ಬರೋಬ್ಬರಿ 75 ಮೂಲಾಂಕಗಳಷ್ಟು ಎಫ್ಡಿ ದರ ಹೆಚ್ಚಿಸಿದ ಎಸ್ಬಿಐ; ಇಲ್ಲಿದೆ ಠೇವಣಿ ದರಗಳ ಪಟ್ಟಿ
SBI fd rates revised: ಎಸ್ಬಿಐ ತನ್ನ ಎಫ್ಡಿ ದರಗಳನ್ನು ಪರಿಷ್ಕರಿಸಿದೆ. ಮೂರು ಲಕ್ಷದೊಳಗಿನ ಹೆಚ್ಚಿನ ಠೇವಣಿಗಳ ದರಗಳನ್ನು ಹೆಚ್ಚಿಸಲಾಗಿದೆ. 75 ಮೂಲಾಂಕಗಳಷ್ಟರವರೆಗೆ ಬಡ್ಡಿ ಹೆಚ್ಚಿಸಲಾಗಿದೆ. ಮೂರು ಲಕ್ಷ ರೂ ಹಾಗೂ ಮೇಲ್ಪಟ್ಟ ಮೊತ್ತದ ಠೇವಣಿಗಳ ದರದಲ್ಲಿ ಬದಲಾವಣೆ ಆಗಿಲ್ಲ. ಎರಡರಿಂದ ಮೂರು ವರ್ಷದೊಳಗಿನ ಠೇವಣಿಗೆ ಗರಿಷ್ಠ ಬಡ್ಡಿಯಾದ ಶೇ. 7 ಅನ್ನು ಕೊಡಲಾಗುತ್ತಿದೆ. ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.
ನವದೆಹಲಿ, ಮೇ 15: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೆಲ ನಿಶ್ಚಿತ ಠೇವಣಿ ದರಗಳನ್ನು (Fixed Deposits) ಪರಿಷ್ಕರಿಸಿದೆ. 75 ಮೂಲಾಂಕಗಳವರೆಗೆ (basis points) ಡೆಪಾಸಿಟ್ ರೇಟ್ ಹೆಚ್ಚಿಸಿದೆ. 49 ರಿಂದ 179 ದಿನಗಳವರೆಗಿನ ಅವಧಿಯ ಠೇವಣಿಗೆ ಗರಿಷ್ಠ ಏರಿಕೆ ಆಗಿದೆ. ಈ ಹೊಸ ಠೇವಣಿ ದರಗಳು 2024ರ ಮೇ 15ರಂದು ಜಾರಿಗೆ ಬರಲಿವೆ. ಎರಡು ಕೋಟಿ ರೂ ಒಳಗಿನ ಠೇವಣಿಗಳು ಹಾಗೂ ಎರಡು ಕೋಟಿ ರೂಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ದರ ಪರಿಷ್ಕರಿಸಲಾಗಿದೆ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಡೆಪಾಸಿಟ್ಗಳ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ದರ ಮಾತ್ರವೇ ಇಳಿಕೆ ಆಗಿರುವುದು. ಸಾಮಾನ್ಯ ಗ್ರಾಹಕರ ಠೇವಣಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.
ಎರಡು ಲಕ್ಷ ರೂವರೆಗಿನ ಎಸ್ಬಿಐ ಎಫ್ಡಿ ದರ
- 7ರಿಂದ 45 ದಿನ: ಶೇ. 3.5
- 46 ದಿನದಿಂದ 179 ದಿನ: ಶೇ. 5.5
- 180ರಿಂದ 210 ದಿನ: ಶೇ. 6
- 211ರಿಂದ 1 ವರ್ಷಕ್ಕಿಂತ ಕಡಿಮೆ: ಶೇ. 6.25
- ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ: ಶೇ. 6.8
- ಎರಡು ವರ್ಷದಿಂದ ಮೂರು ವರ್ಷದೊಳಗೆ: ಶೇ. 7
- ಮೂರು ವರ್ಷದಿಂದ ಐದು ವರ್ಷದೊಳಗೆ: ಶೇ. 6.75
- ಐದು ವರ್ಷದಿಂದ ಹತ್ತು ವರ್ಷ: ಶೇ. 6.5
ಇದನ್ನೂ ಓದಿ: ನಿಶ್ಚಿತ ಠೇವಣಿಯೋ, ಆವರ್ತಿತ ಠೇವಣಿಯೋ? ಯಾವುದು ನಿಮಗೆ ಸೂಕ್ತ? ಇಲ್ಲಿದೆ ವಿವರ
ಇಲ್ಲಿ ಎರಡರಿಂದ ಮೂರು ವರ್ಷದವರೆಗಿನ ಠೇವಣಿಗಳಿಗೆ ಗರಿಷ್ಠ ಬಡ್ಡಿದರ ಸಿಗುತ್ತದೆ. ಈ ಎಲ್ಲಾ ಠೇವಣಿಗಳಲ್ಲೂ ಹಿರಿಯ ನಾಗರಿಕರಿಗೆ ಶೇ. 0.50ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಉದಾಹರಣೆಗೆ, ಎರಡು ವರ್ಷದ ಠೇವಣಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ವರ್ಷಕ್ಕೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಾದರೆ ಇದೇ ಅವಧಿಗೆ ಶೇ. 7.50ರಷ್ಟು ಬಡ್ಡಿ ಸಿಗುತ್ತದೆ.
ಎರಡು ಕೋಟಿ ರೂಗಿಂತ ಹೆಚ್ಚಿನ ಠೇವಣಿಗಳಿಗೆ ಎಸ್ಬಿಐ ಕೊಡುವ ಬಡ್ಡಿ
- 7ರಿಂದ 45 ದಿನ: ಶೇ. 5.25
- 46ರಿಂದ 179 ದಿನ: ಶೇ. 6.25
- 180 ದಿನದಿಂದ 210 ದಿನ: ಶೇ. 6.6
- 211 ದಿನದಿಂದ ಒಂದು ವರ್ಷದೊಳಗೆ: ಶೇ. 6.75
- ಒಂದು ವರ್ಷದಿಂದ ಎರಡು ವರ್ಷದೊಳಗೆ: ಶೇ. 7
- ಎರಡು ವರ್ಷದಿಂದ ಮೂರು ವರ್ಷದೊಳಗೆ: ಶೇ. 7
- ಮೂರು ವರ್ಷದಿಂದ ಐದು ವರ್ಷದೊಳಗೆ: ಶೇ. 6.25
- ಐದು ವರ್ಷದಿಂದ ಹತ್ತು ವರ್ಷದವರೆಗೆ: ಶೇ. 6
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ