Layoffs: ಗೂಗಲ್​ನಿಂದ ಮತ್ತೆ ನೂರಾರು ಮಂದಿಯ ಲೇ ಆಫ್; ಫಿಟ್​ಬಿಟ್​ನ ಇಬ್ಬರು ಸಹಸಂಸ್ಥಾಪಕರೂ ಔಟ್

Google Lay Offs: ಗೂಗಲ್ ಸಂಸ್ಥೆ 2024ರ ವರ್ಷದ ಆರಂಭದಲ್ಲಿ ನೂರಾರು ಮಂದಿಯನ್ನು ಲೇ ಆಫ್ ಮಾಡಿದೆ. ಸೆಂಟ್ರಲ್ ಎಂಜಿನಿಯರಿಂಗ್ ವಿಭಾಗ ಹೆಚ್ಚು ಬಾಧಿತವಾಗಿದೆ. 2023ರ ದ್ವಿತೀಯಾರ್ಧದಲ್ಲಿ ಗೂಗಲ್​ನ ವಿವಿಧ ತಂಡಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಆ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಲೇ ಆಫ್ ನಡೆಯುತ್ತಿದೆ. 2021ರಲ್ಲಿ ಗೂಗಲ್​ನಿಂದ ಖರೀದಿಸಲ್ಪಟ್ಟ ಫಿಟ್​ಬಿಟ್ ಸಂಸ್ಥೆಯ ಇಬ್ಬರು ಸಹ-ಸಂಸ್ಥಾಪಕರು ಗೂಗಲ್​ನಿಂದ ನಿರ್ಗಮಿಸುತ್ತಿದ್ದಾರೆ ಎನ್ನಲಾಗಿದೆ.

Layoffs: ಗೂಗಲ್​ನಿಂದ ಮತ್ತೆ ನೂರಾರು ಮಂದಿಯ ಲೇ ಆಫ್; ಫಿಟ್​ಬಿಟ್​ನ ಇಬ್ಬರು ಸಹಸಂಸ್ಥಾಪಕರೂ ಔಟ್
ಗೂಗಲ್
Follow us
|

Updated on: Jan 11, 2024 | 2:31 PM

ನವದೆಹಲಿ, ಜನವರಿ 11: ವರ್ಷದ ಹಿಂದೆ ಸಾವಿರಾರು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದ ಗೂಗಲ್ ಸಂಸ್ಥೆ 2024ರ ಆರಂಭದಲ್ಲಿ ನೂರಾರು ಮಂದಿಯನ್ನು ಲೇ ಆಫ್ (Layoffs) ಮಾಡಿರುವುದು ವರದಿಯಾಗಿದೆ. ವೆಚ್ಚ ಕಡಿತದ (cost cutting) ಭಾಗವಾಗಿ ಗೂಗಲ್ ಈ ಕ್ರಮ ಕೈಗೊಂಡಿದೆ. ಹಿಂದೆ ಗೂಗಲ್ ಖರೀದಿ ಮಾಡಿದ್ದ ಫಿಟ್​ಬಿಟ್ (FitBit) ಸಂಸ್ಥೆಯ ಇಬ್ಬರೂ ಸಹ-ಸಂಸ್ಥಾಪಕರೂ ಗೂಗಲ್​ನಿಂದ ನಿರ್ಗಮಿಸಿದ್ದಾರೆ. ಜೇಮ್ಸ್ ಪಾರ್ಕ್ ಮತ್ತು ಎರಿಕ್ ಫ್ರೈಡ್​ಮ್ಯಾನ್ ಅವರು ಗೂಗಲ್ ಬಿಡುತ್ತಿದ್ದಾರೆ ಎಂದು ಗೂಗಲ್​ನ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾಗಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಗೂಗಲ್​ನ ವಿವಿಧ ತಂಡಗಳಲ್ಲಿ ಸಿಬ್ಬಂದಿಕಡಿತ ಆಗುತ್ತಿದೆ. ವಾಯ್ಸ್ ಅಸಿಸ್ಟೆಂಟ್ ಯೂನಿಟ್​ನಿಂದ ಹಲವರನ್ನು ತೆಗೆಯಲಾಗಿದೆ. ಗೂಗಲ್​ನ ಪಿಕ್ಸೆಲ್, ನೆಸ್ಟ್, ಫಿಟ್​ಬಿಟ್ ತಂಡಗಳ ಹಾರ್ಡ್​ವೇರ್ ಸಿಬ್ಬಂದಿಯಲ್ಲಿ ಹಲವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಅದರಲ್ಲೂ ಗೂಗಲ್​ನ ಆಗ್ಮೆಂಟೆಡ್ ರಿಯಾಲಿಟಿ ಅಥವಾ ಎಆರ್ ತಂಡದ ಹೆಚ್ಚಿನ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೊಸ ವರ್ಷದ ಲೇ ಆಫ್​ನಲ್ಲಿ ಹೆಚ್ಚು ಬಾಧಿತರಾಗಿರುವುದು ಸೆಂಟ್ರಲ್ ಎಂಜಿನಿಯರಿಂಗ್ ಟೀಮ್​ನವರು.

ಇದನ್ನೂ ಓದಿ: Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ದೇಶಗಳ್ಯಾವುವು? ಭಾರತದ ಪಾಸ್​ಪೋರ್ಟ್ ಪ್ರಭಾವ ಎಷ್ಟು?

‘2023ರ ಎರಡನೇ ಭಾಗದುದ್ದಕ್ಕೂ ನಮ್ಮ ಹಲವು ತಂಡಗಳು ಹೆಚ್ಚು ಕ್ಷಮತೆ ಸಾಧ್ಯವಾಗುವ ನಿಟ್ಟಿನಲ್ಲಿ ಬದಲಾವಣೆ ಮಾಡಿಕೊಂಡಿವೆ. ಆದ್ಯತೆಯ ಉತ್ಪನ್ನಗಳಿಗೆ ಸಂಪನ್ಮೂಲಗಳು ಕೇಂದ್ರಿತವಾಗುವಂತೆ ಮಾಡಿವೆ. ಈಗಲೂ ಕೂಡ ಕೆಲ ತಂಡಗಳು ಲೇ ಆಫ್ ಸೇರಿದಂತೆ ಒಂದಷ್ಟು ಬದಲಾವಣೆಗಳಲ್ಲಿ ನಿರತವಾಗಿವೆ’ ಎಂದು ಗೂಗಲ್​ನ ವಕ್ತಾರರು ತಿಳಿಸಿದ್ದಾರೆ.

ಆದರೆ, ಒಟ್ಟಾರೆಯಾಗಿ ಎಷ್ಟು ಮಂದಿ ಗೂಗಲ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಸಾವಿರದ ಆಸುಪಾಸು ಇರಬಹುದು ಎಂದು ವರದಿ ಸುಳಿವು ನೀಡುತ್ತಿದೆ.

ಇದನ್ನೂ ಓದಿ: Narendra Modi: ಸ್ವಾತಂತ್ರ್ಯ ಶತಮಾನೋತ್ಸವದ ವೇಳೆ ಮುಂದುವರಿದ ದೇಶವನ್ನಾಗಿಸುವ ಗುರಿ: ನರೇಂದ್ರ ಮೋದಿ

2023ರ ಜನವರಿ ತಿಂಗಳಲ್ಲಿ ಗೂಗಲ್​ನ ಮಾಲಕ ಸಂಸ್ಥೆ ಆಲ್ಫಬೆಟ್ 12,000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವುದಾಗಿ ಘೋಷಣೆ ಮಾಡಿತ್ತು. ಎರಡು ಲಕ್ಷ ಸಂಖ್ಯೆಗೆ ಸಮೀಪದಷ್ಟು ಉದ್ಯೋಗಿಗಳನ್ನು ಗೂಗಲ್ ಹೊಂದಿದೆ. ಕಳೆದ ವರ್ಷ ಶೇ. 6ರಷ್ಟು ಗೂಗಲ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ