Online Gaming: ಆನ್​ಲೈನ್ ಗೇಮಿಂಗ್ ಪ್ರಿಯರಿಗೆ ಕಹಿ ಸುದ್ದಿ; ಮತ್ತಷ್ಟು ದುಬಾರಿಯಾಗುವ ಸಾಧ್ಯತೆ

ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ವರದಿ ಬಹುತೇಕ ಅಂತಿಮಗೊಂಡಿದೆ. ಸಮಿತಿಯು ಈ ವರದಿಯನ್ನು ಶೀಘ್ರದಲ್ಲೇ ಜಿಎಸ್​ಟಿ ಮಂಡಳಿಯ ಪರಿಶೀಲನೆಗೆ ಕಳುಹಿಸಿಕೊಡಲಿದೆ ಎಂದು ಮೂಲಗಳು ಹೇಳಿವೆ.

Online Gaming: ಆನ್​ಲೈನ್ ಗೇಮಿಂಗ್ ಪ್ರಿಯರಿಗೆ ಕಹಿ ಸುದ್ದಿ; ಮತ್ತಷ್ಟು ದುಬಾರಿಯಾಗುವ ಸಾಧ್ಯತೆ
ಸಾಂದರ್ಭಿಕ ಚಿತ್ರ (ಎಎಫ್​ಪಿ)Image Credit source: AFP
Follow us
| Updated By: ಗಣಪತಿ ಶರ್ಮ

Updated on: Nov 22, 2022 | 2:01 PM

ನವದೆಹಲಿ: ಆನ್​ಲೈನ್ ಗೇಮಿಂಗ್​ಗೆ (Online Gaming) ಶೇಕಡಾ 28ರ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸುವ ಬಗ್ಗೆ ರಾಜ್ಯಗಳ ಹಣಕಾಸು ಸಚಿವರ ಸಮಿತಿ ಶಿಫಾರಸು ಮಾಡುವ ಸಾಧ್ಯತೆ ಇದೆ. ಅದು ಕೌಶಲದ ಗೇಮ್ಸ್​ ಅಥವಾ ಅವಕಾಶದ ಗೇಮ್ಸ್ ಆಗಿದೆಯೇ ಎಂಬುದನ್ನು ಪರಿಗಣಿಸದೆ ಶೇಕಡಾ 28 ತೆರಿಗೆ ವಿಧಿಸಲು ಶಿಫಾರಸು ಮಾಡುವ ಸಾಧ್ಯತೆ ಇದೆ. ಜತೆಗೆ, ಜಿಎಸ್​ಟಿ ಮೊತ್ತವನ್ನು ಲೆಕ್ಕಹಾಕುವ ವಿಧಾನವನ್ನು ಪರಿಷ್ಕರಿಸುವಂತೆ ಸಲಹೆ ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಆನ್​ಲೈನ್ ಗೇಮಿಂಗ್​​ಗೆ ಶೇಕಡಾ 18ರ ಜಿಎಸ್​ಟಿ ವಿಧಿಸಲಾಗುತ್ತಿದೆ. ಆನ್​ಲೈನ್ ಗೇಮಿಂಗ್ ಪೋರ್ಟಲ್​ಗಳು ವಿಧಿಸುವ ಶುಲ್ಕದಿಂದ ಸಂಗ್ರಹವಾದ ಒಟ್ಟು ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತಿದೆ.

ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ವರದಿ ಬಹುತೇಕ ಅಂತಿಮಗೊಂಡಿದೆ. ಸಮಿತಿಯು ಈ ವರದಿಯನ್ನು ಶೀಘ್ರದಲ್ಲೇ ಜಿಎಸ್​ಟಿ ಮಂಡಳಿಯ ಪರಿಶೀಲನೆಗೆ ಕಳುಹಿಸಿಕೊಡಲಿದೆ ಎಂದು ಮೂಲಗಳು ಹೇಳಿವೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾರೆ. ಆನ್​ಲೈನ್ ಗೇಮಿಂಗ್​ನ ಪೂರ್ಣ ಮೌಲ್ಯ ಆಧರಿಸಿ ಶೇಕಡಾ 28ರ ಜಿಎಸ್​ಟಿ ವಿಧಿಸುವಂತೆ ಈ ಹಿಂದೆ ಸಮಿತಿ ಶಿಫಾರಸು ಮಾಡಿತ್ತು. ಅಂದರೆ ಎಂಟ್ರಿ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳ ಒಟ್ಟು ಮೊತ್ತದ ಮೇಲೆ ಜಿಎಸ್​ಟಿ ಸಂಗ್ರಹಿಸಲು ಸಲಹೆ ನೀಡಲಾಗಿತ್ತು. ಇದರಲ್ಲಿ ಬದಲಾವಣೆ ಮಾಡುವಂತೆ ಸಚಿವರ ಸಮಿತಿ ಮನವಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ
Image
ಯುಪಿಐ ಮೂಲಕ ಎಟಿಎಂನಿಂದ ಹಣ ವಿತ್​ಡ್ರಾ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
Image
ಇ-ಕಾಮರ್ಸ್ ವೆಬ್​​ಸೈಟ್​ಗಳಲ್ಲಿ ನಕಲಿ ರಿವ್ಯೂಗೆ ಬೀಳಲಿದೆ ಕಡಿವಾಣ; ಶೀಘ್ರದಲ್ಲೇ ಬರಲಿದೆ ನಿಯಮ
Image
It Jobs; ಐಟಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ? ಶೀಘ್ರದಲ್ಲೇ ನಿಮಗಿದೆ ಸಿಹಿ ಸುದ್ದಿ
Image
ಡಿಜಿಟಲ್ ಪಾವತಿಗೆ ಶುಲ್ಕ: ರಿಸರ್ವ್ ಬ್ಯಾಂಕ್ ಜೊತೆಗೆ ಮಾತುಕತೆ ಆರಂಭಿಸಿದ ಪೇಮೆಂಟ್ಸ್ ಕಾರ್ಪೊರೇಷನ್

ಇದನ್ನೂ ಓದಿ: Gaming Industry: ದೇಶದ ಗೇಮಿಂಗ್ ಉದ್ಯಮದಲ್ಲಿ ಸೃಷ್ಟಿಯಾಗಲಿದೆ 1 ಲಕ್ಷ ಉದ್ಯೋಗ; ವರದಿ

ಸಚಿವರ ಸಮಿತಿಯ ಶಿಫಾರಸಿನ ಬಳಿಕ ಅಟಾರ್ನಿ ಜನರಲ್ ಅವರು ಆನ್​ಲೈನ್ ಗೇಮಿಂಗ್ ಉದ್ಯಮಿಗಳ ಅಭಿಪ್ರಾಯ ಕೋರಲಿದ್ದಾರೆ. ಆ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಲಾಕ್​​ಡೌನ್ ಸಂದರ್ಭದಲ್ಲಿ ದೇಶದಲ್ಲಿ ಆನ್​ಲೈನ್ ಗೇಮಿಂಗ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಕೆಪಿಎಂಜಿ ವರದಿಯ ಪ್ರಕಾರ, 2021ರಲ್ಲಿ 13,600 ಕೋಟಿ ರೂ. ಇದ್ದ ಆನ್​ಲೈನ್ ಗೇಮಿಂಗ್ ವಹಿವಾಟು 2024-25ರ ವೇಳೆಗೆ 29,000 ಕೋಟಿ ರೂ. ತಲುಪಬಹುದು ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಆನ್​ಲೈನ್ ಗೇಮಿಂಗ್ ಉದ್ಯಮ ಇತ್ತೀಚಿನ ದಿನಗಳಲ್ಲಿ ಭಾರಿ ಬೆಳವಣಿಗೆ ಸಾಧಿಸುತ್ತಿದೆ. ಈ ಉದ್ಯಮದಲ್ಲಿ ಮುಂದಿನ ಹಣಕಾಸು ವರ್ಷದ ವೇಳೆಗೆ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಗೇಮಿಂಗ್ ಉದ್ಯಮಕ್ಕೆ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಮೊತ್ತದ ವಿದೇಶಿ ಹೂಡಿಕೆ ಹರಿದುಬರಲಿದೆ. 2023ರಲ್ಲಿ 780 ಕೋಟಿ ರೂ. ನೇರ ವಿದೇಶಿ ಹೂಡಿಕೆ ಬರಲಿದೆ. ಉದ್ದಿಮೆಯು ಶೇಕಡಾ 20-30ರಷ್ಟು ಬೆಳವಣಿಗೆ ಹೊಂದಲಿದೆ. 2026ರ ವೇಳೆಗೆ ಉದ್ಯಮದ ಮೌಲ್ಯವು 38,097 ಕೋಟಿ ರೂ.ಗೆ ಹೆಚ್ಚಲಿದೆ ಎಂದು ವರದಿ ತಿಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ