ನವದೆಹಲಿ: ಪ್ಯಾನ್ ನಂಬರ್ಗಳನ್ನು ಆಧಾರ್ ಜೊತೆ ಜೋಡಿಸಬೇಕೆಂದು (Aadhaar PAN Linking) ಸರ್ಕಾರ ಕಡ್ಡಾಯಗೊಳಿಸಿದ್ದು, ಜೂನ್ 30 ಡೆಡ್ಲೈನ್ ಕೊಡಲಾಗಿದೆ. ಈ ಬಾರಿ ಗಡುವು ವಿಸ್ತರಣೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಆದರೆ, ಇಂದು ಸಂಜೆಯೊಳಗೆ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಸಿಗಬಹುದು. ಈ ಹಿಂದೆ ಐಟಿ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜೂನ್ 30ರ ಬಳಿಕ ಮತ್ತೆ ಒಂದು ತಿಂಗಳು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ಕಾಲಾವಕಾಶ ಕೊಡಬಹುದು. ಇದಕ್ಕೆ 1,000 ರೂ ದಂಡ ಪಾವತಿಸಬೇಕು. ಆದರೆ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ನಂಬರ್ ಜೂನ್ 30ರ ಬಳಿಕ ನಿಷ್ಕ್ರಿಯಗೊಳ್ಳುವುದು ಹೌದು. ಅದಾದ ಬಳಿಕ ಪ್ಯಾನ್ ಅನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನಂತೂ ಇಲಾಖೆ ಕೊಡಬಹುದು.
ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ಗಳು ಕೊಡಲಾಗಿರುವುದು; ಹಾಗೂ ಒಂದೇ ಪ್ಯಾನ್ ನಂಬರ್ ಅನ್ನು ಒಬ್ಬರಿಗಿಂತ ಹೆಚ್ಚು ಮಂದಿಗೆ ಅಲಾಟ್ ಮಾಡಲಾದ ಹಲವು ಪ್ರಕರಣಗಳು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದ್ದವು. 2017ರಲ್ಲಿ ಈ ಸಮಸ್ಯೆ ನಿವಾರಿಸಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬೇಕೆನ್ನುವ ಕಾನೂನನ್ನು ತರಲಾಯಿತು. 2017 ಜುಲೈನಿಂದ ಪ್ಯಾನ್ ಪಡೆಯಲು ಆಧಾರ್ ದಾಖಲೆ ಕಡ್ಡಾಯಗೊಳಿಸಲಾಯಿತು. ಅದಕ್ಕಿಂತ ಮುಂಚೆ ಮಾಡಿಸಿದ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವಂತೆ ಸರ್ಕಾರ ಸೂಚಿಸಿತು.
ಪ್ರಾಯೋಗಿಕವಾಗಿ ನೋಡಿದರೆ 2017, ಜೂನ್ 30ಕ್ಕೆ ಮುಂಚೆ ಪ್ಯಾನ್ ಮಾಡಿಸಿದವರೆಲ್ಲರೂ ತಮ್ಮ ಆಧಾರ್ಗೆ ಲಿಂಕ್ ಮಾಡಿಸಬೇಕಾಗುತ್ತದೆ.
ಇದನ್ನೂ ಓದಿ: Changes in July 2023: ಎಲ್ಪಿಜಿ ಬೆಲೆ ಸೇರಿದಂತೆ ಜುಲೈ ತಿಂಗಳಲ್ಲಿ ನೀವು ಗಮನಿಸಬೇಕಾದ ಕೆಲ ಬದಲಾವಣೆಗಳು
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ