ನವದೆಹಲಿ, ಜನವರಿ 11: ಸಿಂಗಾಪುರದಿಂದ ಭಾರತೀಯ ಸಮುದಾಯದವರು ತಮ್ಮ ಊರಿನ ಮಂದಿಗೆ ಹಣ ಕಳುಹಿಸುವ ಕಾರ್ಯ ಈಗ ಸುಗಮಗೊಂಡಿದೆ. ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ (PayNow) ಪ್ಲಾಟ್ಫಾರ್ಮ್ ಅನ್ನು ಲಿಂಕ್ ಮಾಡಿದ್ದು, ಸಿಂಗಾಪುರದಿಂದ ಭಾರತೀಯರು ಹಣ ಸ್ವೀಕರಿಸಬಹುದಾಗಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ (2023) ಯುಪಿಐ ಮತ್ತು ಪೇ ನೌ ನಡುವೆ ಕ್ರಾಸ್ ಬಾರ್ಡರ್ ಕನೆಕ್ಟಿವಿಟಿ ಯೋಜನೆಯನ್ನು ಸಿಂಗಾಪುರ ಪ್ರಧಾನಿ ಲೀ ಸಿಯೆನ್ ಲೂಂಗ್ ಮತ್ತು ನರೇಂದ್ರ ಮೋದಿ ಆರಂಭಿಸಿದ್ದರು. ಇದು ಈಗ ಸಾಕಾರಗೊಂಡಿದೆ.
ಸದ್ಯಕ್ಕೆ ಭೀಮ್ (BHIM), ಪೇಟಿಎಂ ಮತ್ತು ಫೋನ್ಪೇ ಪ್ಲಾಟ್ಫಾರ್ಮ್ಗಳಲ್ಲಿ ಈ ಸೌಲಭ್ಯ ಇದೆ. ಇನ್ನಷ್ಟು ಥರ್ಡ್ ಪಾರ್ಟಿ ಆ್ಯಪ್ಗಳಲ್ಲೂ ಈ ಸೌಲಭ್ಯ ವಿಸ್ತರಣೆ ಆಗಬಹುದು.
ಎಕ್ಸಿಸ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಆ್ಯಪ್ಗಳಲ್ಲೂ ಈ ಸೌಲಭ್ಯ ಇದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್ಪೋರ್ಟ್ಗಳ ದೇಶಗಳ್ಯಾವುವು? ಭಾರತದ ಪಾಸ್ಪೋರ್ಟ್ ಪ್ರಭಾವ ಎಷ್ಟು?
ಹಾಗೆಯೇ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್ಗಳೂ ಕೂಡ ಪೇನೌಗೆ ಖಾತೆಗಳನ್ನು ಲಿಂಕ್ ಮಾಡಬಹುದು.
ಯುಪಿಐ ಬಳಕೆದಾರರ ನಡುವೆ ರಿಯಲ್ ಟೈಮ್ನಲ್ಲಿ ಹಣ ವರ್ಗಾವಣೆ ಆಗುತ್ತದೆ. ಹಾಗೆಯೇ, ಯುಪಿಐ ಮತ್ತು ಪೇನೌ ಮೂಲಕ ನಡೆಯುವ ಹಣ ವರ್ಗಾವಣೆ ಕೆಲವೇ ಕ್ಷಣಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ಹೈಬ್ರಿಡ್ ಪ್ಲಾಟ್ಫಾರ್ಮ್ನಲ್ಲಿ ಬಿಗಿಭದ್ರತೆ ವ್ಯವಸ್ಥೆ ಇದ್ದು, ಹಣ ವರ್ಗಾವಣೆ ಬಹಳ ಸುರಕ್ಷಿತವಾಗಿ ಆಗುತ್ತದೆ.
ಇದನ್ನೂ ಓದಿ: Layoffs: ಗೂಗಲ್ನಿಂದ ಮತ್ತೆ ನೂರಾರು ಮಂದಿಯ ಲೇ ಆಫ್; ಫಿಟ್ಬಿಟ್ನ ಇಬ್ಬರು ಸಹಸಂಸ್ಥಾಪಕರೂ ಔಟ್
ವಿದೇಶಗಳಿಂದ ಭಾರತಕ್ಕೆ ಹಣ ಕಳುಹಿಸಲು ಸಾಕಷ್ಟು ರೆಮಿಟನ್ಸ್ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಯುಪಿಐ ಮತ್ತು ಪೇನೌ ಲಿಂಕ್ನಿಂದ ಈ ವೆಚ್ಚ ಗಣನೀಯವಾಗಿ ಕಡಿಮೆ ಆಗುತ್ತದೆ. ಟ್ರಾನ್ಸಾಕ್ಷನ್ ಶುಲ್ಕ ಹೆಚ್ಚಿರುವುದಿಲ್ಲ. ದಿನದ ಯಾವ ಹೊತ್ತಿನಲ್ಲೂ ರೆಮಿಟನ್ಸ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ