಯುಪಿಐ ಲಿಂಕ್; ಭಾರತೀಯರಿಗೆ ಹಣ ವರ್ಗಾವಣೆ ಇನ್ನಷ್ಟು ಸರಾಗ
ಯುಪಿಐ-ಪೇನೌ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 11, 2024 | 3:43 PM

Share

ನವದೆಹಲಿ, ಜನವರಿ 11: ಸಿಂಗಾಪುರದಿಂದ ಭಾರತೀಯ ಸಮುದಾಯದವರು ತಮ್ಮ ಊರಿನ ಮಂದಿಗೆ ಹಣ ಕಳುಹಿಸುವ ಕಾರ್ಯ ಈಗ ಸುಗಮಗೊಂಡಿದೆ. ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ (PayNow) ಪ್ಲಾಟ್​ಫಾರ್ಮ್ ಅನ್ನು ಲಿಂಕ್ ಮಾಡಿದ್ದು, ಸಿಂಗಾಪುರದಿಂದ ಭಾರತೀಯರು ಹಣ ಸ್ವೀಕರಿಸಬಹುದಾಗಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ (2023) ಯುಪಿಐ ಮತ್ತು ಪೇ ನೌ ನಡುವೆ ಕ್ರಾಸ್ ಬಾರ್ಡರ್ ಕನೆಕ್ಟಿವಿಟಿ ಯೋಜನೆಯನ್ನು ಸಿಂಗಾಪುರ ಪ್ರಧಾನಿ ಲೀ ಸಿಯೆನ್ ಲೂಂಗ್ ಮತ್ತು ನರೇಂದ್ರ ಮೋದಿ ಆರಂಭಿಸಿದ್ದರು. ಇದು ಈಗ ಸಾಕಾರಗೊಂಡಿದೆ.

ಸದ್ಯಕ್ಕೆ ಭೀಮ್ (BHIM), ಪೇಟಿಎಂ ಮತ್ತು ಫೋನ್​ಪೇ ಪ್ಲಾಟ್​ಫಾರ್ಮ್​ಗಳಲ್ಲಿ ಈ ಸೌಲಭ್ಯ ಇದೆ. ಇನ್ನಷ್ಟು ಥರ್ಡ್ ಪಾರ್ಟಿ ಆ್ಯಪ್​ಗಳಲ್ಲೂ ಈ ಸೌಲಭ್ಯ ವಿಸ್ತರಣೆ ಆಗಬಹುದು.

ಎಕ್ಸಿಸ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್​ಸೀಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಆ್ಯಪ್​ಗಳಲ್ಲೂ ಈ ಸೌಲಭ್ಯ ಇದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ದೇಶಗಳ್ಯಾವುವು? ಭಾರತದ ಪಾಸ್​ಪೋರ್ಟ್ ಪ್ರಭಾವ ಎಷ್ಟು?

ಹಾಗೆಯೇ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕ್, ಇಂಡಸ್​ಇಂಡ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್​ಗಳೂ ಕೂಡ ಪೇನೌಗೆ ಖಾತೆಗಳನ್ನು ಲಿಂಕ್ ಮಾಡಬಹುದು.

ಯುಪಿಐ ಬಳಕೆದಾರರ ನಡುವೆ ರಿಯಲ್ ಟೈಮ್​ನಲ್ಲಿ ಹಣ ವರ್ಗಾವಣೆ ಆಗುತ್ತದೆ. ಹಾಗೆಯೇ, ಯುಪಿಐ ಮತ್ತು ಪೇನೌ ಮೂಲಕ ನಡೆಯುವ ಹಣ ವರ್ಗಾವಣೆ ಕೆಲವೇ ಕ್ಷಣಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ಹೈಬ್ರಿಡ್ ಪ್ಲಾಟ್​ಫಾರ್ಮ್​ನಲ್ಲಿ ಬಿಗಿಭದ್ರತೆ ವ್ಯವಸ್ಥೆ ಇದ್ದು, ಹಣ ವರ್ಗಾವಣೆ ಬಹಳ ಸುರಕ್ಷಿತವಾಗಿ ಆಗುತ್ತದೆ.

ಇದನ್ನೂ ಓದಿ: Layoffs: ಗೂಗಲ್​ನಿಂದ ಮತ್ತೆ ನೂರಾರು ಮಂದಿಯ ಲೇ ಆಫ್; ಫಿಟ್​ಬಿಟ್​ನ ಇಬ್ಬರು ಸಹಸಂಸ್ಥಾಪಕರೂ ಔಟ್

ವಿದೇಶಗಳಿಂದ ಭಾರತಕ್ಕೆ ಹಣ ಕಳುಹಿಸಲು ಸಾಕಷ್ಟು ರೆಮಿಟನ್ಸ್ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಯುಪಿಐ ಮತ್ತು ಪೇನೌ ಲಿಂಕ್​ನಿಂದ ಈ ವೆಚ್ಚ ಗಣನೀಯವಾಗಿ ಕಡಿಮೆ ಆಗುತ್ತದೆ. ಟ್ರಾನ್ಸಾಕ್ಷನ್ ಶುಲ್ಕ ಹೆಚ್ಚಿರುವುದಿಲ್ಲ. ದಿನದ ಯಾವ ಹೊತ್ತಿನಲ್ಲೂ ರೆಮಿಟನ್ಸ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು