ಆನ್‌ಲೈನ್ ಗೇಮಿಂಗ್​​ಗೆ ಶೇ. 28ರಷ್ಟು ಜಿಎಸ್​ಟಿ: ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ನಿರ್ಮಲಾ ಸೀತಾರಾಮನ್

|

Updated on: Aug 11, 2023 | 2:15 PM

ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಇತರ ಗೇಮ್ಸ್​​​ ಮೇಲೆ ಶೇಕಡಾ 28ದಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಕಾನೂನಿನಲ್ಲಿ ತಿದ್ದುಪಡಿ ಮಾಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಸೂದೆಗಳನ್ನು ಮಂಡಿಸಿದ್ದಾರೆ.

ಆನ್‌ಲೈನ್ ಗೇಮಿಂಗ್​​ಗೆ ಶೇ. 28ರಷ್ಟು ಜಿಎಸ್​ಟಿ: ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ನಿರ್ಮಲಾ ಸೀತಾರಾಮನ್
ಸಾಂದರ್ಭಿಕ ಚಿತ್ರ
Follow us on

ದೆಹಲಿ, ಆ.11: ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್, (online gaming) ಕ್ಯಾಸಿನೋಗಳು ಮತ್ತು ಇತರ ಗೇಮ್ಸ್​​​ ಮೇಲೆ ಶೇಕಡಾ 28ರಷ್ಟು ತೆರಿಗೆ ವಿಧಿಸಲು, ಜಿಎಸ್‌ಟಿ ಕಾನೂನಿನಲ್ಲಿ ತಿದ್ದುಪಡಿ ಮಾಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಿದ್ದುಪಡಿ ಮಸೂದೆಗಳನ್ನು ಮಂಡಿಸಿದ್ದಾರೆ. ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2023, ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2023ನ್ನು ಲೋಕಸಭೆ ಗದ್ದಲದ ನಡುವೆಯು  ಹಣಕಾಸು ಸಚಿವೆ ಮಂಡಿಸಿದ್ದಾರೆ. ಇನ್ನು ಇಂದು (ಆ.11) ಸಂಸತ್ತಿನ ಮುಂಗಾರು ಅಧಿವೇಶನ ಕೊನೆಯಾಗಲಿದೆ, ಇದಕ್ಕೂ ಮುನ್ನ ಈ ಮಸೂದೆಯನ್ನು ಮಂಡಿಸಿದ್ದು, ಒಮ್ಮೆ ಕಾನೂನುಗಳ ತಿದ್ದುಪಡಿ ಅಂಗೀಕರಿಸಿದ ನಂತರ, ರಾಜ್ಯಗಳ ಜಿಎಸ್‌ಟಿ ಕಾನೂನಿನಲ್ಲೂ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್‌ಗಳಲ್ಲಿನ ಸರಬರಾಜುಗಳ ತೆರಿಗೆಯ ಸ್ಪಷ್ಟತೆ ತಿಳಿಸಲು, 2017ರ CGST ಕಾಯಿದೆಯ ಶೆಡ್ಯೂಲ್ IIIರಲ್ಲಿ ಕೆಲವೊಂದು ನಿಬಂಧನೆಯನ್ನು ತಿದ್ದುಪಡಿ ಮಾಡಲು ಹಣಕಾಸು ಇಲಾಖೆ ಮುಂದಾಗಿದೆ. IGST ಕಾಯಿದೆಯಲ್ಲಿನ ತಿದ್ದುಪಡಿಯು ಆನ್‌ಲೈನ್ ಗೇಮಿಂಗ್‌ಗೆ GST ವಿಧಿಸುವ ನಿಬಂಧನೆಗೆ ಸಂಬಂಧಿಸಿದ್ದು. ಇಂತಹ ಗೇಮಿಂಗ್‌ ಘಟಕಗಳು ಭಾರತದ GST ನೋಂದಣಿಯನ್ನು ಪಡೆಯುವುದು ಅಗತ್ಯ ಎಂಬುದನ್ನು ಕೂಡ ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಪ್ರಿಯರಿಗೆ ಕಹಿ ಸುದ್ದಿ; ಮತ್ತಷ್ಟು ದುಬಾರಿಯಾಗುವ ಸಾಧ್ಯತೆ

ಇನ್ನು ವಿದೇಶ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್​​​ಗಳು ನೋಂದಣಿ ಮತ್ತು ತೆರಿಗೆ ಪಾವತಿಯ ನಿಬಂಧನೆಗಳನ್ನು ಅನುಸರಿಸದಿದ್ದಲ್ಲಿ ಭಾರತದೊಳಗೆ ಈ ಗೇಮಿಂಗ್​​ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂಬುದನ್ನು ಈ ತಿದ್ದುಪಡಿಯಲ್ಲಿ ತಿಳಿಸಲಾಗಿದೆ. ಕಳೆದ ವಾರ ಜಿಎಸ್‌ಟಿ ಕೌನ್ಸಿಲ್ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ಕಾನೂನುಗಳಿಗೆ ತಿದ್ದುಪಡಿಗಳನ್ನು ಅನುಮೋದಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:10 pm, Fri, 11 August 23