AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರಿಗೆ ಆದಾಯ ಸಂಗ್ರಹ; ಕರ್ನಾಟಕವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ತಮಿಳುನಾಡು

Tax Revenue Collections; ಮದ್ಯ ಮಾರಾಟದ ಮೇಲಿನ ಅಬಕಾರಿ ಸುಂಕದಿಂದಾಗಿ ತಮಿಳುನಾಡಿನ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ತೆರಿಗೆ ಆದಾಯ ಸಂಗ್ರಹದಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.

ತೆರಿಗೆ ಆದಾಯ ಸಂಗ್ರಹ; ಕರ್ನಾಟಕವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ತಮಿಳುನಾಡು
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on: Nov 07, 2022 | 5:24 PM

Share

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ತೆರಿಗೆ ಆದಾಯ ಸಂಗ್ರಹದಲ್ಲಿ (Tax Revenue Collections) ಕರ್ನಾಟಕವನ್ನು (Karnataka) ಹಿಂದಿಕ್ಕಿರುವ ತಮಿಳುನಾಡು (Tamil Nadu) ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮದ್ಯ ಮಾರಾಟದ ಮೇಲಿನ ಅಬಕಾರಿ ಸುಂಕದಿಂದಾಗಿ ತಮಿಳುನಾಡಿನ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರ (Maharashtra) ಮತ್ತು ಉತ್ತರ ಪ್ರದೇಶ (Uttar Pradesh) ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.

ಸಿಎಜಿ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ. ಏಪ್ರಿಲ್ – ಸೆಪ್ಟೆಂಬರ್ ಅವಧಿಯಲ್ಲಿ ತಮಿಳುನಾಡು 68,638 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ಕರ್ನಾಟಕ 66,158 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕರ್ನಾಟಕದ ಸ್ವಂತ ತೆರಿಗೆ ಆದಾಯ 53,566 ಕೋಟಿ ರೂ. ಆಗಿದ್ದರೆ, ತಮಿಳುನಾಡಿನ ಸ್ವಂತ ತೆರಿಗೆ ಆದಾಯ 50,324 ಕೋಟಿ ರೂ. ಆಗಿತ್ತು.

ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕವೇ ಮುಂದೆ

ಇದನ್ನೂ ಓದಿ
Image
Petrol Price on November 7: ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಕುಸಿತವಾಗಿಲ್ಲ ಪೆಟ್ರೋಲ್, ಡೀಸೆಲ್ ದರ
Image
ನೋಟು ಅಮಾನ್ಯೀಕರಣದ 6 ವರ್ಷಗಳ ನಂತರವೂ ಜನರಲ್ಲಿರುವ ನಗದು ₹ 30.88 ಲಕ್ಷ ಕೋಟಿ
Image
Personal Finance: ಮನಿ9 ಭಾರತದ ಮೊದಲ ಮತ್ತು ಅತಿದೊಡ್ಡ ಸ್ವತಂತ್ರ ಪರ್ಸನಲ್ ಫೈನಾನ್ಸ್​ ಸಮೀಕ್ಷೆಯ ಅವಲೋಕನ
Image
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ; ನ. 7ರಿಂದ 1 ವಾರದೊಳಗೆ 5 ದಿನ ಬ್ಯಾಂಕ್​ಗಳಿಗೆ ರಜೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ತಮಿಳುನಾಡಿಗೆ ಹೋಲಿಸಿದರೆ ಈ ವರ್ಷವೂ ಕರ್ನಾಟಕವೇ ಮುಂದಿದೆ. ದೇಶದಾದ್ಯಂತ ಅಕ್ಟೋಬರ್​ ತಿಂಗಳಲ್ಲಿ ಒಟ್ಟು 1.51 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. ಇದು ಜಿಎಸ್​ಟಿ ಸಂಗ್ರಹದಲ್ಲಿ ಈವರೆಗಿನ ಎರಡನೇ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ 1.47 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ: ಕರ್ನಾಟಕ ನಂಬರ್ 2

ಕರ್ನಾಟಕದಲ್ಲಿ ಅಕ್ಟೋಬರ್​ ತಿಂಗಳಲ್ಲಿ 10,996 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ. ಕಳೆದ ವರ್ಷ ಅಕ್ಟೋಬರ್​​ನಲ್ಲಿ 8,259 ಕೋಟಿ ರೂ. ಸಂಗ್ರಹವಾಗಿತ್ತು. ತಮಿಳುನಾಡಿನಲ್ಲಿ ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ 7,642 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದ್ದರೆ, ಈ ವರ್ಷ 9,540 ಕೋಟಿ ರೂ. ಸಂಗ್ರಹವಾಗಿದೆ. ಆದರೆ, ಸ್ವಂತ ತೆರಿಗೆ ಆದಾಯದಲ್ಲಿ ಮಾತ್ರ ತಮಿಳುನಾಡು ಈ ವರ್ಷದ ಮೊದಲಾರ್ಧದಲ್ಲಿ ಕರ್ನಾಟಕವನ್ನು ಮೀರಿಸಿದೆ.

ಏಪ್ರಿಲ್​​ನಲ್ಲಿ ದೇಶದಾದ್ಯಂತ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. ಜಿಎಸ್​ಟಿ ಜಾರಿಗೆ ಬಂದ ನಂತರ ತಿಂಗಳೊಂದರಲ್ಲಿ ಸಂಗ್ರಹವಾದ ಗರಿಷ್ಠ ಮೊತ್ತ ಇದಾಗಿದೆ. ಬಿಟ್ಟರೆ ಈಗ ಅಕ್ಟೋಬರ್​ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ