ನವದೆಹಲಿ, ಮೇ 27: ಬ್ಯಾಂಕುಗಳು ಸಾಮಾನ್ಯವಾಗಿ ಆಗಾಗ್ಗೆ ಸಾಲ ಮತ್ತು ಠೇವಣಿ ದರಗಳನ್ನು (loan and deposit rates) ಪರಿಷ್ಕರಿಸುತ್ತಿರುತ್ತವೆ. ಹೆಚ್ಚು ಠೇವಣಿಗಳನ್ನು ಆಕರ್ಷಿಸಬೇಕಿದ್ದಲ್ಲಿ ಆಕರ್ಷಕ ಎಫ್ಡಿ ದರಗಳನ್ನು ನಿಗದಿ ಮಾಡಲಾಗುತ್ತದೆ. ಅಂತೆಯೇ ಸಹಕಾರಿ ಬ್ಯಾಂಕುಗಳು ಸಹಜವಾಗಿ ಹೆಚ್ಚಿನ ಎಫ್ಡಿ ದರಗಳನ್ನು ಆಫರ್ ಮಾಡುತ್ತವೆ. ಮುಖ್ಯವಾಹಿನಿ ಬ್ಯಾಂಕುಗಳು ತಕ್ಕಮಟ್ಟಿಗಿನವರೆಗೆ ಬಡ್ಡಿದರ ನಿಗದಿ ಮಾಡುತ್ತವೆ. ಇತ್ತೀಚೆಗೆ ಕೆಲ ಬ್ಯಾಂಕುಗಳು ಎಫ್ಡಿ ದರಗಳನ್ನು ಪರಿಷ್ಕರಿಸಿವೆ. ಶೇ. 9.1ರವರೆಗೆ ಬಡ್ಡಿ ಆಫರ್ ಮಾಡಿವೆ. ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗರಿಷ್ಠ ಬಡ್ಡಿ ನೀಡುತ್ತದೆ. ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರ ಠೇವಣಿಗಳಿಗೆ 50 ಅಥವಾ 60 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಯಾವ್ಯಾವ ಬ್ಯಾಂಕುಗಳಲ್ಲಿ ಇತ್ತೀಚೆಗೆ ಎಫ್ಡಿ ದರ ಪರಿಷ್ಕರಣೆ ಆಗಿದೆ ಎನ್ನುವ ವಿವರ ಇಲ್ಲಿದೆ:
ಡಿಸಿಬಿ ಬ್ಯಾಂಕ್ 19ರಿಂದ 20 ತಿಂಗಳ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗೆ ಬಡ್ಡಿದರವನ್ನು ಶೇ. 8ಕ್ಕೆ ಏರಿಸಿದೆ. ಇದು ಸಾಮಾನ್ಯ ಗ್ರಾಹಕರಿಗೆ ನೀಡಲಾಗುವ ಬಡ್ಡಿ. ಹಿರಿಯ ನಾಗರಿಕರಿಗೆ 55 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ, ಅಂದರೆ ಶೇ. 8.55ರಷ್ಟು ಬಡ್ಡಿ ಕೊಡಲಾಗುತ್ತದೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಸಾಮಾನ್ಯ ಗ್ರಾಹಕರ ನಿಶ್ಚಿತ ಠೇವಣಿಗಳಿಗೆ ಶೇ. 7.90ರವರೆಗೆ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: 40ರ ಬಳಿಕ ಮನೆ ಮಾಡಲು ಹೊರಟಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ
ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐ ತನ್ನ ಫಿಕ್ಸೆಡ್ ಡೆಪಾಸಿಟ್ಗಳಿಗೆ ಶೇ. ಶೇ. 7.1ರವರೆಗೆ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರಿಗೆ ಶೇ. 7.60ರವರೆಗೆ ಎಫ್ಡಿ ದರಗಳಿವೆ.
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಸಾಮಾನ್ಯ ಗ್ರಾಹಕರಿಗೆ ಶೇ. 8.50ರವರೆಗೆ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರಿಗೆ ಶೇ. 9.10ರವರೆಗೆ ಬಡ್ಡಿ ಸಿಗುತ್ತದೆ. ಎರಡರಿಂದ ಮೂರು ವರ್ಷ ಅವಧಿಯ ಠೇವಣಿಗಳಿಗೆ ಗರಿಷ್ಠ ಬಡ್ಡಿ ದರ ಇದೆ.
ಇದನ್ನೂ ಓದಿ: ಮೋದಿಯ ಶೇ. 95ರಷ್ಟು ವೈಯಕ್ತಿಕ ಸಂಪತ್ತು ಎಫ್ಡಿಗಳಲ್ಲಿ; ಫಿಕ್ಸೆಡ್ ಡೆಪಾಸಿಟ್ನ ಲಾಭಗಳೇನು, ತಿಳಿದಿರಿ
ಆರ್ಬಿಎಲ್ ಬ್ಯಾಂಕ್ನ ಫಿಕ್ಸೆಡ್ ಡೆಪಾಸಿಟ್ ದರಗಳನ್ನು ಪರಿಷ್ಕರಿಸಲಾಗಿದ್ದು, ಸಾಮಾನ್ಯ ಗ್ರಾಹಕರ ಠೇವಣಿಗಳಿಗೆ ಶೇ. 8ರವರೆಗೆ ಬಡ್ಡಿ ಕೊಡಲಾಗುತ್ತದೆ. 60 ವರ್ಷ ಮೇಲ್ಪಟ್ಟ ಮತ್ತು 80 ವರ್ಷ ಒಳಪಟ್ಟ ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್ಸ್ಗೆ ಶೇ. 8.75ರವರೆಗೆ ಬಡ್ಡಿ ಆಫರ್ ಮಾಡಲಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ